ಮುಂಬೈ:ತನ್ನ ಪೋಷಕರೊಂದಿಗೆ ಫೈ-ಸ್ಟಾರ್​ ಹೋಟೆಲ್​ಗೆ ಆಗಮಿಸಿದ್ದ ಏಳು ವರ್ಷದ ಮಗುವಿನ ಮೇಲೆ ವೈಟರ್ ಬಿಸಿ ಟೀ​ ಚೆಲ್ಲಿದ ಪರಿಣಾಮ ಮಗುವಿಗೆ ಸುಟ್ಟ ಗಾಯಗಳಾಗಿದ್ದು, ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಇದೀಗ ಹೋಟೆಲ್​ನ ವೈಟರ್​ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಾರಿಡಾರ್ ಸುತ್ತಾಡಿ ಕಸಗೂಡಿಸಿದ ಡಿಸಿ ಫೌಜಿಯಾ ತರನ್ನುಮ್ : ಸಿಬ್ಬಂದಿ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಾಥ್
ಎಫ್ಐಆರ್ ಪ್ರಕಾರ, ಸೆಪ್ಟೆಂಬರ್ 29 ರಂದು ಬೆಳಗ್ಗೆ 9:30ಕ್ಕೆ, ಗುರ್ಗಾಂವ್ ಮೂಲದ ನಿಶಾಂತ್ ಜೈನ್ (50) ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಜೆ.ಡಬ್ಲ್ಯೂನಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಉಪಹಾರಕ್ಕಾಗಿ ಆಗಮಿಸಿದ್ದರು. ಈ ವೇಳೆ ಮ್ಯಾರಿಯಟ್ ಹೋಟೆಲ್‌ನಲ್ಲಿ ಸೆಪ್ಟೆಂಬರ್ 24 ರಂದು ರೂಂ ಅನ್ನು ಕಾಯ್ದಿರಿಸಿದ್ದರು.
ಮೊನಾಲಿಸಾ ಬಸುಮತಿ ಎಂಬ ವೈಟರ್​ ಬಿಸಿ ಟೀ ಕೆಟಲ್ ಅನ್ನು ಹೊತ್ತೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ಮೈರಾಗೆ ಡಿಕ್ಕಿ ಹೊಡೆದಿದ್ದಾರೆ. ಕೂಡಲೇ ಅವರ ಕೈಯಲ್ಲಿದ್ದ ಟೀ ಬಾಲಕಿಯ ಎಡಗೈ ಮೇಲೆ ಚೆಲ್ಲಿದೆ. ಇದರಿಂದಾಗಿ ಆಕೆಗೆ ಸುಟ್ಟ ಗಾಯಗಳಾಗಿದೆ. ತೀವ್ರ ನೋವಿನಿಂದ ಅಳಲು ಪ್ರಾರಂಭಿಸಿದ ಮೈರಾಳನ್ನು ವೈಟರ್​ ಬಾಸುಮತಿ, ಯಾರಿಗೂ ತಿಳಿಸದಂತೆ ಸುಮ್ಮನಿರುವಂತೆ ಕೋರಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಇದನ್ನೂ ಓದಿ:ಪರೋಕ್ಷವಾಗಿ ಕೂಡ ಕೇಂದ್ರ ಸರ್ಕಾರ ರಾಜ್ಯವನ್ನು ಬೆಂಬಲಿಸುತ್ತಿದೆ ಎಂದ ಬಿ.ವೈ. ರಾಘವೇಂದ್ರ
ಘಟನೆಯ ಬಗ್ಗೆ ಅರಿತ ಮಗುವಿನ ತಂದೆ ಜೈನ್, ಮಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು, ಸುಟ್ಟಗಾಯಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯ ಕುಟುಂಬವು ಸಹರ್ ಪೊಲೀಸ್ ಠಾಣೆಯಲ್ಲಿ ವೈಟರ್​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ,(ಏಜೆನ್ಸೀಸ್).
ಲಾರಿ ಮತ್ತು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಮೂವರು ಯುವಕರು ದುರ್ಮರಣ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:12 − 12 =
Remember me
