ನವದೆಹಲಿ :ಪಂಜಾಬ್​ ನ್ಯಾಷನಲ್ ಬ್ಯಾಂಕ್​ ವಂಚನೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಅವರನ್ನು ಡೊಮಿನಿಕಾ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದ ಪಕ್ಷದಲ್ಲಿ ಅವರನ್ನು ಕೂಡಲೇ ವಾಪಸ್​ ಕರೆತರಲು ಸಿಬಿಐ ತಂಡ ಸಿದ್ಧವಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಶಾರದಾ ರೌತ್​ ನೇತೃತ್ವದಲ್ಲಿ 6 ಸಿಬಿಐ ಅಧಿಕಾರಿಗಳು ಈಗಾಗಲೇ ಡೊಬಿನಿಕಾದಲ್ಲಿದ್ದಾರೆ.
ಡೊಮಿನಿಕನ್ ಕೋರ್ಟ್​ ಹಸ್ತಾಂತರದ ಆದೇಶ ಹೊರಡಿಸಿದರೆ, ಚೋಕ್ಸಿಯನ್ನು ಖಾಸಗಿ ಜೆಟ್​ನಲ್ಲಿ, ಈ ಸಿಬಿಐ ತಂಡ ಭಾರತಕ್ಕೆ ಕರೆತರಲಿದೆ. ಭಾರತದಲ್ಲಿ ವಿಮಾನ ಇಳಿದ ಕೂಡಲೇ ಶಾರದಾ ರೌತ್​ ಅವರು, ಚೋಕ್ಸಿ ಅವರನ್ನು ಬಂಧನಕ್ಕೆ ಒಳಪಡಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ವೈದ್ಯರ ಮೇಲಿನ ಹಿಂಸಾಚಾರ ತಡೆಯಲು ಕಾನೂನು ತನ್ನಿ : ಐಎಂಎ
ಚೋಕ್ಸಿಯ ಹಸ್ತಾಂತರದ ಬಗ್ಗೆ ಡೊಮಿನಿಕಾದ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಆತ ಭಾರತದ ನಾಗರೀಕನಾಗಿರುವ ಬಗ್ಗೆ, ಕ್ರಿಮಿನಲ್​ ಚಟುವಟಿಕೆಗಳಲ್ಲಿ ತೊಡಗಿದ್ದ ಬಗ್ಗೆ ಮತ್ತು 2018 ರ ಜನವರಿಯಿಂದ ಪರಾರಿಯಾಗಿರುವ ಬಗ್ಗೆ ಇಡಿ ಮತ್ತು ಸಿಬಿಐ ಪರವಾಗಿ ಡೊಮಿನಿಕಾದ ಸರ್ಕಾರಿ ವಕೀಲರು ವಾದ ಮಾಡಲಿದ್ದಾರೆ ಎನ್ನಲಾಗಿದೆ.(ಏಜೆನ್ಸಿಸ್)
VIDEO | ಕರೊನಾ ರೋಗಿ ಸತ್ತಿದ್ದಕ್ಕೆ ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದರು! ಹಲ್ಲೆ ಮಾಡಿದ 24 ಜನರು ಜೈಲಿಗೆ

ಹೆಂಡತಿ ವಿರುದ್ಧ ಕೌಟುಂಬಿಕ ಹಿಂಸಾಚಾರ ಕಾನೂನು ಇಲ್ಲದ್ದು ದುರದೃಷ್ಟ : ಮದ್ರಾಸ್​ ಹೈಕೋರ್ಟ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + fifteen =
Remember me
