ನವದೆಹಲಿ:ಜ್ಞಾನವಾಪಿ ಮಸೀದಿಯಲ್ಲಿರುವ ದೇವರ ವಿಗ್ರಹದ ಆರಾಧನೆಗೆ ಅವಕಾಶ ನೀಡಬೇಕು ಎಂದು ಕೋರಿ ಐವರು ಹಿಂದು ಮಹಿಳೆಯರು ವಾರಾಣಸಿ ಸಿವಿಲ್ ಜಡ್ಜ್ (ಸೀನಿಯರ್ ಡಿವಿಷನ್) ಕೋರ್ಟ್​ನಲ್ಲಿದ್ದ ಅರ್ಜಿಯನ್ನು ವಾರಾಣಸಿ ಜಿಲ್ಲಾ ಕೋರ್ಟ್​ಗೆ ವರ್ಗಾವಣೆ ಮಾಡುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ನೀಡಿದೆ. ಈ ಅರ್ಜಿ ವಿರುದ್ಧ ಜ್ಞಾನವಾಪಿ ಮಸೀದಿ ಕಮಿಟಿ ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ನ್ಯಾಯಪೀಠ, ಈ ಪ್ರಕರಣ ಸಂಕೀರ್ಣವಾದುದು. ಇದರ ವಿಚಾರಣೆಗೆ ಹಿರಿಯ ಮತ್ತು ಪರಿಣತ ನ್ಯಾಯಾಂಗ ಅಧಿಕಾರಿ ಅವಶ್ಯಕತೆ ಇದೆ. ಹೀಗಾಗಿ ಜಿಲ್ಲಾ ಕೋರ್ಟ್​ಗೆ
ಇದನ್ನು ವರ್ಗಾಯಿಸಬೇಕು ಎಂದು ನಿರ್ದೇಶನ ನೀಡಿತು. ಈ ಮಧ್ಯೆ, ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ವಿವಾದದ ಎಲ್ಲ ಅರ್ಜಿಗಳ ವಿಚಾರಣೆಯನ್ನು ಜು.6ರ ತನಕ ಮುಂದೂಡಿರುವುದಾಗಿ ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಘೋಷಿಸಿದೆ.
ದಾವೆಯ ಸಂಕೀರ್ಣತೆ:ಹೈಕೋರ್ಟ್​ನಲ್ಲಿ ಜ್ಞಾನವಾಪಿ ಪ್ರಕರಣದ ದಾವೆಗಳ ಸಂಖ್ಯೆ ಹೆಚ್ಚಿದ್ದು, ವಿಭಿನ್ನ ಮಾದರಿಯ ಪಿಟಿಷನ್​ಗಳನ್ನು ಒಳ ಗೊಂಡಿವೆ. 1991ರ ಕಾಯ್ದೆ ಪ್ರಕಾರ ಮಸೀದಿ ಜಾಗವನ್ನು ದೇವಸ್ಥಾನಕ್ಕೆ ಬಿಡಲು ಮುಸ್ಲಿಮರು ವಿರೋಧಿಸುತ್ತಿ ದ್ದಾರೆ. ಸುನ್ನಿ ಸೆಂಟ್ರಲ್ ವಕ್ಪ್ ಮಂಡಳಿ ಮತ್ತು ಅಂಜುಮನ್ ಇಂತೇಜಾಮಿಯಾ ಮಸೀದಿ ಕಮಿಟಿಗಳು ಎಎಸ್​ಐ ಸರ್ವೆ ಕುರಿತ ಸಿವಿಲ್ ಜಡ್ಜ್ ಆದೇಶ ಪ್ರಶ್ನಿಸಿ ಎರಡು ಪ್ರತ್ಯೇಕ ರಿಟ್ ಪಿಟಿಷನ್ ದಾಖಲಿಸಿವೆ. ಅಲಹಾಬಾದ್ ಹೈಕೋರ್ಟ್​ನಲ್ಲಿ ಇದು ವಿಚಾರಣೆಯಲ್ಲಿದ್ದು, ಇತ್ತೀಚೆಗೆ ಸರ್ವೆಗೆ ತಡೆ ನೀಡಿತ್ತು. ಈಗ ಇದರಲ್ಲಿ ಕೌಂಟರ್ ಮತ್ತು ರಿಜಾಯಿಂಡರ್ ಅರ್ಜಿಗಳು ಸೇರಲಿವೆ. ಸರ್ವೆ ಕಾರ್ಯದ ವಿಡಿಯೋ ಚಿತ್ರೀಕರಣದ ದಾಖಲೆಗಳ ಪರಿಶೀಲನೆ ಕೂಡ ಆಗುತ್ತಿದೆ ಎಂದು ಮೂಲ ತಿಳಿಸಿವೆ.
