ಮುಂಬೈ:ಯೆಸ್ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್​ರನ್ನು ಭಾನುವಾರ (ಮಾ. 8) ಮುಂಜಾನೆ ಅರೆಸ್ಟ್​ ಮಾಡಿದ್ದ ಇ.ಡಿ.ಅಧಿಕಾರಿಗಳು ಮುಂಬೈ ಸೆಷನ್ಸ್​ ಕೋರ್ಟ್​ಗೆ ಹಾಜರು ಪಡಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಮಾ.11ರವರೆಗೆ ರಾಣಾ ಅವರನ್ನು ಇ.ಡಿ.ವಶಕ್ಕೆ ನೀಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಸಿಬಿಐ ಕೂಡ ಅವರ ವಿರುದ್ಧ ಎಫ್​ಐಆರ್ ದಾಖಲು ಮಾಡಿದೆ.
ದಿವಾನ್ ಹೌಸಿಂಗ್​ ಫೈನಾನ್ಸ್​ ಕಾರ್ಪೋರೇಶನ್​ (ಡಿಎಚ್​ಎಫ್​ಎಲ್​), ಯೆಸ್​ ಬ್ಯಾಂಕ್ ಮತ್ತು ರಾಣಾ ಕಪೂರ್​ ಅವರ ಪುತ್ರಿಯರ ಮಾಲೀಕತ್ವದ ಕಂಪನಿಗಳ​ ನಡುವೆ ಅಕ್ರಮ ಹಣ ವಹಿವಾಟು ನಡೆದಿದೆ ಎಂಬ ಶಂಕೆಯಡಿ ಸಿಬಿಐ ಕೂಡ ವಿಚಾರಣೆ ಕೈಗೆತ್ತಿಕೊಂಡಿದೆ.
ಈ ಮಧ್ಯೆ ಯೆಸ್​ ಬ್ಯಾಂಕ್ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್​ ಸೇರಿ ಪ್ರತಿಪಕ್ಷಗಳು ಹೇಳುತ್ತಿವೆ.ಸಿಬಿಐ ರಾಣಾ ಕಪೂರ್​ ವಿರುದ್ಧ ಎಫ್​ಐಆರ್​ ದಾಖಲು ಮಾಡುತ್ತಿದ್ದಂತೆ ಇ.ಡಿ. ಅಧಿಕಾರಿಗಳು ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್)ನ್ನು ದಾಖಲಿಸಿದ್ದಾರೆ.
ದೇಶ ಬಿಟ್ಟು ಹೊರಟಿದ್ದ ರಾಣಾ ಪುತ್ರಿ
ಯೆಸ್​ ಬ್ಯಾಂಕ್​ ದಿವಾಳಿಗೆ ಸಂಬಂಧಪಟ್ಟಂತೆ ರಾಣಾ ಕಪೂರ್​ ಅವರ ಪತ್ನಿ ಬಿಂದು ಕಪೂರ್​, ಪುತ್ರಿಯರು ಹಾಗೂ ಅಳಿಯನನ್ನು ಇ.ಡಿ. ಶನಿವಾರ ವಿಚಾರಣೆಗೆ ಒಳಪಡಿಸಿದೆ. ಅಷ್ಟಾದ ಕೂಡಲೇ ರಾಣಾ ಅವರ ಪುತ್ರಿ ರೋಶಿನಿ ಕಪೂರ್​ ಮಾ.8ರಂದು ಲಂಡನ್​ಗೆ ತೆರಳಲು ಸಜ್ಜಾಗಿದ್ದರು. ವಿಮಾನ ಏರಲು ಮುಂಬೈ ಏರ್​ಪೋರ್ಟ್​ಗೆ ಬಂದ ಅವರನ್ನು ಅಧಿಕಾರಿಗಳು ತಡೆದಿದ್ದಾರೆ.
ರಾಣಾ ಕಪೂರ್​ ಹಾಗೂ ಅವರ ಕುಟುಂಬಕ್ಕೆ ಇ.ಡಿ.ಈಗಾಗಲೇ ಲುಕ್​ಔಟ್​ ನೋಟಿಸ್​ ಜಾರಿ ಮಾಡಿದ್ದು, ಅದರ ಅನ್ವಯ ದೇಶಬಿಟ್ಟು ಹೋಗುವಂತಿಲ್ಲ. (ಏಜೆನ್ಸೀಸ್​)
ಯೆಸ್​ ಬ್ಯಾಂಕ್ ಸಂಸ್ಥಾಪಕನಿಗೆ ಪೀಕಲಾಟ; ಸದ್ಯಕ್ಕೆ ತಪ್ಪುವಂತೆ ಕಾಣುತ್ತಿಲ್ಲ ಇ.ಡಿ. ಹಿಡಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + one =
Remember me
