ಕಿಯೋಂಜಾರ್​:ರಸ್ತೆಯ ಮೇಲೆ ಜಾರಿದ ಟ್ರಕ್​ ಒಂದು​ ಸೇತುವೆ ಮೇಲಿಂದ ಉರುಳಿ ಕೆಳಗೆ ಚಲಿಸುತ್ತಿದ್ದ ಬಸ್​ ಮೇಲೆ ಬಿದ್ದರೂ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗದೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಒಡಿಶಾದ ಕಿಯೋಂಜರ್​ ಜಿಲ್ಲೆಯ ಸಲಪದದಲ್ಲಿ ಶನಿವಾರ ನಡೆದಿದೆ.
ಬಸ್​ನಲ್ಲಿ ಸುಮಾರು 50 ಮಂದಿ ಪ್ರಯಾಣಿಕರು ಇದ್ದರು. ಬಸ್​ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅವಘಡದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಘಟನೆಯ ಸಂಪೂರ್ಣ ಚಿತ್ರಣ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.
ಇದನ್ನೂ ಓದಿರಿ:ಬರೀ ಮಾಸ್ಕ್ ಹಾಕದ್ದಕ್ಕೆ ವಿಧಿಸಿದ ದಂಡದ ಮೊತ್ತವೇ 30 ಕೋಟಿ ರೂಪಾಯಿ!
ವಿಡಿಯೋದಲ್ಲಿ ಏನಿದೆ?:ಸೇತುವೆ ಅಡಿಯಿಂದ ಬರುವ ಬಸ್​ ಎಡಕ್ಕೆ ತಿರುವು ಪಡೆದುಕೊಂಡು ತುಸು ದೂರ ಸಾಗಿದ ತಕ್ಷಣವೇ ಸೇತುವೆ ಮೇಲಿಂದ ಕಬ್ಬಿಣ ತುಂಬಿದ ಟ್ರಕ್​ ಉರುಳಿ ಬಸ್​ ಮುಂಭಾಗದ ತುದಿಗೆ ಅಪ್ಪಳಿಸುತ್ತದೆ. ಅದನ್ನು ನೋಡಿದ ಜನರು ಏನಾಯಿತು ಎಂಬ ಗಾಬರಿಯಿಂದ ಓಡಿ ಹೋಗುತ್ತಾರೆ.
ಸೇತುವೆ ಮೇಲಿಂದ ಬಸ್​ ಮೇಲೆ ಬಿದ್ದ ಕಬ್ಬಿಣ ತುಂಬಿದ ಟ್ರಕ್ಕಿಯೋಂಜಾರ್​: ರಸ್ತೆಯ ಮೇಲೆ ಜಾರಿದ ಟ್ರಕ್​ ಒಂದು​ ಸೇತುವೆ ಮೇಲಿಂದ ಉರುಳಿ ಕೆಳಗೆ ಚಲಿಸುತ್ತಿದ್ದ ಬಸ್​ ಮೇಲೆ ಬಿದ್ದರೂ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗದೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಒಡಿಶಾದ ಕಿಯೋಂಜರ್​ ಜಿಲ್ಲೆಯ ಸಲಪದದಲ್ಲಿ ಶನಿವಾರ ನಡೆದಿದೆ.pic.twitter.com/PHJsb8Olyb
— Vijayavani (@VVani4U)February 20, 2021

ಇನ್ನು ಚಾಲಕ ತನ್ನ ಸಮಯ ಪ್ರಜ್ಞೆಯಿಂದಾಗಿ ಟ್ರಕ್​ ಬೀಳುವುದನ್ನು ಗಮನಿಸಿ ಮೊದಲೇ ಬ್ರೇಕ್​ ಹಾಕಿ ಬಸ್​ ನಿಲ್ಲಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಭುವನೇಶ್ವರದ ಮೂಲದ ಬಸ್​ ಪ್ರಯಾಣಿಕರನ್ನು ಮಯೂರ್​ಬಂಜ್​ ಜಿಲ್ಲೆಯ ಕಾರಂಜಿಯಾದಿಂದ ಕರೆದೊಯ್ಯುತ್ತಿತ್ತು.
ಟ್ರಕ್​​ ಬಸ್​ ಮೇಲೆ ಬಿದ್ದಿದ್ದರಿಂದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಬಸ್​ ನಿರ್ವಾಹಕ, ಟ್ರಕ್​ ಚಾಲಕ ಮತ್ತು ಕೆಲವೇ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿರಿ:ಜಲಾಶಯದ ದಡದಲ್ಲಿ ವಿಚಿತ್ರ ಜೀವಿ ನೋಡಿ ಬೆಚ್ಚಿಬಿದ್ದ ಜನ: ಇದರ ಬಗ್ಗೆ ತಿಳಿದ್ರೆ ಅಚ್ಚರಿಯಾಗುತ್ತೆ!
ಬದಲಾಯಿತು ಮತ್ತೊಂದು ನಗರದ ಹೆಸರು! ನರ್ಮದೆಯ ತಟದಲ್ಲಿ ‘ನರ್ಮದಾಪುರಂ’

ಅಮಿತಾಬ್ ಬಚ್ಚನ್​ ಮನೆಗೆ ಪೊಲೀಸ್ ಬಿಗಿ ಭದ್ರತೆ: ಕಾರಣ?

42 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ‘ಜಗದೇಕವೀರುಡು’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − one =
Remember me
