ನವದೆಹಲಿ:ವಿವಿಐಪಿ ಕಾಪ್ಟರ್ ಅಗಸ್ಟಾ ವೆಸ್ಟ್​ಲ್ಯಾಂಡ್ ಖರೀದಿ ಹಗರಣಕ್ಕೆ ಸಂಬಂಧಿಸಿ ಪ್ರಮುಖ ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್​ ಜೇಮ್ಸ್, ರಾಜೀವ್ ಸಕ್ಸೇನಾ ಮತ್ತು 13 ಇತರರ ವಿರುದ್ಧ ಸೆಂಟ್ರಲ್ ಬ್ಯೂರೋ ಆಫ್ ಇನ್​ವೆಸ್ಟಿಗೇಶನ್​ (ಸಿಬಿಐ) ಶನಿವಾರ ಆರೋಪ ಪಟ್ಟಿ ಸಲ್ಲಿಸಿದೆ.
ಹೊಸ ಪೂರಕ ಆರೋಪ ಪಟ್ಟಿಯಲ್ಲಿ ಬ್ರಿಟಿಷ್​ ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್​ ಪಾತ್ರವನ್ನು ವಿವರಿಸಲಾಗಿದ್ದು, 3,727 ಕೋಟಿ ರೂಪಾಯಿಗಳ ಹಗರಣದಲ್ಲಿ ಭಾರತದ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚ ಹೇಗೆ ನೀಡಲಾಗಿತ್ತು ಎಂಬ ವಿವರವಿದೆ. ಇದು ಪೂರಕ ಆರೋಪ ಪಟ್ಟಿಯಾಗಿದ್ದು ರಕ್ಷಣಾ ಸಚಿವಾಲಯದ ಮಾಜಿ ಕಾರ್ಯದರ್ಶಿ ಶಶಿಕಾಂತ್ ಶರ್ಮಾ ಅವರ ಹೆಸರನ್ನು ಉಲ್ಲೇಖಿಸದೆಯೇ ಮತ್ತು ನಾಲ್ವರು ಭಾರತೀಯ ವಾಯುಪಡೆಯ ಅಧಿಕಾರಿಗಳ ವಿವರವನ್ನೂ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:9 ಅಲ್​ಕೈದಾ ಉಗ್ರರ ಸೆರೆ- ಕೇರಳ, ಪಶ್ಚಿಮ ಬಂಗಾಳ ಸೇರಿ ವಿವಿಧೆಡೆ ಎನ್​ಐಎ ವಿಶೇಷ ಕಾರ್ಯಾಚರಣೆ
ಇವರ ವಿರುದ್ಧ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಸಿಬಿಐ ಮಾರ್ಚ್ ತಿಂಗಳಲ್ಲೇ ಅನುಮತಿ ಕೋರಿತ್ತು. ರಕ್ಷಣಾ ಸಚಿವಾಲಯದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಇದುವರೆಗೆ ಸಲ್ಲಿಕೆಯಾದ ಎರಡು ಆರೋಪ ಪಟ್ಟಿಗಳಲ್ಲಿ ಯಾವ ರಾಜಕಾರಣಿಯ ಹೆಸರೂ ಉಲ್ಲೇಖವಾಗಿಲ್ಲ. 2017ರ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು. (ಏಜೆನ್ಸೀಸ್)
ಕಾನೂನು ದುರ್ಬಳಕೆ ಮಾಡಿದ್ದಕ್ಕಾಗಿ 2 ಕೋಟಿ ಡಿಮಾಂಡ್ ಮುಂದಿಟ್ಟ ಕಂಗನಾ: ಪರಿಹಾರಕ್ಕೆ ಅರ್ಹವಲ್ಲ ಎಂದ ಬಿಎಂಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 2 =
Remember me
