ನವದೆಹಲಿ :ರಾಷ್ಟ್ರ ರಾಜಧಾನಿಯಲ್ಲಿ ಹಲವು ದಿನಗಳಿಂದ ಇದ್ದ ಕರೊನಾ ಗಂಭೀರ ಸ್ಥಿತಿಯು ಸುಧಾರಿಸುವ ಸುಳಿವು ಕಾಣಿಸುತ್ತಿದೆ. ದೆಹಲಿ ನಗರದ ಕರೊನಾ ಸೋಂಕಿನ ದರದಲ್ಲಿ ಇಳಿಕೆಯಾಗುವುದರೊಂದಿಗೆ, ಆಕ್ಸಿಜನ್ ಮತ್ತು ಬೆಡ್​ ಲಭ್ಯತೆ ಸಾಕಷ್ಟಿದೆ ಎನ್ನಲಾಗಿದೆ.
ದೆಹಲಿಯ ಆಕ್ಸಿಜನ್ ಅಗತ್ಯವು ದಿನಕ್ಕೆ 700 ಮೆಗಾಟನ್​ಗಳಿಂದ 582 ಮೆಗಾಟನ್​ಗಳಿಗೆ ಇಳಿದಿದೆ. ಆದ್ದರಿಂದ ಹೆಚ್ಚುವರಿಯಾಗಿರುವ ಆಕ್ಸಿಜನ್​ಅನ್ನು ಬೇರೆ ರಾಜ್ಯಗಳಿಗೆ ನೀಡಬಹುದು ಎಂದು ದೆಹಲಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಡೆಪ್ಯುಟಿ ಸಿಎಂ ಮನೀಶ್​ ಸಿಸೋಡಿಯಾ ಹೇಳಿದ್ದಾರೆ. ಇಂದು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಸೋಡಿಯಾ, ನಗರದಲ್ಲಿ ದಿನಂಪ್ರತಿ ದಾಖಲಾಗುತ್ತಿರುವ ಸೋಂಕಿನ ಪ್ರಮಾಣವೂ ಕಡಿಮೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಮೂರ್ನಾಲ್ಕು ಸಾವಿರ ರೂ. ಕೊಟ್ರೆ ಪಾಸಿಟಿವ್‌ನೂ ಆಗ್ತಿತ್ತು ನೆಗೆಟಿವ್‌- ಸಿಕ್ಕಿಬಿದ್ದ ಕಿಂಗ್‌ಪಿನ್‌!
“ಹೊಸ ಪ್ರಕರಣಗಳ ಸಂಖ್ಯೆಯು 15 ದಿನಗಳ ಹಿಂದೆ 28,000 ಇದ್ದಿದ್ದು ಇದೀಗ 10,400 ಕ್ಕೆ ಇಳಿದಿದೆ. ಪಾಸಿಟಿವಿಟಿ ರೇಟ್​ ಕೂಡ ಶೇ. 35 ರಿಂದ ಶೇ. 14 ಕ್ಕೆ ಇಳಿದಿದೆ. ಕೋವಿಡ್​ ಆಸ್ಪತ್ರೆಗಳಲ್ಲಿ ಈಗ ಹೆಚ್ಚು ಬೆಡ್​ಗಳು ಲಭ್ಯವಿದ್ದು, ಆಕ್ಸಿಜನ್ ಬೇಡಿಕೆಯೂ ತಗ್ಗಿದೆ” ಎಂದು ಸಿಸೋಡಿಯಾ ತಿಳಿಸಿದ್ದಾರೆ.(ಏಜೆನ್ಸೀಸ್)
ಲಸಿಕೆ ತಾಂತ್ರಿಕ ಸಮಿತಿ ಶಿಫಾರಸು : ಕೋವಿಶೀಲ್ಡ್​ ಡೋಸ್​ಗಳ ಅಂತರ ಹೆಚ್ಚಿಸಿ, ಸೋಂಕಿತರು 6 ತಿಂಗಳು ಕಾಯಿರಿ

ಈ ಚಿತ್ರದಲ್ಲಿ ಜನಪ್ರಿಯ ಕಾಮೆಡಿಯನ್ ಇದ್ದಾರೆ… ಯಾರು ಹೇಳ್ತೀರಾ ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
