ನವದೆಹಲಿ:ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಮಾಹಿತಿ ಹಕ್ಕು ಕಾನೂನು (ಆರ್​ಟಿಐ) ವ್ಯಾಪ್ತಿಯಿಂದ ಪೂರ್ಣವಾಗಿ ವಿನಾಯಿತಿಯಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳ ಮಾಹಿತಿಯನ್ನು ಒದಗಿಸಲು ಪಾರದರ್ಶಕತೆ ಕಾನೂನು ಸಿಬಿಐಗೆ ಅನುಮತಿ ನೀಡುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಕೆಲವು ನಿರ್ದಿಷ್ಟ ಸಂಸ್ಥೆಗಳಿಗೆ ಕಾನೂನು ಅನ್ವಯವಾಗುವುದಿಲ್ಲ ಎನ್ನುವ ಆರ್​ಟಿಐ ಕಾನೂನಿನ 24ನೇ ಸೆಕ್ಷನ್ ಉಲ್ಲೇಖಿಸಿದ ಕೋರ್ಟ್, ಈ ವಿಚಾರದಲ್ಲಿ ಕಾನೂನಿನ ಎರಡನೇ ಶೆಡ್ಯೂಲ್​ನಲ್ಲಿ ಸಿಬಿಐ ಹೆಸರು ನಮೂದಾಗಿದ್ದರೂ ಇಂಥ ಸಂಸ್ಥೆಗಳಿಗೆ ಇಡೀ ಕಾನೂನು ಅನ್ವಯವಾಗದೆಂದು ಅರ್ಥವಲ್ಲ ಎಂದು ಸ್ಪಷ್ಟಪಡಿಸಿದೆ. ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಅರ್ಜಿದಾರರಿಗೆ ಒದಗಿಸಬಹುದೆಂದು ಸೆಕ್ಷನ್ 24ರ ನಿಯಮ ಹೇಳುತ್ತದೆ. ಅದನ್ನು ಎರಡನೇ ಶೆಡ್ಯೂಲ್​ನಲ್ಲಿ ನಮೂದಿಸಿದ ವಿನಾಯಿತಿ ವಿಭಾಗದಲ್ಲಿ ಸೇರಿಸಲಾಗದು ಎಂದು ಜನವರಿ 30ರ ಆದೇಶದಲ್ಲಿ ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಹೇಳಿದ್ದಾರೆ.
ಭಾರತೀಯ ಅರಣ್ಯ ಸೇವೆಯ (ಐಎಫ್​ಎಸ್) ಅಧಿಕಾರಿ ಸಂಜೀವ್ ಚತುರ್ವೆದಿ ಅವರಿಗೆ ಕೆಲವು ಮಾಹಿತಿಯನ್ನು ಒದಗಿಸುವಂತೆ ಸಿಬಿಐಗೆ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) 2019ರ ನವೆಂಬರ್​ನಲ್ಲಿ ಸೂಚಿಸಿದ್ದನ್ನು ಪ್ರಶ್ನಿಸಿ ತನಿಖಾ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ಆ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ತನ್ನ ನಿಲುವನ್ನು ವಿವರಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 16 =
Remember me
