ಕೊಚ್ಚಿ:ಚಿನ್ನ ಕಳ್ಳಸಾಗಣೆ ಕೇಸ್​ನ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಕಸ್ಟಡಿ ವಿಸ್ತರಣೆ ಕೋರಿ ಸೆಂಟ್ರಲ್ ಬ್ಯೂರೋ ಆಫ್ ಇನ್​ವೆಸ್ಟಿಗೇಶನ್ (ಸಿಬಿಐ) ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ವಡಕ್ಕನ್​ಚೇರಿಯ ಲೈಫ್ ಮಿಶನ್ ಪ್ರಾಜೆಕ್ಟ್​ನ ಅವ್ಯವಹಾರಕ್ಕೆ ಸಂಬಂಧಿಸಿ ಸ್ವಪ್ನಾಳನ್ನೂ ವಿಚಾರಣೆಗೆ ಒಳಪಡಿಸಲು ಸಿಬಿಐ ತೀರ್ಮಾನಿಸಿದೆ.
ಈ ಕೇಸ್​ನಲ್ಲಿ ಯುನಿಟಕ್​ ಬಿಲ್ಡರ್ಸ್​ನ ಮಾಲೀಕ ಸಂತೋಷ್ ಈಪನ್​ ಮೊದಲ ಆರೋಪಿ. ಸ್ವಪ್ನಾ ಕೂಡ ಇದರಲ್ಲಿ ಭಾಗಿಯಾಗಿರುವುದಕ್ಕೆ ಪ್ರಾಥಮಿಕ ಸಾಕ್ಷ್ಯಗಳು ದೊರಕಿದ ಕಾರಣ ಆಕೆಯನ್ನೂ ವಿಚಾರಣೆಗೊಳಪಡಿಸುವುದಕ್ಕಾಗಿ ಸಿಬಿಐ ಕಸ್ಟಡಿ ವಿಸ್ತರಣೆ ಕೋರಿದೆ.
ಇದನ್ನೂ ಓದಿ:ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್ ಪೂರ್ವಜರ ಮನೆ ಖರೀದಿಗೆ ಪಾಕ್​ ಸರ್ಕಾರದ ಒಲವು
ಮೂಲಗಳ ಪ್ರಕಾರ, ಸ್ವಪ್ನಾ ಅಲ್ಲದೆ, ಗೋಲ್ಡ್ ಸ್ಮಗ್ಲಿಂಗ್ ಕೇಸ್​ನ ಇನ್ನೊಬ್ಬ ಆರೋಪಿ ಪಿ.ಎಸ್.ಸರಿತ್​ ನ ಕಸ್ಟಡಿ ವಿಸ್ತರಣೆಗೂ ಸಿಬಿಐ ಅರ್ಜಿ ಸಲ್ಲಿಸಿದೆ. ಈ ಹಿಂದೆ ಸ್ವಪ್ನಾ ನೀಡಿದ ಹೇಳಿಕೆ ಪ್ರಕಾರ, ಆಕೆ ಈ ಪ್ರಾಜೆಕ್ಟ್​ನಲ್ಲಿ 1 ಕೋಟಿ ರೂಪಾಯಿ ಕಮಿಷನ್ ಪಡೆದಿದ್ದಾರೆ. ಲೈಫ್ ಮಿಷನ್ ಮತ್ತು ಯುಎಇ ಮೂಲದ ರೆಡ್​ ಕ್ರೆಸೆಂಟ್ ನಡುವೆ ಈ ಸಂಬಂಧ ಒಪ್ಪಂದ ಏರ್ಪಟ್ಟಿದ್ದು, ಬಿಲ್ಡರ್​ ಸಂತೋಷ್ ಈಪನ್​ ಅನ್ನು ಲೈಫ್ ಮಿಷನ್ ಆಯ್ಕೆ ಮಾಡಿದೆ. ಈ ಅವ್ಯವಹಾರ ಕುರಿತು ಸಿಬಿಐ ವಿಸ್ತೃತ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಕರೊನಾ ವೈರಸ್ ಗಾಳಿಯಲ್ಲಿ ಹರಡುತ್ತಾ, ಹೌದಾದರೆ ಹೇಗೆ? – ಶುರುವಾಗಿದೆ ಅಧ್ಯಯನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − six =
Remember me
