ಮುಂಬೈ:ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧರೊಬ್ಬರನ್ನು ಕರೊನಾ ಇರಬಹುದೆಂದು ಖಾಸಗಿ ಆಸ್ಪತ್ರೆಗೆ ಸೇರಿಸಿ ಶಂಕಿತ ಕರೊನಾ ಹೆಸರಲ್ಲಿ ಹೋಂ ಕ್ವಾರಂಟೈನ್​ಲ್ಲಿದ್ದ ಕುಟುಂಬಕ್ಕೆ ಆಸ್ಪತ್ರೆಯು ಆ ವೃದ್ಧನ ಚಿಕಿತ್ಸಾ ವೆಚ್ಚವೆಂದು ಒಟ್ಟಾರೆ 16 ಲಕ್ಷ ರೂ. ಬಿಲ್​ ಕಟ್ಟುವಂತೆ ಹೇಳಿದೆ. ಇದರಲ್ಲಿ ಕರೊನಾ ಚಿಕಿತ್ಸಾ ವೆಚ್ಚ 2.8 ಲಕ್ಷ ರೂ. ಸೇರಿದೆ. ದುರಾದೃಷ್ಟವಶಾತ್​ ಆ ವೃದ್ಧ ಕೂಡ ಬದುಕುಳಿದಿಲ್ಲ!
ಮೃತರು ಮುಂಬೈನ ಸಂತಾ ಕ್ರೂಜ್ ನಿವಾಸಿಯೊಬ್ಬರ ತಂದೆ. ಅನಾರೋಗ್ಯಕ್ಕೀಡಾಗಿದ್ದ 74 ವರ್ಷದ ತನ್ನ ತಂದೆಯನ್ನು ಕೋವಿಡ್​-19 ಸಂಬಂಧಿಸಿದ ಲಕ್ಷಣವಿದೆ ಎಂದು ನಗರದ ಖಾಸಗಿ ಆಸ್ಪತ್ರೆಗೆ ಇವರು ದಾಖಲಿಸಿದ್ದರು. ಬಳಿಕ ಕುಟುಂಬಸ್ಥರು ಹೋಂ ಕ್ವಾರಂಟೈನ್​ನಲ್ಲಿದ್ದರು. ‘ಆ ವೇಳೆ ತಂದೆಯ ಚಿಕಿತ್ಸೆ ಕುರಿತು ಮನೆಯಿಂದಲೇ ಇ-ಮೇಲ್​ ಮತ್ತು ಫೋನ್​ ಮೂಲಕ ನಾನು ಸಂವಹಿಸುತ್ತಿದ್ದೆ. ಆದರೂ ಬಿಲ್​ ಇಷ್ಟೊಂದು ಆಗಲಿದೆ ಎಂದು ಆಸ್ಪತ್ರೆಯವರು ಹೇಳಿರಲಿಲ್ಲ. ಇತ್ತ ತಂದೆಯೂ ಬದುಕಿಲ್ಲ. ಆದರೆ, 16 ಲಕ್ಷ ರೂ. ಬಿಲ್ ಕಟ್ಟಲು ಹೇಳಿದ್ದಾರೆ’ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿಮಾನವ ಕರುಳಿನಲ್ಲೂ ವೃದ್ಧಿಸುವ ಕರೊನಾ 19 ವೈರಾಣು
ಆಸ್ಪತ್ರೆಗೆ ತಂದೆಯನ್ನು ದಾಖಲಿಸುವ ಸಮಯದಲ್ಲಿ 60 ಸಾವಿರ ರೂ. ಪಾವತಿಸಿದ್ದೆ. ಒಂದು ದಿನದ ಬಳಿಕ ಆಸ್ಪತ್ರೆಯವರು ತಂದೆಗೆ ಡಯಾಲಿಸಿಸ್​ ಮತ್ತು ವೆಂಟಿಲೇಟರ್​ ಚಿಕಿತ್ಸೆಯ ಅವಶ್ಯಕತೆ ಇದೆ ಎಂದರು. ಇದಕ್ಕೆ ಇ-ಮೇಲ್​ ಮುಖಾಂತರ ಸಮ್ಮತಿ ಸೂಚಿಸಿದ್ದೆ. ನಾನು ಈ ಆಸ್ಪತ್ರೆಗೆ ಸೇರಿಸುವ ಎರಡು ದಿನದ ಮೊದಲೇ ತಂದೆಯ ರಕ್ತ ಪರೀಕ್ಷೆ ಮಾಡಿಸಿದ್ದೆ. ಅವರ ಕಿಡ್ನಿ ಕಾರ್ಯನಿರ್ವಹಣೆ ಚೆನ್ನಾಗಿದೆ ಎಂದು ವರದಿ ಬಂದಿತ್ತು. ಆದರೂ ಆರಂಭದಲ್ಲಿ ಚಿಕಿತ್ಸಾ ವೆಚ್ಚವೆಂದು ನಾನು 3.4 ಲಕ್ಷ ರೂ. ಬಿಲ್​ ಪಾವತಿಸಿದೆ. ಇದಾದ ಎರಡು ದಿನದ ಬಳಿಕ ಆಸ್ಪತ್ರೆಯವರು ಕರೆ ಮಾಡಿ ಮತ್ತೆ ಬಿಲ್​ ಕಟ್ಟಬೇಕು. ಇಲ್ಲವಾದಲ್ಲಿ ಚಿಕಿತ್ಸೆ ಕೊಡುವುದನ್ನು ನಿಲ್ಲಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ನನ್ನ ತಂದೆಯನ್ನು 15 ದಿನ ಐಸಿಯುನಲ್ಲಿಟ್ಟಿದ್ದರು. ಈ 15 ದಿನಕ್ಕೆ 16 ಲಕ್ಷ ರೂ. ಬಿಲ್​ ಮಾಡಿದ್ದಾರೆ. ಮಧ್ಯಮ ವರ್ಗದ ಜನರಿಗೆ ದಿನಕ್ಕೆ ಒಂದು ಲಕ್ಷ ರೂ. ಆಸ್ಪತ್ರೆ ಬಿಲ್​ ಪಾವತಿ ಅಸಾಧ್ಯ. ಆಸ್ಪತ್ರೆಯವರು ಕರೊನಾ ಹೆಸರಲ್ಲೂ ಬಿಲ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಂದೆ ಶವ ತಂದ ಆಂಬುಲೆನ್ಸ್ ಬಿಲ್​ 8,000 ರೂ. ಕೂಡ ಪಾವತಿಸಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.
ಔಷಧ ಮತ್ತು ಇತರ ವೆಚ್ಚವೆಂದು 8.6 ಲಕ್ಷ ರೂ., ಕರೊನಾ ಚಿಕಿತ್ಸಾ ವೆಚ್ಚವೆಂದು 2.8 ಲಕ್ಷ ರೂ. ಸೇರಿ ಒಟ್ಟಾರೆ 16 ಲಕ್ಷ ರೂ. ಬಿಲ್​ ಮಾಡಲಾಗಿದೆ. ಸರ್ಕಾರ ಚಿಕಿತ್ಸಾ ದರ ಮಿತಿಗೊಳಿಸಿದ್ದರೂ ಆಸ್ಪತ್ರೆಯವರು ಮಾತ್ರ ಇಷ್ಟಬಂದಂತೆ ವಿಧಿಸಿದ್ದಾರೆ. ತಂದೆ ಆಸ್ಪತ್ರೆಯಲ್ಲಿದ್ದಾಗ ನಮ್ಮ ಕುಟುಂಬ ಕ್ವಾರಂಟೈನ್​ನಲ್ಲಿತ್ತು. ಹಾಗಾಗಿ ನಾನು ಮನೆಯಿಂದ ಹೊರಬರಲಾಗುತ್ತಿರಲಿಲ್ಲ. ಆ ವೇಳೆ ಆಸ್ಪತ್ರೆಯವರು ತಂದೆಯ ಬಿಲ್ ಎಷ್ಟಾಗುತ್ತಿದೆ ಎಂದು ಮಾಹಿತಿಯನ್ನೂ ನೀಡಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿಸೈಕಲ್​ನಲ್ಲಿ ಬಂದು ಮಗುವನ್ನು ಅಪಹರಿಸಲು ಯತ್ನಿಸಿದ ಮಂಗ!
