ಮುಂಬೈ:ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ಕಚೇರಿಯ ಕಟ್ಟಡವನ್ನು ಬೃಹನ್ಮುಂಬೈ ಪಾಲಿಕೆಯವರು (ಬಿಎಂಪಿ) ಧ್ವಂಸ ಮಾಡಲು ಯತ್ನಿಸಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಕಂಗನಾ ನಂತರ ಇದೀಗ ಮತ್ತೊಬ್ಬ ಬಾಲಿವುಡ್​ ನಟನ ವಿರುದ್ಧ ಬಿಎಂಪಿ ಮೊಕದ್ದಮೆ ದಾಖಲಿಸಿದೆ. ಲಾಕ್​ಡೌನ್​ ಸಮಯದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿ ರಿಯಲ್​ ಹೀರೋ ಎನಿಸಿಕೊಂಡ ನಟ ಸೋನು ಸೂದ್​ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:‘ಅಮ್ಮ’ನ ಆಪ್ತೆಗೆ ಜ. 27ರಂದು ಬಿಡುಗಡೆ ಭಾಗ್ಯ?; ವಕೀಲರಿಂದ ಹೊರಬಿತ್ತು ಮಾಹಿತಿ..
ಸೋನು ಸೂದ್​ ಅವರು ವಸತಿ ಕಟ್ಟಡವನ್ನು ಅಕ್ರಮವಾಗಿ ಹೋಟೆಲ್​ ಆಗಿ ಪರಿವರ್ತಿಸುತ್ತಿದ್ದಾರೆ ಎನ್ನುವ ಆರೋಪವನ್ನು ಬಿಎಂಪಿ ಮಾಡಿದೆ. ಆದರೆ ಈ ಆರೋಪವನ್ನು ಸೋನು ಸೂದ್​ ಅವರು ತಳ್ಳಿ ಹಾಕಿದ್ದಾರೆ. ಮುಂಬೈನ ಜುಹುನಲ್ಲಿರುವ ಆರು ಮಹಡಿಯ ಶಕ್ತಿ ಸಾಗರ್​ ನಿವಾಸವನ್ನು ಹೋಟೆಲ್​ ಆಗಿ ಪರವರ್ತಿಸಲಾಗಿದೆ ಎನ್ನುವುದು ಬಿಎಂಪಿ ವಾದ.
ಇದನ್ನೂ ಓದಿ:‘ನಾನು ಸಂಸತ್ತಿನಲ್ಲಿರಬೇಕಿತ್ತು’ ರಾಜಕೀಯ ಸೇರುವ ಬಯಕೆ ಬಿಚ್ಚಿಟ್ಟ ಸೋನಿಯಾ ಗಾಂಧಿ ಅಳಿಯ
ಕಟ್ಟಡದ ಪರಿವರ್ತನೆಗೆ ತಾವು ಅಗತ್ಯ ಅನುಮತಿ ಪಡೆದಿರುವುದಾಗಿ ಸೋನು ಸೂದ್​ ಹೇಳಿದ್ದಾರೆ. ಮಹಾರಾಷ್ಟ್ರದ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರದ (ಎಂಸಿಜಡ್​ಎಂಎ) ಅನುಮತಿ ಮಾತ್ರ ಬಾಕಿಯಿದೆ ಎಂದು ಅವರು ತಿಳಿಸಿದ್ದಾರೆ. ಮಹಾರಾಷ್ಟ್ರ ಪ್ರದೇಶ ಮತ್ತು ಯೋಜನಾ ಕಾನೂನಿನ ಅನ್ವಯ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಬಿಎಂಪಿ ಸೂಚಿಸಿದೆ. ಬಿಎಂಪಿ ನೋಟಿಸ್​ಗೆ​ ತಡೆ ತರಲು ನಟ ಕಳೆದ ವರ್ಷ ಅಕ್ಟೋಬರ್​ನಲ್ಲಿ ಸಿಟಿ ಸಿವಿಲ್​ ಕೋರ್ಟ್​ ಮೊರೆ ಹೋಗಿದ್ದರು. ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಬಿಎಂಪಿಯಿಂದ ಎಲ್ಲ ಅನುಮತಿ ಪಡೆಯಲಾಗಿದೆ. ಆದರೆ ಕರೊನಾ ಕಾರಣದಿಂದಾಗಿ ಕರಾವಳಿ ಪ್ರಾಧಿಕಾರದ ಅನುಮೋದನೆ ಮಾತ್ರ ಸಿಕ್ಕಿಲ್ಲ ಎಂದು ಅವರು ಸ್ಪಷ್ಪಪಡಿಸಿದ್ದಾರೆ. ನೋಟಿಸ್​ ವಿರುದ್ಧ ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)
ಕ್ಲಾಸ್​ಮೇಟ್​ ನಂಬಿ ಚಾಟಿಂಗ್​ ಮಾಡುತ್ತಿದ್ದ ಯುವತಿಗೆ ವರ್ಷದ ಬಳಿಕ ಕಾದಿತ್ತು ಬಿಗ್​ ಶಾಕ್​!

ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:ten + 11 =
Remember me
