ನವದೆಹಲಿ: ತಪಾಸಣೆ ಹಾಗೂ ಕ್ವಾರಂಟೈನ್​ ವಿಧಿಸಲು ಆಸ್ಪತ್ರೆಗೆ ಕರೆತಂದಾಗ ವಿಕೃತಿ ಮೆರೆದಿದ್ದ ತಬ್ಲಿಘಿಗಳ ವಿರುದ್ಧ ಕಾನೂನು ಕ್ರಮಕ್ಕೆ ದೆಹಲಿ ಪೊಲಿಸರು ಮುಂದಾಗಿದ್ದಾರೆ.
ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದವರನ್ನು ಕರೊನಾ ಸೋಂಕಿನ ತಪಾಸಣೆ ಹಾಗೂ ಕ್ವಾರಂಟೈನ್​ ವಿಧಿಸಲು ಇಲ್ಲಿನ ಲೋಕನಾಯಕ ಜಯಪ್ರಕಾಶ್​ ನಾರಾಯಣ ಆಸ್ಪತ್ರೆಗೆ ಕರೆತರಲಾಗಿತ್ತು. ಆಗ ಕೆಲ ತಬ್ಲಿಘಿಗಳು ವಿಕೃತಿ ಮೆರೆದಿದ್ದರು. ವಾರ್ಡ್​ನಲ್ಲಿ ಉಗಿದಿದ್ದಲ್ಲದೇ, ಕ್ವಾರಂಟೈನ್​ ವಿಧಿಸಲಾಗಿದ್ದ ರೂಮ್​ ಎದುರು ಮಲ ವಿಸರ್ಜನೆ ಮಾಡಿದ್ದರು.
ಈ ಎರಡು ಪ್ರಕರಣಗಳಲ್ಲಿ ಸೋಂಕು ವ್ಯಾಪಿಸಿದ ಆರೋಪದಲ್ಲಿ ಎರಡು ಮಿನಲ್​ ಕೇಸ್​ಗಳನ್ನು ದಾಖಲು ಮಾಡಲಾಗಿದೆ ಎಂದು ದೆಹಲಿಯ ಹಿರಿಯ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೆಹಲಿಯ ನರೇಲಾ ಕ್ವಾರಂಟೈನ್​ ಕೇಂದ್ರದ ಕೊಠಡಿಯ ಎದುರು ಮಲ ವಿಸರ್ಜಿಸಿದ ಆರೋಪದಲ್ಲಿ ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯ ನಿವಾಸಿಗಳಾದ ಇಬ್ಬರು ಜಮಾತ್​ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಎಲ್​ಎನ್​ ಜೆಪಿ ಆಸ್ಪತ್ರೆಯ ವಾರ್ಡ್​ನಲ್ಲಿ ಉಗುಳಿದ ಆರೋಪದಲ್ಲಿ ಕೆಲವರ ವಿರುದ್ಧ ಕೇಸ್​ ಮಾಡಲಾಗಿದೆ. ತಾವಿದ್ದ ಮೂರನೇ ಮಹಡಿಯಿಂದ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯತ್ತ ಉಗಿಯುತ್ತಿದ್ದರು ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
ಸಾಂಕ್ರಾಮಿಕ ಕಾಯಿಲೆ ತಡೆ ಕಾಯ್ದೆ ಹಾಗೂ ಭಾರತೀಯ ಸಂಹಿತೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ದೇಶದಲ್ಲಿ ಈವರೆಗೆ ವರದಿಯಾಗಿರುವ ಸೋಂಕಿತ ಪ್ರಕರಣಗಳಲ್ಲಿ ಶೇ.30ಕ್ಕೂ ಅಧಿಕ ಪ್ರಕರಣಗಳು ತಬ್ಲಿಘಿ ಜಮಾತ್​ನೊಂದಿಗೆ ನಂಟು ಹೊಂವೆ ಹಾಗೂ 17ಕ್ಕೂ ಅಧಿಕ ರಾಜ್ಯಗಳಿಗೆ ಜಮಾತ್​ ಸದಸ್ಯರಿಂದಲೇ ಸೋಂಕು ಹರಡಿದೆ. (ಏಜೆನ್ಸೀಸ್)
https://www.vijayavani.net/woman-whose-skin-is-so-sensitive-to-sunlight-reveals-people-called-her-a-zombie-after-part-of-her-nose-and-lip-were-removed/
ಹೃದ್ಯ ವಿಡಿಯೋಕ್ಕೆ ನೆಟ್ಟಿಗರು ಫಿದಾ: COVID19 ಸೋಂಕಿನಿಂದ ಪಾರಾದ 4 ತಿಂಗಳ ಶಿಶುವನ್ನು ವೆಂಟಿಲೇಟರ್​ನಿಂದ ಹೊರ ತೆಗೆದ ಸಂದರ್ಭವದು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
