ಮುಂಬೈ :ಭಾರೀ ಭ್ರಷ್ಟಾಚಾರದ ಸೂತ್ರಧಾರಿಯಾಗಿದ್ದ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್​ಮುಖ್​ ವಿರುದ್ಧ ಸಿಬಿಐ ಎಫ್​.ಐ.ಆರ್​. ದಾಖಲಿಸಿದೆ. ಇಂದು ದೇಶ್​ಮುಖ್ ಮತ್ತು ಅವರ ಆಪ್ತರಿಗೆ ಸಂಬಂಧಿಸಿದ ರಾಜ್ಯದ ಹಲವು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿ ಪತ್ತೆ ಕಾರ್ಯ ಕೈಗೊಂಡಿತು.
ಈಗ್ಗೆ ಒಂದು ತಿಂಗಳ ಹಿಂದೆ ಮುಂಬೈ ಮಾಜಿ ಪೊಲೀಸ್​ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ದೇಶ್​ಮುಖ್​ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಬಹಿರಂಗ ಪತ್ರ ಬರೆದಿದ್ದರು. ದೇಶ್​ಮುಖ್​ ಅವರು ಸುಮಾರು 100 ಕೋಟಿ ರೂಪಾಯಿ ಲಂಚ ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದರು. ಈ ಬಗೆಗಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿ, ಬಾಂಬೆ ಹೈಕೋರ್ಟ್​ ಸಿಬಿಐಗೆ ಪ್ರಾಥಮಿಕ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು.
ಇದನ್ನೂ ಓದಿ:ಆಕ್ಸಿಜನ್ ಪೂರೈಕೆ ಮೇಲ್ವಿಚಾರಣೆಗೆ ಲೈವ್ ಪೋರ್ಟಲ್ ಆರಂಭ
ತನಿಖೆ ಕೈಗೆತ್ತಿಕೊಂಡ ಸಿಬಿಐ ದೇಶ್​ಮುಖ್​ ಮತ್ತು ಅವರ ಪಿಎ ಕುಂದನ್ ಶಿಂದೆ, ಪಿಎಸ್​ ಸಂಜೀವ್ ಪಲಂದೆ ಅವರನ್ನು ವಿಚಾರಣೆ ನಡೆಸಿತ್ತು. ಈ ಬಗ್ಗೆ ಆರೋಪ ಮಾಡಿದ ಪರಮ್​ ಬೀರ್ ಸಿಂಗ್, ದೂರು ಸಲ್ಲಿಸಿದ ವಕೀಲೆ ಜಯಶ್ರೀ ಪಾಟೀಲ್, ಜೊತೆಗೆ ಬಂಧನದಲ್ಲಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜ್​ ಮತ್ತಿತರ ಪೊಲೀಸ್ ಅಧಿಕಾರಿಗಳ ಹೇಳಿಕೆ ದಾಖಲಿಸಿತು. ಆ ನಂತರ ದೇಶ್​ಮುಖ್ ವಿರುದ್ಧ ಸಾರ್ವಜನಿಕ ಸೇವಕರು ಅಕ್ರಮ ಹಣವನ್ನು ಪಡೆಯುವ ಅಪರಾಧವನ್ನು ಸಂಬಂಧಿಸಿದ ಪ್ರಿವೆಂಷನ್ ಆಫ್​ ಕರಪ್ಷನ್ ಆ್ಯಕ್ಟ್​ನ ಸೆಕ್ಷನ್ 7 ರ ಅಡಿ ಮತ್ತು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ 120 (ಬಿ) ಅಡಿಯಲ್ಲಿ ಸಿಬಿಐ ಕೇಸು ದಾಖಲಿಸಿದೆ.
“ದೇಶ್​​ಮುಖ್​ ವಿರುದ್ಧ ಪ್ರಕರಣ ಮುಂದುವರಿಸಲು ಸಾಕಷ್ಟು ಪುರಾವೆಗಳಿವೆ ಎಂದು ಸಿಬಿಐಗೆ ತೃಪ್ತಿಯಾದ ಹಿನ್ನೆಲೆಯಲ್ಲಿ ಏಪ್ರಿಲ್ 21 ರಂದು ಎಫ್ಐಆರ್ ದಾಖಲಿಸಲಾಯಿತು. ತನಿಖಾಧಿಕಾರಿಗಳ ಕರೊನಾ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಬೇಕಾಗಿದ್ದರಿಂದ ಸರ್ಚ್​ ಆಪರೇಷನ್​ಅನ್ನು ಆರಂಭಿಸಲು ಇದುವರೆಗೆ ಸಾಧ್ಯವಾಗಿರಲಿಲ್ಲ” ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಆಕ್ಸಿಜನ್ ಪೂರೈಕೆ ಮೇಲ್ವಿಚಾರಣೆಗೆ ಲೈವ್ ಪೋರ್ಟಲ್ ಆರಂಭ

48ನೇ ಸಿಜೆಐ ಆಗಿ ನ್ಯಾಯಮೂರ್ತಿ ಎನ್​.ವಿ.ರಮಣ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − one =
Remember me
