ಮುಂಬೈ:ಮಿಸ್ಟರ್​ ಇಂಡಿಯ ಪ್ರಶಸ್ತಿ ವಿಜೇತ ಬಾಡಿ ಬಿಲ್ಡರ್​ ಮನೋಜ್​ ಪಾಟೀಲ್​ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ನಟ ಸಾಹಿಲ್​ ಖಾನ್​ ಮತ್ತು ಇತರ ಮೂವರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಾಟೀಲ್​ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪ ಇದಾಗಿದೆ.
ಪಾಟೀಲ್​ ಅವರು ಗುರುವಾರ ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಮುಂಬೈನ ಕೂಪರ್​ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಸಾವಿಗೆ ನಟ ಸಾಹಿಲ್‌ ಖಾನ್‌ ಅವರೇ ಕಾರಣ ಎಂದು ಪಾಟೀಲ್​ ನೋಟ್‌ನಲ್ಲಿ ಬರೆದಿಟ್ಟಿದ್ದರು. ಅವರ ಮ್ಯಾನೇಜರ್​ ಕೂಡ ನಟ ಸಾಹಿಲ್​ ಖಾನ್​ರಿಂದ ಕಿರುಕುಳ ಅನುಭವಿಸಿ, ಪಾಟೀಲ್​ ಈ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಕೈಯಲ್ಲಿ ಮಚ್ಚು ಹಿಡಿದು, ಗ್ರಾಪಂ ಸದಸ್ಯೆಯನ್ನ ಹೊತ್ತೊಯ್ದ ಚಿಕ್ಕಪ್ಪ! ಕತ್ತಲಲ್ಲಿ ನಡೆಯಿತು ಘೋರ ದುರಂತ
ಮಿಸ್ಟರ್ ಇಂಡಿಯಾ ಆದ ನಂತರ ಮನೋಜ್​ ಪಾಟೀಲ್​ ಮಿಸ್ಟರ್​ ಒಲಂಪಿಯಾದಲ್ಲಿ ಭಾಗವಹಿಸಲು ಸಜ್ಜಾಗುತ್ತಿದ್ದು, ಸಾಹಿಲ್ ಖಾನ್ ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸಿದ್ದಾರೆ. ಆದ್ದರಿಂದ ಸ್ಪರ್ಧೆಯಲ್ಲಿ ತಾವು ಭಾಗವಹಿಸದಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಪಾಟೀಲ್ ಈ ಮುನ್ನ ಆರೋಪಿಸಿದ್ದರು ಎನ್ನಲಾಗಿದೆ.(ಏಜೆನ್ಸೀಸ್)
ಸಿಡಿ ಪ್ರಕರಣ: ಅಂತಿಮ ವರದಿ ಸಲ್ಲಿಸದಂತೆ ಹೈಕೋರ್ಟ್​ ಸೂಚನೆ

ಮೋದಿ ಜನ್ಮದಿನಕ್ಕೆ ‘ರಾಷ್ಟ್ರೀಯ ನಿರುದ್ಯೋಗ ದಿನ’ದ ಪ್ರತ್ಯುತ್ತರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
