ನವದೆಹಲಿ:ಮಾಜಿ ಸಂಸದ ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ಅವರ ಚಿಕ್ಕಪ್ಪ ವೈ.ಎಸ್​. ಭಾಸ್ಕರ್​ ರೆಡ್ಡಿ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ (ಏಪ್ರಿಲ್​ 16) ಬಂಧಿಸಿದೆ.
ಕಡಪ ಜಿಲ್ಲೆಯಲ್ಲಿ ಸಿಬಿಐ ಅಧಿಕಾರಿಗಳು ಭಾಸ್ಕರ್​ ರೆಡ್ಡಿ ಅವರನ್ನು ಬಂಧಿಸಿದ್ದಾರೆ. ರೆಡ್ಡಿ ವಿರುದ್ಧ ಸೆಕ್ಷನ್ 120 ಬಿ (ಪಿತೂರಿ), 302 (ಕೊಲೆ), 201 (ಸಾಕ್ಷ್ಯ ನಾಶಪಡಿಸುವಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಜಗದೀಶ್ ಶೆಟ್ಟರ್ ರಾಜೀನಾಮೆ ನಿರ್ಧಾರದಿಂದ ಕಸಿವಿಸಿಯಾಗಿದೆ; ಡ್ಯಾಮೇಜ್ ಕಂಟ್ರೋಲ್​ಗೆ ಬೇಕಾದ ತಂತ್ರ ರೂಪಿಸಲಾಗುತ್ತಿದೆ! ಸಿಎಂ ಬೊಮ್ಮಾಯಿ
ಕೊಲೆಯಾದ ವಿವೇಕಾನಂದ ರೆಡ್ಡಿ ಅವರು ಆಂಧ್ರ ಪ್ರದೇಶದ ಮಾಜಿ ಸಿಎಂ ದಿವಂಗತ ವೈ.ಎಸ್​. ರಾಜೇಶೇಖರ ರೆಡ್ಡಿ ಅವರ ಸಹೋದರ. ಹಾಲಿ ಸಿಎಂ ಜಗನ್​ ಮೋಹನ್​ ರೆಡ್ಡಿ ಅವರ ಅಂಕಲ್​. ಪುಲಿವೆಂದುಲದಲ್ಲಿರುವ ನಿವಾಸದಲ್ಲಿ 2019ರ ಮಾರ್ಚ್​ 15ರಂದು ಕೊಲೆಯಾಗಿದ್ದರು. ರಾಜ್ಯ ವಿಧಾನಸಭಾ ಚುನಾವಣೆ ನಡೆಯುವ ಕೆಲವೇ ವಾರಗಳ ಮುಂಚೆ ಕೊಲೆಯಾಗಿತ್ತು. ಪುಲಿವೆಂದುಲಾ ಕ್ಷೇತ್ರವನ್ನು ಈಗ ಅವರ ಸೋದರ ಸಂಬಂಧಿ ಪ್ರತಿನಿಧಿಸುತ್ತಿದ್ದಾರೆ.
ಆರಂಭದಲ್ಲಿ ಕೊಲೆಯ ಪ್ರಕರಣವನ್ನು ರಾಜ್ಯದ ವಿಶೇಷ ತನಿಖಾ ತಂಡ (ಎಸ್​ಐಟಿ) ತನಿಖೆ ನಡೆಸುತ್ತಿತ್ತು. ಬಳಿಕ 2020ರಲ್ಲಿ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.
ಸಿಬಿಐ ಚಾರ್ಜ್​ಶೀಟ್​​ ಪ್ರಕಾರ ವಿವೇಕಾನಂದ ರೆಡ್ಡಿ ಅವರು ಕಡಪಾ ಲೋಕಸಭಾ ಕ್ಷೇತ್ರದಿಂದ ಅವಿನಾಶ್​ ರೆಡ್ಡಿ ಬದಲಾಗಿ ತನಗೆ ಅಥವಾ ವೈ.ಎಸ್​. ಶರ್ಮಿಳಾ (ಜಗನ್​ ಮೋಹನ್​ ರೆಡ್ಡಿ ಸಹೋದರಿ) ಅಥವಾ ವೈ.ಎಸ್​. ವಿಜಯಮ್ಮ (ಜಗನ್​ ರೆಡ್ಡಿ ತಾಯಿ) ಅವರಿಗೆ ಕೇಳಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಕಾಮತೃಷೆ ತೀರಿಸಿಕೊಳ್ಳಲು ವಿದ್ಯಾರ್ಥಿಗಳ ಬಳಕೆ: 6 ಶಿಕ್ಷಕಿಯರ ಬಂಧನ, ಸ್ಫೋಟಕ ಮಾಹಿತಿ ಬಹಿರಂಗ
ಅವಿನಾಶ್​ ರೆಡ್ಡಿ ಬಂಧಿತ ಭಾಸ್ಕರ್​ ರೆಡ್ಡಿ ಅವರ ಮಗ. ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಅವಿನಾಶ್​ ಅವರು ಕಡಪ ಕ್ಷೇತ್ರದ ಹಾಲಿ ಸಂಸದರು ಆಗಿದ್ದಾರೆ. (ಏಜೆನ್ಸೀಸ್​)
ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಮಾತಾಡಿದ್ರೆ ಗುಂಡು ಹಾರಿಸುತ್ತೇನೆಂದ ನಟಿ ರಾಧಿಕಾ ಆಪ್ಟೆ!

ಜಗದೀಶ್ ಶೆಟ್ಟರ್ ರಾಜೀನಾಮೆ ನಿರ್ಧಾರದಿಂದ ಕಸಿವಿಸಿಯಾಗಿದೆ; ಡ್ಯಾಮೇಜ್ ಕಂಟ್ರೋಲ್​ಗೆ ಬೇಕಾದ ತಂತ್ರ ರೂಪಿಸಲಾಗುತ್ತಿದೆ! ಸಿಎಂ ಬೊಮ್ಮಾಯಿ

ಮದುವೆಗೂ ಮುನ್ನ ನಟನೊಂದಿಗೆ ಸಂಬಂಧ: ಖುಷ್ಬೂ ಬಗ್ಗೆ ಶಾಕಿಂಗ್​ ಕಾಮೆಂಟ್​ ಮಾಡಿದ ತೆಲುಗು ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 13 =
Remember me
