ನವದೆಹಲಿ: ಕಾಳಧನ ವಹಿವಾಟು ತಡೆಗೆ ಕಠಿಣ ಕ್ರಮ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, 2014-15ರಲ್ಲಿ 1,038 ಕೋಟಿ ರೂಪಾಯಿ ಕಾಳಧನವನ್ನು ಹಾಂಕಾಂಗ್​ಗೆ ವರ್ಗಾಯಿಸಿದ 48 ಸಂಸ್ಥೆ ಮತ್ತು ಮೂವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಈ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದೆ. ಬಹುತೇಕ ವಹಿವಾಟುಗಳನ್ನು ಈ ಸಂಸ್ಥೆಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್​ ಮೂಲಕ ನಡೆಸಿದ್ದು, ಅಲ್ಲಿನ ಗುರುತು ಹೇಳಲಿಚ್ಛಿಸದ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಿಬಿಐ ತನಿಖೆ ವೇಳೆ ಬಹಿರಂಗಗೊಂಡ ಮಾಹಿತಿ ಪ್ರಕಾರ, 48 ಸಂಸ್ಥೆಗಳು 51 ಕರೆಂಟ್​ ಅಕೌಂಟ್​ಗಳನ್ನು ಮೇಲಿನ ಬ್ಯಾಂಕುಗಳ ಹಾಂಕಾಂಗ್​ ಶಾಖೆಯಲ್ಲಿ ತೆರೆದಿದ್ದವು. ಇವುಗಳ ಮೂಲಕ ಹೊರದೇಶಕ್ಕೆ ರವಾನಿಸಿದ ಹಣದ ಮೊತ್ತ 1,038 ಕೋಟಿ ರೂಪಾಯಿ ಆಗಿತ್ತು. ಸಿಬಿಐ ಎಫ್​ಐಆರ್​ನಲ್ಲಿ 48 ಸಂಸ್ಥೆಗಳ ಹೊರತಾಗಿ ಮೊಹಮ್ಮದ್ ಇಬ್ರಾಹಂಸಾ ಜೋನಿ, ಝಿಂಟಾ ಮಿಧರ್​, ನಿಜಾಮುದ್ದೀನ್ ಎಂಬುವವರ ಹೆಸರು ದಾಖಲಾಗಿವೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
