ಮುಂಬೈ/ನವದೆಹಲಿ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಅರಂಭಿಸಿದೆ. ಸುಪ್ರೀಂಕೋರ್ಟ್ ಆದೇಶ ಅನ್ವಯ ತನಿಖೆ ನಡೆಸಲಾಗುತ್ತಿದೆ. ಸುಶಾಂತ್ ಅವರ ಕಚೇರಿ ಸಿಬ್ಬಂದಿಯನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಮುಖ ಸಾಕ್ಷಿಗಳಲ್ಲಿ ಒಬ್ಬನಾದ ಸುಶಾಂತ್​ರ ಅಡುಗೆ ಕೆಲಸದವನನ್ನು ಅಧಿಕಾರಿಗಳು ವಿಚಾರಣೆ ನಡೆಸಿದರು. ಸುಶಾಂತ್ ಜೂನ್ 14ರಂದು ಬಾಂದ್ರಾದ ಫ್ಲಾ ್ಯ್ನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ನೂಪುರ್ ಪ್ರಸಾದ್ ನೇತೃತ್ವದ ಸಿಬಿಐ ವಿಶೇಷ ತನಿಖಾ ತಂಡದ (ಎಸ್​ಐಟಿ) ಸದಸ್ಯರು ಗುರುವಾರ ರಾತ್ರಿಯೇ ಮುಂಬೈ ತಲುಪಿದರು. ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ (ಸಿಎಫ್​ಎಸ್​ಎಲ್) ತಜ್ಞರೂ ತಂಡದಲ್ಲಿದ್ದಾರೆ. ಸುಶಾಂತ್​ರ ಮರಣೋತ್ತರ ಪರೀಕ್ಷಾ ವರದಿಯನ್ನೂ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಸುಶಾಂತ್ ಪ್ರಕರಣದ ಕೇಸ್ ಡೈರಿ, ಸುಶಾಂತ್​ರ ಫೋನ್, ಲ್ಯಾಪ್​ಟಾಪ್ ಮತ್ತು ಇತರ ವಿಧಿವಿಜ್ಞಾನ ಸಂಬಂಧಿತ ಡೇಟಾಗಳನ್ನು ಸಿಬಿಐ ಅಧಿಕಾರಿಗಳು ಬಾಂದ್ರಾ ಪೊಲೀಸರಿಂದ ಪಡೆದುಕೊಂಡಿದ್ದಾರೆ.
ವೈದ್ಯರ ವಿಚಾರಣೆ: ಸುಶಾಂತ್​ರ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ಐದು ವೈದ್ಯರನ್ನು ಸಿಬಿಐ ವಿಚಾರಣೆ ನಡೆಸಲಿದೆ. ಪರೀಕ್ಷೆ ವೇಳೆ ರಿಯಾ ಚಕ್ರವರ್ತಿ ಆಸ್ಪತ್ರೆಯಲ್ಲಿ ಇದ್ದ ಬಗ್ಗೆ ಹಾಗೂ ಆಕೆಯನ್ನು ಶವಾಗಾರಕ್ಕೆ ಬಿಟ್ಟಿದ್ದು ಯಾರು? ಎನ್ನುವ ಕುರಿತೂ ವಿಚಾರಣೆ ನಡೆಯಲಿದೆ ಎನ್ನಲಾಗಿದೆ.
ರಿಯಾ ವಿಚಾರಣೆ ಮುಂದಿನ ವಾರ?
ಪ್ರಮುಖ ಆರೋಪಿಗಳಾದ
ಸುಶಾಂತ್​ರ ಗೆಳತಿ, ನಟಿ ರಿಯಾ ಚಕ್ರವರ್ತಿ, ಆಕೆಯ ಕುಟುಂಬ ಸದಸ್ಯ ರನ್ನು ಸಿಬಿಐ ಮುಂದಿನ ವಾರ ಪ್ರಶ್ನಿಸಲಿದೆ. ರಿಯಾರನ್ನು ಎಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂಬುದನ್ನು ಸಿಬಿಐ ಇನ್ನೂ ನಿರ್ಧರಿಸಿಲ್ಲ. ಸಾಮಾನ್ಯವಾಗಿ ಮಹಿಳಾ ಆರೋಪಿಗಳನ್ನು ಅವರ ಮನೆಯಲ್ಲೇ ವಿಚಾರಣೆ ನಡೆಸುವುದು ನಿಯಮವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 7 =
Remember me
