ನವದೆಹಲಿ:ದೇಶದ ಉನ್ನತ ತನಿಖಾ ಸಂಸ್ಥೆಯಾದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್​(ಸಿಬಿಐ) ನ ಹಾಲಿ ನಿರ್ದೇಶಕ ಆರ್.ಕೆ.ಶುಕ್ಲಾ ಅವರ ಕಾರ್ಯಾವಧಿ ಇಂದು (ಫೆಬ್ರವರಿ 3) ಮುಗಿಯುತ್ತಿದೆ. ಆದರೆ ಹೊಸ ನಿರ್ದೇಶಕರ ಆಯ್ಕೆ ಇನ್ನೂ ಪೂರೈಸಿಲ್ಲ. ಸದ್ಯಕ್ಕೆ ಸಿಬಿಐನ ಹೆಚ್ಚುವರಿ ನಿರ್ದೇಶಕರಾದ ಪ್ರವೀಣ್ ಸಿನ್ಹಾ ಮಧ್ಯಂತರ ನಿರ್ದೇಶಕರಾಗಿ (ಇಂಟೆರಿಮ್ ಡೈರೆಕ್ಟರ್) ಉಸ್ತುವಾರಿ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯ ಪ್ರದೇಶ ಕೇಡರ್​ನ ಐಪಿಎಸ್​ ಅಧಿಕಾರಿಯಾದ ರಿಷಿ ಕುಮಾರ್ ಶುಕ್ಲಾ ಅವರನ್ನು ಜನವರಿ 2019 ರಲ್ಲಿ ಸಿಬಿಐ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು. ಅವರ ಎರಡು ವರ್ಷದ ಅಧಿಕಾರಾವಧಿಯಲ್ಲಿ ಯಾವುದೇ ವಿಸ್ತರಣೆ ಮಾಡಲಾಗಿಲ್ಲ. ಹೊಸ ನಿರ್ದೇಶಕರ ಆಯ್ಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಶೀಘ್ರದಲ್ಲಿ ನಡೆಸಲಿದೆ. ಅಲ್ಲಿಯವರೆಗೂ ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿಯಾದ ಹಿರಿಯ ಸಿಬಿಐ ಹೆಚ್ಚುವರಿ ನಿರ್ದೇಶಕ ಪ್ರವೀಣ್ ಸಿನ್ಹಾ ಉಸ್ತುವಾರಿ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಅಮೆರಿಕದಲ್ಲಿ ನೆಲಕ್ಕುರುಳಿತು ಗಾಂಧಿ ಪ್ರತಿಮೆ: ಮುಖ, ಪಾದ ತುಂಡರಿಸಿದ ದುಷ್ಕರ್ಮಿಗಳು
ಸಿಬಿಐ ನಿರ್ದೇಶಕರ ಹುದ್ದೆಯ ಮುಖ್ಯ ಉಮೇದುದಾರರೆಂದರೆ ನ್ಯಾಷನಲ್ ಇನ್ವೇಸ್ಟಿಗೇಷನ್ ಏಜೆನ್ಸಿಯ ಮುಖ್ಯಸ್ಥರಾಗಿರುವ ವೈ.ಸಿ.ಮೋದಿ, ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಮುಖ್ಯಸ್ಥ ರಾಕೇಶ್ ಆಸ್ತಾನಾ, ಮಾಜಿ ಮಹಾರಾಷ್ಟ್ರ ಪೊಲೀಸ್ ಮುಖ್ಯಸ್ಥ ಸುಬೋಧ್ ಕುಮಾರ್ ಜೇಸ್ವಾಲ್, ಕೇರಳ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹುರಾ ಮತ್ತು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ ಡೈರೆಕ್ಟರ್ ಜನರಲ್ ಆಗಿರುವ ಎಸ್.ಎಸ್.ದೇಸ್ವಾಲ್.
ಸಿಬಿಐ ನಿರ್ದೇಶಕರ ಆಯ್ಕೆಯನ್ನು ಮಾಡುವ ಪ್ರಧಾನಿ ನೇತೃತ್ವದ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಮತ್ತು ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಇದ್ದಾರೆ. ಸಂಸತ್ತಿನ ಬಜೆಟ್ ಕಾರ್ಯಕಲಾಪಗಳ ನಂತರ ಈ ಸಮಿತಿಯು ಸಭೆ ಸೇರಿ ಹೊಸ ನಿರ್ದೇಶಕರ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ.(ಏಜೆನ್ಸೀಸ್)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − ten =
Remember me
