ವೈಶಾಲಿ:ಆಹಾರ ಅರಸಿ ಅಲೆದಾಡುತ್ತಿದ್ದ ಬೆಕ್ಕಿನ ತಲೆ ಸ್ಟೀಲ್ ಪಾತ್ರೆಯಲ್ಲಿ ಸಿಲುಕಿಕೊಂಡಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:488 ರೂಪಾಯಿಗೆ ಜೋಡಿ ಕೊಲೆ; ಓರ್ವ ಆರೋಪಿ ಅರೆಸ್ಟ್​
ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಆಹಾರಕ್ಕಾಗಿ ಅಲೆಯುತ್ತಿದ್ದ ಲಾಲ್‌ಗಂಜ್ ಪ್ರದೇಶದ ಮನೆಗೆ ಬೆಕ್ಕೊಂದು ಪ್ರವೇಶಿಸಿದೆ. ದುಂಡಗಿನ ಉಕ್ಕಿನ ಪಾತ್ರೆಯಲ್ಲಿ ಹಾಲಿರುವುದನ್ನು ನೋಡಿದ ಬೆಕ್ಕು, ಅದನ್ನು ಕುಡಿಯುವುದಕ್ಕೊಸ್ಕರ ತಲೆಯ ಭಾಗವನ್ನು ಮಾತ್ರ  ಪಾತ್ರೆಯಲ್ಲಿ ಹಾಕಿದೆ.ಈ ವೇಳೆ ತಲೆಯು ಪಾತ್ರೆಯೊಳಗೆ ಹೋಗದಿದ್ದಾಗ ಹಲವು ಸಲ ಪ್ರಯತ್ನಿಸಿ, ಕೊನೆಗೂ ತನ್ನ ತಲೆಯನ್ನು ಪಾತ್ರೆಯಲ್ಲಿ ಸೇರಿಸಿದೆ. ಕೊನೆಗೆ ಹಾಲು ಕುಡಿದ ನಂತರ ತಲೆಯನ್ನು ಹೊರತೆಗೆಯಲು ಯತ್ನಿಸಿದ್ದು. ಬೆಕ್ಕಿನ ಪ್ರಯತ್ನ ವಿಫಲವಾಗಿದೆ. ಕೊನೆಗೆ ಈ ತೊಂದರೆಯಿಂದಾಗಿ ಬೆಕ್ಕು ಹತಾಶೆಯಿಂದ ಮನೆಯಲ್ಲಿ ತಿರುಗಾಡುತ್ತಿತ್ತು.
ಇದನ್ನೂ ಓದಿ:ವೃತ್ತಿ ಕುರಿತು ಅವಹೇಳನ ಮಾಡಿದ ಯುವಕನಿಗೆ ಬರ್ಬರ ಇರಿತ!
ಬಳಿಕ ಮನೆಯ ಸದಸ್ಯರು ಬೆಕ್ಕಿನ ಮೈಮೇಲೆ ಬಿದಿರಿನ ಕೋಲನ್ನು ಎಸೆದಿದ್ದು, ಗಾಬರಿಯಾದ ಬೆಕ್ಕು ಓಡಿಹೋಗಲು ಯತ್ನಿಸಿ ಪಾತ್ರೆಯಿಂದ ತಲೆ ಹೊರತೆಗೆದು ಕಿಟಕಿ ಮೂಲಕ ಎಸ್ಕೇಪ್​ ಆಗಿದೆ. ಈ ವೇಳೆ ಬಾಯಿಯ ಭಾಗದಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
