ಕೊಚ್ಚಿ:ಪತ್ನಿಯನ್ನು ಕಚ್ಚಿದ್ದಕ್ಕೆ ನೆರೆಮನೆಯವರ ಸಾಕು ನಾಯಿಯನ್ನು ಹೊಡೆದು ಕೊಂದಿದ್ದಲ್ಲದೆ, ಮಾಲಕಿಯ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಕೇರಳದ ಅಬಕಾರಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಅಧಿಕಾರಿಯನ್ನು ನೆಡುಮಾಂಗಡ ಮೂಲದ ಪ್ರಶಾಂತ್​ ಎಂದು ಗುರುತಿಸಲಾಗಿದೆ. ಕಾರ್ಯಕ್ರಮವೊಂದಕ್ಕೆ ನೆರೆಮನೆಯವರನ್ನು ಕರೆಯಲೆಂದು ಪ್ರಶಾಂತ್​ ಪತ್ನಿ ರಾಜಲಕ್ಷ್ಮೀ ತೆರಳಿದ್ದಾಗ ಸಾಕು ನಾಯಿ ದಾಳಿ ನಡೆಸಿ, ಅವರ ಎರಡೂ ಕೈಗಳನ್ನು ಕಚ್ಚಿತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನೆರೆಮನೆಗೆ ತೆರಳಿದ ಪ್ರಶಾಂತ್​, ಕಬ್ಬಿಣದ ಸಲಾಕೆಯಿಂದ ಹೊಡೆದು ನಾಯಿಯನ್ನು ಕೊಂದು ಹಾಕಿದರು.
ಇದನ್ನೂ ಓದಿ:ವ್ಯಕ್ತಿ ಬಗ್ಗೆ ಲಘುವಾಗಿ ಮಾತನಾಡುವುದು ಸುಲಭ-ಜೀರ್ಣಿಸಿಕೊಳ್ಳುವುದು ಕಷ್ಟ; ಸುಮಲತಾಗೆ ಟಾಂಗ್ ಕೊಟ್ಟ ಮಾಜಿ ಪ್ರಧಾನಿ
ನಾಯಿ ಹತ್ಯೆಯ ಬಳಿಕ ಮಾಲಕಿ ಆದಿತ್ಯ ರಶ್ಮಿ ಅವರ ಮೇಲೂ ಪ್ರಶಾಂತ್​ ಹಲ್ಲೆ ಮಾಡಿದ್ದಾರೆ. ಈ ವೇಳೆ ರಶ್ಮಿ ಅವರ ಹಲ್ಲು ಮುರಿದಿದೆ. ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಈ ಘಟನೆ ಏಪ್ರಿಲ್​ 20ರ ಮಧ್ಯಾಹ್ನ 2.30ರ ಸುಮಾರಿಗೆ ಸಂಭವಿಸಿದ್ದು, ಇದೀಗ ಪ್ರಶಾಂತ್​ ವಿರುದ್ಧ ರಶ್ಮಿ ಪ್ರಕರಣ ದಾಖಲಾಗಿದೆ.
ಪ್ರಶಾಂತ್ ಅಬಕಾರಿ ಇಲಾಖೆಯಲ್ಲಿ ಪ್ರೊಬೇಷನ್​​ನಲ್ಲಿದ್ದಾರೆ. ಪ್ರಶಾಂತ್ ವಿರುದ್ಧ ಶ್ವಾನವನ್ನು ಕೊಂದು, ಮಹಿಳೆಗೆ ಕಿರುಕುಳ ನೀಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಶಾಂತ್​ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಹಾಲಿನ ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? ಜನರಿಗಾಗಿ ಮಾಹಿತಿ ನೀಡಿದ FSSAI

ಚುನಾವಣೆ ಫಲಿತಾಂಶ ಬಳಿಕ ಸಿಎಂ ಯಾರಾಗಬೇಕೆಂದು ಬಿಜೆಪಿ ತೀರ್ಮಾನ: ಸಚಿವ ಅಶ್ವತ್ಥ ನಾರಾಯಣ ಅಭಿಮತ

ಅವರು ಊಟದ ವಿಚಾರದಲ್ಲಿ ಮಕ್ಕಳಂತೆ ಹಠ ಮಾಡ್ತಾರೆ… ಬರೀ ಮೊಸರನ್ನ ತಿಂತಾರೆ; ಅನಿತಾ ಕುಮಾರಸ್ವಾಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
