ಭೋಪಾಲ್(ಮಧ್ಯಪ್ರದೇಶ) :ಭಾರಿ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ನದಿಗೆ ಕೆಲವರು ಹಸುಗಳನ್ನು ತಳ್ಳಿದ್ದಾರೆ. ಈ ಅಮಾನವೀಯ ಘಟನೆಯಲ್ಲಿ ಸುಮಾರು 15-20 ಹಸುಗಳು ಮೃತಪಟ್ಟಿದ್ದು, ವೀಡಿಯೋ ವೈರಲ್​ ಆದ ನಂತರ ಸತ್ನಾ ಪೊಲೀಸರು ನಾಲ್ವರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಇದನ್ನೂ ಓದಿ:ಯುಪಿಯಲ್ಲಿ ಡಿಜಿಟಲ್ ಮೀಡಿಯಾ ನೀತಿ: ಯೂಟ್ಯೂಬರ್‌ಗಳಿಗೆ 8 ಲಕ್ಷ, ರೀಲ್ಸ್​ಗೆ 5 ಲಕ್ಷ ನೆರವು..ರಾಷ್ಟ್ರವಿರೋಧಿ ಪೋಸ್ಟ್‌ಗೆ ಶಿಕ್ಷೆ ಏನು ಗೊತ್ತಾ?
20ಕ್ಕೂ ಹೆಚ್ಚು ಹಸುಗಳನ್ನು ನೀರಿಗೆ ತಳ್ಳುವುದಕ್ಕೆ ನಿಖರ ಕಾರಣವೇನೆಂಬುದು ತಿಳಿದು ಬಂದಿಲ್ಲ. ಜನರ ಗುಂಪೊಂದು ಮಂಗಳವಾರ ನದಿ ದಂಡೆಗೆ 30-40 ಹಸುಗಳನ್ನು ಎಳೆದುತಂದು ಪ್ರವಾಹ ಏರ್ಪಟ್ಟಿದ್ದ ನದಿಗೆ ತಳ್ಳಿದ್ದಾರೆ. ಇದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ನಾಲ್ವರು ಆರೋಪಿಗಳಾದ ಬೇಟಾ ಬಗ್ರಿ, ರವಿ ಬಗ್ರಿ, ರಾಂಪಾಲ್ ಚೌಧರಿ ಮತ್ತು ರಾಜ್ಲು ಚೌಧರಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಹಸುಗಳನ್ನು ನದಿಗೆ ಏಕೆ ತಳ್ಳಲಾಯಿತು ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ತನಿಖೆಯಿಂದಷ್ಟೇ ಕಾರಣ ತಿಳಿದುಬರಲಿದೆ. ಗೋಹತ್ಯೆ ನಿಷೇಧ ಕಾನೂನಿನ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್​ಎಸ್​) ನ ಅಡಿಯಲ್ಲಿ ಸಹ ಪ್ರಕರಣ ದಾಖಲಿಸಲಾಗಿದೆ ಎಂದು ನಾಗೋಡ ಪೊಲೀಸ್ ಠಾಣೆ ಪ್ರಭಾರಿ ಇನ್​ಸ್ಪೆಕ್ಟರ್​ ಅಶೋಕ್ ಪಾಂಡೆ ಹೇಳಿದರು.
ನದಿಗೆ ಎಸೆದ ಹಸುಗಳ ನಿಖರ ಸಂಖ್ಯೆ ಮತ್ತು ಅವುಗಳ ಸಾವಿನ ಸಂಖ್ಯೆ ತನಿಖೆಯ ನಂತರ ಖಚಿತವಾಗಲಿದೆ. ಸದ್ಯ ಇತರೆ ಹಸುಗಳನ್ನು ಪತ್ತೆ ಹಚ್ಚಿ ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ನಾಲ್ವರು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.
‘ಕಾಪಾಡಬೇಕಾದ ತಂದೆಯೇ ಲೈಂಗಿಕ ಕಿರುಕುಳ ನೀಡಿದ್ದ’: ಹೇಮಾ ಸಮಿತಿ ವರದಿ ಹಿನ್ನೆಲೆಯಲ್ಲಿ ನಟಿ ಖುಷ್ಬೂ ಸ್ಫೋಟಕ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
