ನವದೆಹಲಿ:ಬ್ಯಾಂಕ್​ ಆಫ್​ ಇಂಡಿಯಾ ನೇತೃತ್ವದ ಬ್ಯಾಂಕುಗಳ ಒಕ್ಕೂಟಕ್ಕೆ ವಂಚನೆ ಮಾಡಿದ ಆರೋಪದ ಮೇಲೆ ಐಸ್​ಕ್ರೀಮ್​ ತಯಾರಿಕಾ ಕ್ವಾಲಿಟಿ ಲಿಮಿಟೆಡ್​ ಕಂಪನಿ ವಿರುದ್ಧ ಸಿಬಿಐ ಸೋಮವಾರ ವಂಚನೆ ಪ್ರಕರಣ ದಾಖಲಿಸಿದೆ.
ಕ್ವಾಲಿಟಿ ಕಂಪನಿಯು ಸುಮಾರು 1,400 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಬ್ಯಾಂಕ್​ ಆಫ್​ ಇಂಡಿಯಾ ದೂರು ನೀಡಿದ ಬಳಿಕ ತನಿಖಾ ಸಂಸ್ಥೆ ದೂರು ದಾಖಲಿಸಿಕೊಂಡಿದ್ದು, ದೆಹಲಿ, ಬುಲಂದ್​ಶಹರ್​, ಶಹರನ್​ಪುರ್​, ಅಜ್ಮೇರ್​ ಮತ್ತು ಪಲ್ವಾಲ್​ ಸೇರಿದಂತೆ ಐಸ್​ಕ್ರೀಮ್​ ಕಂಪನಿಗೆ ಸಂಬಂಧಿಸಿದ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಇದನ್ನೂ ಓದಿ:ಡೇಟಿಂಗ್​ ಆ್ಯಪ್​ ವಿರುದ್ಧ ತಿರುಗಿಬಿದ್ದ ನಟಿ, ಟಿಎಂಸಿ ಸಂಸದೆ ನುಸ್ರತ್​ ಜಹಾನ್​..!
ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಕಂಪನಿಯ ನಿರ್ದೇಶಕರಾದ ಸಂಜಯ್​ ಧಿಂಗ್ರ, ಸಿದ್ಧಂತ್​ ಗುಪ್ತಾ ಮತ್ತು ಅರುಣ್​ ಶ್ರೀವಾತ್ಸವ ಹೆಸರು ಉಲ್ಲೇಖವಾಗಿದ್ದು, ಇತರೆ ಅಪರಿಚಿತರ ಹೆಸರು ಕೂಡ ಕೇಳಿಬಂದಿದೆ.
ಕ್ವಾಲಿಟಿ ಕಂಪನಿಯೂ ಬ್ಯಾಂಕ್​ ನಿಧಿಗಳನ್ನು ಬೇರೆಡೆ ತಿರುಗಿಸುವುದು, ಸಂಬಂಧಿತ ಪಕ್ಷಗಳಿಗೆ ಅಕ್ರಮ ಹಣ ವರ್ಗಾವಣೆ, ನಕಲಿ ದಾಖಲೆ ಮತ್ತು ರಶೀದಿ ಹಾಗೂ ಸುಳ್ಳು ಲೆಕ್ಕಪತ್ರಗಳು ಮತ್ತು ನಕಲಿ ಸ್ವತ್ತುಗಳನ್ನು ನಿರ್ಮಿಸುವುದು ಸೇರಿದಂತೆ ಅನೇಕ ಮಾರ್ಗದಲ್ಲಿ ವಂಚನೆ ಎಸಗಿದೆ ಎಂದು ಬ್ಯಾಂಕ್​ ಆಫ್​ ಇಂಡಿಯಾ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಬ್ಯಾಂಕ್​ ಆಫ್​ ಇಂಡಿಯಾ ನೇತೃತ್ವದ ಬಾಂಕುಗಳ ಒಕ್ಕೂಟದಲ್ಲಿ ಕೆನರಾ ಬ್ಯಾಂಕ್​, ಬ್ಯಾಂಕ್​ ಆಫ್​ ಬರೋಡಾ, ಐಡಿಬಿಐ, ಸೆಂಟ್ರಲ್​ ಬ್ಯಾಂಕ್​ ಇಂಡಿಯಾ, ಧನಲಕ್ಷ್ಮೀ ಬ್ಯಾಂಕ್​ ಮತ್ತು ಸಿಂಡಿಕೇಟ್​ ಬ್ಯಾಂಕ್​ಗಳು ಒಳಗೊಂಡಿವೆ.(ಏಜೆನ್ಸೀಸ್​)
ರಾಮಮಂದಿರ ಭೂಮಿಪೂಜೆ ಬೆನ್ನಿಗೇ ಅಯೋಧ್ಯೆಯಲ್ಲಿ ರಿಯಾಲ್ಟಿ ಬೂಮ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 9 =
Remember me
