ಬೆಂಗಳೂರು:ಒಂದು ಮಹತ್ವದ ಕಾರಣಕ್ಕಾಗಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಇಂಟರ್​​ಪೋಲ್ ಜತೆ ಸಮನ್ವಯ ಸಾಧಿಸಿದೆ. ಸಿಬಿಐನ ಜಾಗತಿಕ ಕಾರ್ಯಾಚರಣೆ ಕೇಂದ್ರವು ಇಂಟರ್​ಪೋಲ್ ಜತೆ ನಡೆಸಿದ ಸಮನ್ವಯದಿಂದಾಗಿ ಪ್ರಮುಖ ಅಪರಾಧಿಯೊಬ್ಬನ ವಶವಾದಂತಾಗಿದೆ.
ರೆಡ್ ನೋಟಿಸ್​​ಗೆ ಗುರಿಯಾದ ಅಪರಾಧಿಯನ್ನು ಅಮೆರಿಕದಿಂದ ವಾಪಸ್ ಕರೆಸಿಕೊಳ್ಳುವ ಸಲುವಾಗಿ ಇಂಟರ್​ಪೋಲ್​ ಜತೆ ಸಿಬಿಐ ಈ ಸಮನ್ವಯ ಸಾಧಿಸಿತ್ತು. ಪರಿಣಾಮವಾಗಿ, ರೆಡ್ ನೋಟಿಸ್​​ಗೆ ಒಳಪಟ್ಟ ಅಪರಾಧಿ ಅಮೆರಿಕದಿಂದ ಭಾರತಕ್ಕೆ ವಾಪಸಾಗಿದ್ದಾನೆ.
ಬೆಂಗಳೂರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕ್​​ಗಳಿಗೆ ನೀಡಿ ಸಾಲ ಪಡೆದು (ಇನ್‌ಲ್ಯಾಂಡ್ ಲೆಟರ್ ಆಫ್ ಕ್ರೆಡಿಟ್ಸ್) ವಂಚನೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ರೆಡ್ ನೋಟಿಸ್​ಗೆ ಗುರಿಯಾಗಿದ್ದ ವ್ಯಕ್ತಿಯು ಸಿಬಿಐಗೆ ಬೇಕಾಗಿತ್ತು.
ಇದನ್ನೂ ಓದಿ:ಸ್ಪಂದನಾಗೆ ತಾಳಿ ಕಟ್ಟಿ ಅಂತಿಮ ವಿದಾಯ ಹೇಳಿದ ಪತಿ ವಿಜಯ ರಾಘವೇಂದ್ರ
ಸಿಬಿಐ ಮನವಿ ಮೇರೆಗೆ ಈತನ ವಿರುದ್ಧ ಏ. 4ರಂದು ಇಂಟರ್​​ಪೋಲ್ ರೆಡ್ ನೋಟಿಸ್ ಹೊರಡಿಸಲಾಗಿತ್ತು. ಈತನನ್ನು ಬೆಂಗಳೂರಿನ ಸಿಬಿಐ ಪ್ರಕರಣಗಳ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಅಪರಾಧಿ ಎಂದು ಘೋಷಿಸಿ, 3 ವರ್ಷಗಳ ಜೈಲು ಶಿಕ್ಷೆಗೆ ಗುರಿ ಮಾಡಿದ್ದರು. ಈ ತೀರ್ಪಿನ ನಂತರ ನಂತರ ಈತ ದೇಶದಿಂದ ಪರಾರಿಯಾಗಿದ್ದ.
ಆರೋಪಿಯು ಅಮೆರಿಕದಿಂದ ಸಂಯುಕ್ತ ಅರಬ್ ಎಮಿರೇಟ್ಸ್ ಮೂಲಕ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಸಿಬಿಐ ಬಂಧಿಸಿತು. ಆತನನ್ನು ಇಂದು ಬೆಂಗಳೂರಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಡಾ.ರಾಜ್ ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರ ಸಾವು; ಕಾರಣ ತಿಳಿಯಲು ಸದ್ಯದಲ್ಲೇ ಅಷ್ಟಮಂಗಲ ಪ್ರಶ್ನೆ!

ಕಳವಾದ ಮೊಬೈಲ್‌ಫೋನ್ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸುವಲ್ಲಿ ಕರ್ನಾಟಕ ಪೊಲೀಸರೇ ಪ್ರಥಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 12 =
Remember me
