ಇಂದೋರ್:ಹೊಸ ರುಚಿ ಸವಿಯಲೆಂದು ಹೊಟೇಲ್​ಗೆ ಹೋದ ಗ್ರಾಹಕ ತೃಪ್ತಿಯಾಗಿ ಹೊರಬರಬೇಕು. ಗ್ರಾಹಕನಾದವನು ಹೊಟೇಲ್​ನ ಆಹಾರದಲ್ಲಿ ಶುಚಿಗೆ ಹೆಚ್ಚು ಮಹತ್ವ ಕೊಡುತ್ತೇನೆ. ಹೀಗಿರುವಾಗ ಗ್ರಾಹಕ ಏನು ಆರ್ಡರ್ ಮಾಡಿರುತ್ತಾನೋ ಅದನ್ನೇ ಕೊಡಬೇಕು. ಇಲ್ಲಿ ಎಡವಟ್ಟಾದರೂ ಗ್ರಾಹಕ ಅಸಮಾಧಾನವಾಗುವುದ ಸಹಜ. ಆರ್ಡರ್​ ಮಾಡಿದ ಆಹಾರ ತಡವಾಗಿ ಬಂತು, ರುಚಿ ಚೆನ್ನಾಗಿರಲಿಲ್ಲ, ಸಪ್ಲಯರ್ ಸರಿಯಾಗಿ ಸ್ಪಂದಿಸಲಿಲ್ಲ ಎಂಬೆಲ್ಲಾ ದೂರುಗಳನ್ನು ಹೊಟೇಲ್ ಮಾಲಿಕರು ವಿವಿಧ ಸಂದರ್ಭಗಳಲ್ಲಿ ಸ್ವೀಕರಿಸಬೇಕಾಗಿ ಬರುತ್ತವೆ.
ಇದೀಗ ಇಂದೋರ್​ನ ವಿಜಯನಗರ ಹೊಟೇಲ್ ಮಾಲೀಕನಿಗೆ ಇಲ್ಲಿನ ಪೊಲೀಸರು ನೋಟೀಸ್ ಒಂದನ್ನು ಕಳುಹಿಸಿದ್ದಾರೆ. ಗ್ರಾಹಕ ಆಕಾಶ್ ದುಬೆ ಎಂಬಾತ ನೀಡಿದ ದೂರಿನ ಮೇರೆಗೆ ಹೊಟೇಲ್ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಕಾಶ್ ದುಬೆ ವಿಜಯನಗರದ ರೆಸ್ಟೋರೆಂಟ್ ಒಂದಕ್ಕೆ ತೆರಳಿ ವೆಬ್ ಬಿರಿಯಾನಿ ಆರ್ಡರ್ ಮಾಡಿದ್ದ. ಅದರಂತೆ ಸಪ್ಲಯರ್ ಬಿರಿಯಾನಿ ತಂದಿಟ್ಟಿದ್ದಾನೆ. ಆದರೆ ಎಡವಟ್ಟಾಗಿರುವುದು ಇಲ್ಲೇ… ಆರ್ಡರ್ ಮಾಡಿದ್ದ ವೆಜ್ ಬಿರಿಯಾನಿಯಲ್ಲಿ ಮೂಳೆಯೊಂದು ಸೇರಿಕೊಂಡಿತ್ತು. ವೆಜ್ ಬಿರಿಯಾನಿಯಲ್ಲಿ ಮೂಳೆ ಸಿಗಲು ಹೇಗೆ ಸಾಧ್ಯ? ಇದು ಆಕಾಶ್​ ದುಬೆ ಕೋಪಕ್ಕೆ ಕಾರಣವಾಗಿದೆ.
ವೆಜ್ ಬಿರಿಯಾನಿಯಲ್ಲಿ ಮೂಳೆ ಸಿಕ್ಕಿದ ಕಾರಣದಿಂದ ಕೋಪಗೊಂಡ ಆಕಾಶ ದುಬೆ ನೇರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಸೆಕ್ಷನ್ 298ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೊಟೇಲ್ ಮಾಲೀಕನಿಗೆ ನೋಟೀಸ್ ಕಳುಹಿಸಿದ್ದಾರೆ.
ಕೊನೆಗೆ ಹೊಟೇಲ್​ನ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಮಾಡಿದ ಎಡವಟ್ಟಿನ ಬಗ್ಗೆ ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ದೂರ ದಾಖಲಾದ ಹಿನ್ನೆಲೆಯಲ್ಲಿ ಹೊಟೇಲ್ ಮ್ಯಾನೇಜರ್​ನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಇದಾದ ಬಳಿಕ ರೆಸ್ಟೋರೆಂಟ್ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಸಂಪತ್ ಉಪಾಧ್ಯಾಯ ಹೇಳಿರುವುದು ವರದಿಯಾಗಿದೆ.(ಏಜೆನ್ಸೀಸ್)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − 5 =
Remember me