ಜ್ಞಾನವಾಪಿ ವಿವಾದದ ಹಿನ್ನೆಲೆ:ಮಹಾರಾಜ ವಿಕ್ರಮಾಧಿತ್ಯ ನಿರ್ವಿುಸಿದ್ದ ಕಾಶಿ ವಿಶ್ವನಾಥನ ಪುರಾತನ ಮಂದಿರದ ಒಂದು ಭಾಗವನ್ನು ಮೊಘಲರ ದೊರೆ ಔರಂಗಜೇಬ್ 17ನೇ ಶತಮಾನದಲ್ಲಿ ನಾಶ ಮಾಡಿ, ಜ್ಞಾನವಾಪಿ ಮಸೀದಿ ನಿರ್ವಿುಸಿದ. ಮಸೀದಿ ಆವರಣದ ಪಶ್ಚಿಮದ ಗೋಡೆಯಲ್ಲಿ ಶೃಂಗಾರ ಗೌರಿ ವಿಗ್ರಹ ಸೇರಿ ಅನೇಕ ದೇವತೆಗಳ ಪ್ರತಿಮೆಗಳಿವೆ. ಇವಕ್ಕೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಐವರು (ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು, ಮಂಜು ವ್ಯಾಸ್ ಮತ್ತು ರೇಖಾ ಪಾಠಕ್) ಮಹಿಳೆಯರು ಏಪ್ರಿಲ್​ನಲ್ಲಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿವಾದಿತ ಮಸೀದಿಯಲ್ಲಿ ಸಮೀಕ್ಷೆಗೆ ಆದೇಶಿಸಲಾಗಿತ್ತು. ಜ್ಞಾನವಾಪಿ ಮಸೀದಿಯನ್ನು ವರ್ಷಕ್ಕೊಮ್ಮೆ ಪ್ರಾರ್ಥನೆಗಾಗಿ ತೆರೆಯಲಾಗುತ್ತದೆ.
ಜ್ಞಾನವಾಪಿ, ಶಾಹಿ ಈದ್ಗಾ ಮಸೀದಿಗಳನ್ನು ಬಲವಂತವಾಗಿ ವಶಪಡಿಸಿ ಕೊಂಡರೆ ತೀವ್ರ ಪ್ರಮಾಣದ ಪ್ರತಿಭಟನೆಯನ್ನು ಎದುರಿಸಬೇಕಾದೀತು.
|ಹಾಜಿ ಮೆಹಬೂಬ್ಅಯೋಧ್ಯೆ ಪ್ರಕರಣದ ದಾವೆದಾರರಲ್ಲಿ ಒಬ್ಬರು
ಪ್ರಾರ್ಥನೆಗೆ ಜನಸಂದಣಿ:ಜ್ಞಾನವಾಪಿ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಭಾರಿ ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದ್ದರು. ನೂಕುನುಗ್ಗುಲಾಗ ದಂತೆ ತಡೆಯಲು ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು. ನಮಾಜ್​ಗೆ ನಿರ್ಬಂಧ ಹೇರಿದ್ದ ಸ್ಥಳೀಯ ಕೋರ್ಟ್​ನ ಆದೇಶವನ್ನು ತೆರವುಗೊಳಿಸಿರುವ ಸುಪ್ರೀಂಕೋರ್ಟ್, ಮಸೀದಿ ಸಂಕೀರ್ಣದಲ್ಲಿ ಪತ್ತೆಯಾಗಿರುವ ಶಿವಲಿಂಗದ ರಕ್ಷಣೆ ಮಾಡಬೇಕು. ಇದು ವಾರಾಣಸಿ ಜಿಲ್ಲಾಧಿಕಾರಿ ಜವಾಬ್ದಾರಿಯಾಗಿದೆ ಎಂದು ಸ್ಪಷ್ಟಪಡಿಸಿತ್ತು. ನಮಾಜ್​ಗೆ ಮುನ್ನ ಮಾಡಲಾಗುವ ಧಾರ್ವಿುಕ ಆಚರಣೆಯಾದ ವುಜುವಿಗೂ (ಕೈ, ಕಾಲು ತೊಳೆಯುವುದು) ಅವಕಾಶವಿರ ಬೇಕು ಎಂದೂ ಗುರುವಾರ ಹೇಳಿತ್ತು.
ಅಯೋಧ್ಯೆಯಲ್ಲಿ 2024ರ ಜನವರಿಯಲ್ಲಿ ಉತ್ತರಾಯಣ ಪ್ರಾರಂಭದಲ್ಲಿ ಮಂದಿರದ ಪ್ರತಿಷ್ಠಾಪನಾ ಕಾರ್ಯ ನಡೆಸಲು ನಿಶ್ಚಯಿಸಲಾಗಿದೆ. ಅದಕ್ಕೆ ಬೇಕಾದ ಪೂರ್ವಭಾವಿ ಕಾರ್ಯಗಳು ನಿಗದಿತ ಕಾಲದಲ್ಲಿಯೇ ನಡೆಯುತ್ತಿವೆ. ಆರಂಭದಲ್ಲಿ ಭೂಮಿ ಗಟ್ಟಿಗೊಳಿಸುವ ಕಾರ್ಯ ನಡೆದಿದ್ದು, ಕರ್ನಾಟಕ ದಿಂದಲೇ ಹೋಗಿರುವ ಶಿಲೆಗಳಿಂದ ಫ್ಲಾಟ್​ಫಾಮ್ರ್ ನಿರ್ವಣವಾಗಿದೆ. ಗರ್ಭಗುಡಿಯ ಶಿಲಾನ್ಯಾಸ ಜೂ.1ರಂದು ನಡೆಯಲಿದ್ದು, ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಸ್ವಾಮೀಜಿ ತಿಳಿಸಿದರು.
ವಾರಾಣಸಿಯ ಜ್ಞಾನವಾಪಿ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿರುವುದರಿಂದ ನಮ್ಮ ನಂಬಿಕೆಗಳು, ಪುರಾಣಗಳ ಉಲ್ಲೇಖಗಳು ಸತ್ಯ ಎಂಬುದು ಸಾಬೀತಾಗಿದೆ. ಇದನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಇವೆಲ್ಲವೂ ಕೋರ್ಟ್ ತೀರ್ಪಿನಂತೆ ನಡೆಯುತ್ತಿದ್ದು, ಯಾರೂ ಸಂಘರ್ಷಕ್ಕೆ ಇಳಿಯದೆ ಸ್ವಾಗತಿಸಬೇಕು ಎಂದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 4 =
Remember me
