ಪಟನಾ:ಸಾಮಾಜಿಕ ಜೀವನದಲ್ಲಿ ಜಾತಿ ವಿಚಾರ ಸೂಕ್ಷ್ಮವಾಗಿ ಹಾಸು ಹೊಕ್ಕಾಗಿರುವ ಬಿಹಾರದಲ್ಲಿ ಜಾತಿ ಆಧಾರದಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಲು ಬುಧವಾರ ನಡೆದ ಸರ್ವ ಪಕ್ಷ ಸಭೆ ನಿರ್ಧರಿಸಿದೆ. ಜಾತಿ ಗಣತಿಗೆ ಮಿತ್ರಪಕ್ಷ ಬಿಜೆಪಿಯೇ ಹಿಂದೇಟು ಹಾಕಿದ್ದು ಹಾಗೂ ರಾಷ್ಟ್ರಮಟ್ಟದಲ್ಲಿ ಜಾತಿಗಣತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಒಲ್ಲದ ಮನಸ್ಸು ಹೊಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ರಾಜಕೀಯ ಮಹತ್ವದ್ದಾಗಿದೆ. ಮೊದಮೊದಲು ಜಾತಿಗಣತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಕೆಲವು ದಿನಗಳ ಹಿಂದೆಯಷ್ಟೇ ಸಹಮತ ವ್ಯಕ್ತಪಡಿಸಿತ್ತು.
ಸರ್ವ ಪಕ್ಷ ಸಭೆಯಲ್ಲಿ ವ್ಯಕ್ತವಾದ ಒಮ್ಮತದಿಂದ ಸರ್ಕಾರ ಎಲ್ಲ ಜಾತಿಗಳು ಮತ್ತು ಸಮುದಾಯಗಳ ಸಾಮಾಜಿಕ- ಆರ್ಥಿಕ ಸಮೀಕ್ಷೆ ನಡೆಸಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕಟಿಸಿದ್ದಾರೆ. ಚುನಾವಣೆಯಿಂದ ಹಿಡಿದು ಎಲ್ಲ ವಿಚಾರಗಳಲ್ಲಿ ಜಾತಿ ಲೆಕ್ಕಾಚಾರ ಹಾಗೂ ಜಾತಿ ಸಮೀಕರಣ ಮಹತ್ವದ ಪಾತ್ರ ವಹಿಸುವ ಬಿಹಾರದಲ್ಲಿ ಜಾತಿ ಗಣತಿ ಬಹಳ ಮಹತ್ವದ ರಾಜಕೀಯ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ. ಜನತಾ ದಳ (ಯು) ಅಧ್ಯಕರೂ ಆಗಿರುವ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಜನತಾ ದಳದ (ಆರ್​ಜೆಡಿ) ಪರವಾಗಿ ತೇಜಸ್ವಿ ಯಾದವ್ ಮತ್ತು ಬಿಜೆಪಿಯನ್ನು ಪ್ರತಿನಿಧಿಸಿ ಉಪಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್ ಭಾಗವಹಿಸಿದ್ದರು. ಇತರ ಪಕ್ಷಗಳ ನಾಯಕರೂ ಸಭೆಯಲ್ಲಿದ್ದರು.
ನಿರ್ದಿಷ್ಟ ಕಾಲಮಿತಿಯೊಳಗೆ ಜಾತಿ ಗಣತಿಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ವಂಚಿತ ಜನಸಮುದಾಯದ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ಜಾತಿ ಗಣತಿಯನ್ನು ನಡೆಸಲು ನಿರ್ಧರಿಸಲಾಗಿದೆ
|ನಿತೀಶ್ ಕುಮಾರ್ಬಿಹಾರ ಸಿಎಂ
ಕೇಂದ್ರದ ನೆರವಿಗೆ ಮೊರೆ:ಜಾತಿ ಆಧಾರಿತ ಸಾಮಾಜಿಕ-ಆರ್ಥಿಕ ಗಣತಿ ಒಂದು ಬೃಹತ್ ಪ್ರಕ್ರಿಯೆಯಾಗಿದ್ದು ಅಪಾರ ವೆಚ್ಚವಾಗುತ್ತದೆ. ಹಾಗಾಗಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಜಾತಿ ಗಣತಿ ಸಂಬಂಧ ಶೀಘ್ರವೇ ರಾಜ್ಯ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸ ಲಾಗುತ್ತದೆ. ಒಟ್ಟಾರೆ ಪ್ರಕ್ರಿಯೆಗೆ ‘ಜಾತಿ ಆಧಾರಿತ ಗಣತಿ’ ಎಂದು ಕರೆಯಲಾಗುತ್ತದೆ. ಗಣತಿಯಲ್ಲಿ ಭಾಗವಹಿಸುವ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗುವುದೆಂದು ನಿತೀಶ್ ತಿಳಿಸಿದರು.
ಕರ್ನಾಟಕದಲ್ಲಿ ವರದಿಗೆ ಸೂಚನೆ:ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ನಡೆಸಿತ್ತು, ಸರ್ಕಾರ ಈವರೆಗೂ ವರದಿಯನ್ನು ಅಂಗೀಕರಿಸಿಲ್ಲ. ಪ್ರಸ್ತುತ ಇಂತಹದ್ದೇ ಸಮೀಕ್ಷೆ ನಡೆಯುವ ಆಲೋಚನೆ ಸರ್ಕಾರದ ಮುಂದಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲು ಕೊಡುವ ವಿಚಾರದಲ್ಲಿ ರಾಜಕೀಯ ಹಿಂದುಳಿದಿರುವಿಕೆ ಗುರುತಿಸಿ ವರದಿ ನೀಡಲು ನ್ಯಾ.ಭಕ್ತವತ್ಸಲಂ ಸಮಿತಿ ರಚಿಸಿದ್ದು, 3 ತಿಂಗಳಲ್ಲಿ ವರದಿ ಕೊಡಲು ಸರ್ಕಾರ ಸೂಚಿಸಿದೆ.
ಕರೊನಾ ಕುರಿತ ಹಣದಲ್ಲೂ ಪಾಲು ಕೇಳಿದ ಪಾಲಿಕೆ ಆಯುಕ್ತ ಎಸಿಬಿ ಬಲೆಗೆ; ಅಕೌಂಟೆಂಟ್​ ಕೂಡ ಬಂಧನ..

ಮತ್ತೆ ತಲೆಗೆ ಹುಳಬಿಟ್ಟ ಉಪೇಂದ್ರ; ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರನಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 4 =
Remember me
