ಅಗರ್ತಲ :ತೃಣಮೂಲ ಕಾಂಗ್ರೆಸ್​(ಟಿಎಂಸಿ)ನ ಜನರಲ್ ಸೆಕ್ರೆಟರಿ ಅಭಿಷೇಕ್​ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬ್ರತ್ಯ ಬಸು, ಸಂಸದೆ ಡೋಲಾ ಸೇನ್, ಪಕ್ಷದ ವಕ್ತಾರ ಕುನಾಲ್​ ಘೋಷ್​ ಮತ್ತು ಇತರರ ಮೇಲೆ ತ್ರಿಪುರ ಪೊಲೀಸರು ಕೇಸು ದಾಖಲಿಸಿದ್ದಾರೆ. ಕರ್ತವ್ಯನಿರತ ಪೊಲೀಸರೊಂದಿಗೆ ದುರ್ವರ್ತನೆ ನಡೆಸಿದ ಆರೋಪದ ಮೇಲೆ, ಐಪಿಸಿ ಸೆಕ್ಷನ್ 186 ರಡಿ ಸುಯೋ ಮೋಟೋ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಖೋವಾಯಿ ಜಿಲ್ಲೆ ಎಸ್ಪಿ ಕಿರಣ್​ ಕುಮಾರ್​ ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೆ ಢಲಾಯಿ ಜಿಲ್ಲೆಯ ಅಂಬಸ್ಸಾದಿಂದ ಅಗರ್ತಲಕ್ಕೆ ಹಿಂತಿರುಗುತ್ತಿದ್ದ ಟಿಎಂಸಿ ಸದಸ್ಯರು ಮತ್ತು ಆಡಳಿತಾರೂಢ ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿತ್ತು. 14 ಟಿಎಂಸಿ ಕಾರ್ಯಕರ್ತರನ್ನು ಕರೊನಾ ನಿಯಮ ಉಲ್ಲಂಘನೆ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡಚಣೆ ಮಾಡಿದ್ದಕ್ಕಾಗಿ ಖೊವಾಯಿ ಜಿಲ್ಲಾ ಪೊಲೀಸರು ಬಂಧಿಸಿದ್ದರು. ಬಂಧಿತರಿಗೆ ಸ್ಥಳೀಯ ಕೋರ್ಟ್​ ಅದೇ ದಿನ ಮಧ್ಯಂತರ ಜಾಮೀನು ನೀಡಿ ಬಿಡುಗಡೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕೊಲ್ಕತದಿಂದ ತ್ರಿಪುರಕ್ಕೆ ಪ್ರಯಾಣ ಬೆಳೆಸಿದ್ದ ಅಭಿಷೇಕ್​ ಬ್ಯಾನರ್ಜಿ, ಜಾಮೀನು ಸಿಕ್ಕ ತಮ್ಮ ಕಾರ್ಯಕರ್ತರೊಂದಿಗೆ ಅದೇ ದಿನ ವಾಪಸಾಗಿದ್ದರು ಎನ್ನಲಾಗಿದೆ.(ಏಜೆನ್ಸೀಸ್)
ಮುಖ್ಯ ಕಾರ್ಯದರ್ಶಿ ಹಲ್ಲೆ ಆರೋಪ: ಸಿಎಂ ಕೇಜ್ರಿವಾಲ್, ಡಿಸಿಎಂ ಸಿಸೋಡಿಯ, 9 ಶಾಸಕರು ಡಿಸ್ಚಾರ್ಜ್

ಟಿ20 ವರ್ಲ್ಡ್​ ಕಪ್​ ನಂತರ ಟೀಂ ಇಂಡಿಯಾಗೆ ರವಿ ಶಾಸ್ತ್ರಿ ಗುಡ್​ಬೈ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 9 =
Remember me
