ಹಾಥರಸ್​: ದೇಶದ ಗಮನವನ್ನೇ ಸೆಳೆದಿದ್ದ ಹಾಥರಸ್​ ಅತ್ಯಾಚಾರ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ ತಂಡಕ್ಕೆ ವಹಿಸಿದ್ದು, ಇದೀಗ ಮಹತ್ವದ ಸಾಕ್ಷ್ಯವೊಂದು ಸಿಬಿಐ ಅಧಿಕಾರಿಗಳಿಗೆ ಸಿಕ್ಕಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡ ಆರೋಪಿಗಳಲ್ಲಿ ಒಬ್ಬನಾಗಿರುವ ಲವಕುಶ್​ ಸಿಕರ್ವರ್​ ಎಂಬಾತನ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಅಲ್ಲಿ ಕೆಂಪು ಕಲೆಗಳಿರುವ ಅಂಗಿವೊಂದು ಸಿಕ್ಕಿದೆ. ಇದನ್ನು ಫೊರೆನ್ಸಿಕ್​ ಸೈನ್ಸ್​ ವಿಭಾಗಕ್ಕೆ ಕಳಿಸಲಿರುವ ತಂಡ, ಕೆಂಪು ಕಲೆಗಳು ರಕ್ತದ್ದೂ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದೆ.
ಆದರೆ ಆರೋಪಿಯ ಮನೆಯವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಲವಕುಶ್​ ಪೇಂಟ್​ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅದು ಪೇಂಟ್​ ಕಲೆ ಎಂದು ಆತನ ಸಹೋದರ ರವಿ ಸಿಕರ್ವರ್​ ತಿಳಿಸಿದ್ದಾನೆ.
ಸಿಬಿಐ ಅಧಿಕಾರಿಗಳು ಮನೆಯಲ್ಲಿ ಸುಮಾರು ಎರಡು ಗಂಟೆ ಕಾಲ ಜಾಲಾಡಿದ್ದು, ಅವರಿಗೆ ಅಂತಹ ಸುಳಿವೇನೂ ಸಿಗಲಿಲ್ಲ. ಹೀಗಾಗಿ ಅವರು ಪೇಂಟ್​ನಿಂದ ಕಲೆ ಆಗಿರುವ ಅಂಗಿ ಕೊಂಡೊಯ್ದಿದ್ದಾರೆ ಎಂದು ಆರೋಪಿಯ ಕಿರಿಯ ಸಹೋದರ ಲಲಿತ್​ ಸಿಕರ್ವರ್​ ತಿಳಿಸಿದ್ದಾನೆ. ಹಾಥರಸ್​ನಲ್ಲಿ ಸೆ. 14ರಂದು 19 ವರ್ಷದ ಹುಡುಗಿ ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದು, ಬಳಿಕ ಯುವತಿ ಮೃತಪಟ್ಟಿದ್ದಳು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 14 =
Remember me
