ನವದೆಹಲಿ: ನಿವೃತ್ತಿ ಆಗಿ ಒಂದು ತಿಂಗಳು ಕಳೆಯುವಷ್ಟರಲ್ಲಿ ಸಿಬಿಐನ ಮಾಜಿ ಅಧಿಕಾರಿಯೊಬ್ಬರು ಸಿಬಿಐನಿಂದಲೇ ಬಂಧನಕ್ಕೆ ಒಳಗಾಗಿದ್ದಾರೆ. ಶನಿವಾರ ಸಿಬಿಐ ಅಧಿಕಾರಿಗಳು ಸಿಬಿಐ ಮಾಜಿ ಎಸ್​ಪಿ ಎನ್​ಎಂಪಿ ಸಿನ್ಹ ಅವರನ್ನು ಬಂಧಿಸಿದ್ದಾರೆ.
ಅಧಿಕಾರಿಗಳು ದೆಹಲಿ, ನೋಯ್ಡಾ, ಫರಿದಾಬಾದ್​, ಘಾಜಿಯಾಬಾದ್​, ರಾಂಚಿಗಳಲ್ಲಿನ ಒಟ್ಟು ಎಂಟು ಕಡೆ ದಾಳಿ ನಡೆಸಿದ್ದರು. ಈ ಸಂದರ್ಭ ಸಿನ್ಹ ಜತೆಗೆ ಶಾಮೀಲಾಗಿದ್ದ ಇನ್ನೊಬ್ಬ ಖಾಸಗಿ ವ್ಯಕ್ತಿಯನ್ನೂ ಬಂಧಿಸಿದ್ದಾರೆ. ಸುಪರ್​ವೈಸಿಂಗ್ ಅಧಿಕಾರಿಯಾಗಿದ್ದ ಸಿನ್ಹ ಲಂಚ ಪಡೆದಿದ್ದ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಎಕನಾಮಿಕ್​ ಅಫೆನ್ಸ್​ ವಿಂಗ್​ನಲ್ಲಿ ಎಸ್​ಪಿ ಆಗಿದ್ದ ಸಿನ್ಹ ಆಗಸ್ಟ್​ನಲ್ಲಿ ನಿವೃತ್ತರಾಗಿದ್ದರು. ತಾವು ತನಿಖೆ ನಡೆಸಿದ್ದ ಉಷಾ ಮಾರ್ಟಿನ್​ ಪ್ರಕರಣದ ಸಂಬಂಧ 25 ಲಕ್ಷ ರೂ. ಲಂಚ ಪಡೆದಿರುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + eight =
Remember me