ಈ ಆರೋಪ ಕುರಿತು ಪ್ರತಿಕ್ರಿಯಿಸಿರುವ ಜುಹುವಿನ ನಾನಾವತಿ ಆಸ್ಪತ್ರೆ ನಿರ್ದೇಶಕ ಮನ್​ಪ್ರೀತ್ ಸೋಹಲ್​, ರೋಗಿಯನ್ನು ಮಾ.31ರಂದು ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಆದರೂ ಅವರಿಗೆ ವೈದ್ಯ ಸಿಬ್ಬಂದಿ ಗುಣಮಟ್ಟದ ಚಿಕಿತ್ಸೆ ನೀಡಿದರಾದರೂ ಫಲಿಸಲಿಲ್ಲ. ಆಸ್ಪತ್ರೆ ಶುಲ್ಕವನ್ನು ರೋಗಿಯ ಪುತ್ರ ಕೊನೆಯಲ್ಲಿ ಕಟ್ಟುವುದಾಗಿ ಹೇಳಿದ್ದರು. ಈಗ ಮೃತನ ಕುಟುಂಬಸ್ಥರು ಇಲ್ಲಸಲ್ಲದ ಆರೋಪಕ್ಕೆ ಕೋವಿಡ್​ ಅನ್ನು ಅಸ್ತ್ರವಾಗಿಸಿಕೊಂಡಿದ್ದಾರೆ. ರಾಜ್ಯದ ಸಾರ್ವಜನಿಕ ಆರೋಗ್ಯ ಇಲಾಖೆ ಇತ್ತೀಚೆಗೆ ಹೊರಡಿಸಿದ ಆದೇಶದಂತೆಯೇ ಚಿಕಿತ್ಸಾ ವೆಚ್ಚ ನಿಗಧಿ ಮಾಡಲಾಗಿದೆ ಎಂದಿದ್ದಾರೆ.
ಈ ಮೊದಲೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಗಿಯು ನಮ್ಮ ಆಸ್ಪತ್ರೆಗೆ ಬಂದಾಗ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಇವರನ್ನು ವೆಂಟಿಲೇಟರ್​ನಲ್ಲಿ ಇಟ್ಟಿದ್ದೆವು. ಕಿಡ್ನಿ ಕೂಡ ವಿಫಲವಾಗಿದ್ದರಿಂದ ಮೂತ್ರಪಿಂಡದ ಬದಲಿ ಚಿಕಿತ್ಸೆಯನ್ನೂ ಒಂದು ವಾರ ನೀಡಲಾಗಿತ್ತು. ಅತ್ಯಾಧುನಿಕ ಸೌಲಭ್ಯವುಳ್ಳ ಎಲ್ಲ ಆಸ್ಪತ್ರೆಯಲ್ಲೂ ಇಂತಹ ಚಿಕಿತ್ಸಾ ವೆಚ್ಚ ದಿನಕ್ಕೆ 1 ಲಕ್ಷ ರೂ. ದಾಟುತ್ತದೆ. ನಾವು ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ ಎಂದು ವಿವರಿಸಿದ್ದಾರೆ.(ಏಜೆನ್ಸೀಸ್)
ಇದನ್ನೂ ಓದಿ10 ಲಕ್ಷ ಡಾಲರ್​ ಬೋನಸ್ ಸುದ್ದಿ ಕೇಳಿ ಆಸ್ಪತ್ರೆ ಸಿಬ್ಬಂದಿ ಖುಷಿ ಪಟ್ರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 8 =
Remember me
