ಹೈದರಾಬಾದ್:ಪ್ರಕರಣವೊಂದರ ಇತ್ಯರ್ಥಕ್ಕಾಗಿ ಕಂಪನಿ ಯೊಂದರಿಂದ ಐದು ಕೋಟಿ ರೂಪಾಯಿ ಲಂಚ ಕೇಳಿದ ಆರೋಪದ ಮೇಲೆ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್​ಟಿ) ತೆರಿಗೆಗಳ್ಳತನ ನಿಗ್ರಹ ದಳದ ಇಬ್ಬರು ಹಿಂದಿನ ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮೊಕದ್ದಮೆ ದಾಖಲಿಸಿದೆ.
ಜಿಎಸ್​ಟಿ ಇಲಾಖೆಯ ತೆರಿಗೆಗಳ್ಳತನ ನಿಗ್ರಹ ದಳದ ಮಾಜಿ ಡೆಪ್ಯುಟಿ ಕಮಿಷನರ್ ಸುಧಾರಾಣಿ ಚಿಲಾಕ ಮತ್ತು ಸೂಪರಿಂಟೆಂಡೆಂಟ್ ಶ್ರೀನಿವಾಸ ಗಾಂಧಿ ಬೊಲ್ಲಿನೇನಿ ಆರೋಪಿತ ಅಧಿಕಾರಿಗಳು. ಹೈದರಾಬಾದ್​ನಲ್ಲಿ ನಿಯುಕ್ತರಾಗಿದ್ದ ಈ ಇಬ್ಬರು 2019 ಏಪ್ರಿಲ್ 15ರಂದು ಇನ್​ಫಿನಿಟಿ ಮೆಟಲ್ ಪ್ರಾಡಕ್ಟ್ಸ್​ ಎಂಬ ಕಂಪನಿಯಿಂದ 5 ಕೋಟಿ ರೂ.ಲಂಚ ಕೇಳಿದ್ದು 10 ಲಕ್ಷ ರೂ. ಪಡೆದಿದ್ದರು. ತೆರಿಗೆ ಕಟ್ಟದಿರುವ ವಿಚಾರದಲ್ಲಿ ಆ ಕಂಪನಿ ಮೊಕದ್ದಮೆ ಎದುರಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಪುರಾವೆಗಳನ್ನು ಕಲೆ ಹಾಕಿದ ಮೇಲೆ ಅವರನ್ನು ಬಂಧಿಸಲಾಗಿತ್ತು.
ಬೊಲ್ಲಿನೇನಿ ಗಾಂಧಿ ಜಾರಿ ನಿರ್ದೇಶನಾಲಯದಲ್ಲಿ ಇದ್ದಾಗ ಹೈದರಾಬಾದ್​ನ ಮುಸದ್ದಿಲಾಲ್ ಜ್ಯುವೆಲರ್ಸ್ ವಿರುದ್ಧದ 100 ಕೋಟಿ ನೋಟು ಅಮಾನ್ಯೀಕರಣ ವಂಚನೆ ಕೇಸ್ ಹಾಗೂ ಕರ್ನಾಟಕದ ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣ ಸಹಿತ ಹಲವು ಪ್ರಕರಣಗಳ ತನಿಖೆ ನಡೆಸಿದ್ದರು.
ಈ ಫೋಟೋದಲ್ಲಿ ಹತ್ತು ವ್ಯತ್ಯಾಸ ಗುರುತಿಸಬಲ್ಲಿರಾ? ಅಮೆರಿಕ ಗುಪ್ತಚರ ಸಂಸ್ಥೆ ಹಾಕಿದ ಸವಾಲಿದು….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
