ನವದೆಹಲಿ:ತಾಯಿಯೊಂದಿಗೆ ನಡೆಯುತ್ತಿದ್ದ ವಾಗ್ವಾದ ತಾರಕಕ್ಕೇರಿ ನಿಯಂತ್ರಣ ಕಳೆದುಕೊಂಡು ಮಗ ತಾಯಿಯ ಕಪಾಳಕ್ಕೆ ಬಾರಿಸಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವಿಗೀಡಾದ ಮನಕಲಕುವ ಘಟನೆ ದೆಹಲಿಯ ದ್ವಾರಕ ಏರಿಯಾದಲ್ಲಿ ನಡೆದಿದೆ.
ಮೃತ ಹಿರಿಯ ಮಹಿಳೆಯನ್ನು ಅವ್ತಾರ್ ಕೌರ್​ (76) ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ನೆರೆಮನೆಯವರೊಂದಿಗಿನ ಪಾರ್ಕಿಂಗ್​ ಸಮಸ್ಯೆಯ ಬಗ್ಗೆ ಮಗ ಮತ್ತು ಸೊಸೆ ಜತೆ ವಾಗ್ವಾದಕ್ಕೆ ಇಳಿದಿದ್ದಾಗ ಅನಿರೀಕ್ಷಿತ ಘಟನೆ ಸಂಭವಿಸಿದೆ.
ಮಾತಿನ ಚಕಮಕಿ ನಡುವೆಯೇ ತಾಯಿಯ ಕಪಾಳಕ್ಕೆ ಮಗ ಬಾರಿಸಿದಾಗ ಆಕೆ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬೀಳುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತಳ ಸೊಸೆಯು ಆಕೆಯನ್ನು ಎದ್ದೇಳಿಸಲು ಪ್ರಯತ್ನಿಸುವುದು ಸಹ ವಿಡಿಯೋದಲ್ಲಿದೆ. ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸುತ್ತಾರೆ.
ಇದನ್ನೂ ಓದಿರಿ:ಅಂಬಾನಿಗೆ ಬಾಂಬ್​ ಬೆದರಿಕೆ: ಎಸ್​ಯುವಿ ಕಾರಿನ ನಂಬರ್​ ಪ್ಲೇಟ್, ನಗದು ತುಂಬಿದ್ದ ಮರ್ಸಿಡೀಸ್​ ಕಾರು ಸೀಜ್​
ನವದೆಹಲಿ: ತಾಯಿಯೊಂದಿಗೆ ನಡೆಯುತ್ತಿದ್ದ ವಾಗ್ವಾದ ತಾರಕಕ್ಕೇರಿ ನಿಯಂತ್ರಣ ಕಳೆದುಕೊಂಡು ಮಗ ತಾಯಿಯ ಕಪಾಳಕ್ಕೆ ಬಾರಿಸಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವಿಗೀಡಾದ ಮನಕಲಕುವ ಘಟನೆ ದೆಹಲಿಯ ದ್ವಾರಕ ಏರಿಯಾದಲ್ಲಿ ನಡೆದಿದೆ.#CCTV#Elderlywoman#Death#Son#Mother#DelhiDwarkapic.twitter.com/PG7IrSfF0E
— Vijayavani (@VVani4U)March 17, 2021

ಘಟನೆ ಬೆನ್ನಲ್ಲೇ ಬಿಂದಾಪುರ್​ ಪೊಲೀಸರು ಮೃತಳ ಮಗ 45 ವರ್ಷದ ರಣ್ಬಿರ್​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 304ರ ಅಡಿಯಲ್ಲಿ ಎಫ್​ಐಆರ್​ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಪೊಲೀಸ್​ ಮೂಲಗಳ ಪ್ರಕಾರ ಘಟನೆಗು ಮುನ್ನ ಪಾರ್ಕಿಂಗ್​ ವಿಚಾರವಾಗಿ ಮೃತ ಮಹಿಳೆ ಮತ್ತು ನೆರೆ ಮನೆಯೊಬ್ಬರ ನಡುವೆ ಜಗಳ ನಡೆಯುತ್ತಿತ್ತು. ನೆರೆ ಮನೆಯವರು ಠಾಣೆಗೆ ಕರೆ ದೂರು ಸಹ ನೀಡಿದ್ದರು. ಪೊಲೀಸರು ಘಟನಾ ಸ್ಥಳಕ್ಕೆ ಬಂದಾಗ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದೆ ಮತ್ತು ಇನ್ಮುಂದೆ ಈ ವಿಷಯವನ್ನು ಮುಂದುವರಿಸಲು ಬಯಸಿಲ್ಲ ಎಂದು ದೂರುದಾರೆ ಸ್ಪಷ್ಟನೆ ನೀಡಿ ಪೊಲೀಸರನ್ನು ವಾಪಸ್​ ಕಳುಹಿಸಿದ್ದಳು.
ನೆರೆಯವರ ಜತೆ ಜಗಳ ಆಡಿದ್ದಕ್ಕೆ ರಣ್ಬೀರ್​ ತನ್ನ ತಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದ್ದಾಗ ತಾಳ್ಮೆ ಕಳೆದುಕೊಂಡ ಮಗ ತಾಯಿಯ ಕಪಾಳಕ್ಕೆ ಬಾರಿಸಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಲಾರಿ ಡಿಕ್ಕಿಯ ರಭಸಕ್ಕೆ ಕುಸಿದ ಹೋಟೆಲ್ ಕಟ್ಟಡ: ಅದೃಷ್ಟವಶಾತ್​ ತಪ್ಪಿತು ಭಾರೀ ಅನಾಹುತ! ​

Web Exclusive | 4 ದಶಕದಿಂದ ಈಕೆಗೆ ಠಾಣೆಯೇ ಮನೆ!; ಪೊಲೀಸರೇ ಬಂಧುಗಳು, ಆಧಾರ್ ಕಾರ್ಡಲ್ಲಿ ಠಾಣೆಯೇ ವಿಳಾಸ!

ಚಿಕ್ಕಪ್ಪನನ್ನೇ ಭೀಕರವಾಗಿ ಕೊಂದ; ಕಣ್ಣಿಗೆ ಖಾರದ ಪುಡಿ ಎರಚಿದ, ಚಾಕುವಿನಿಂದ ಕತ್ತು ಕೊಯ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
