ನವದೆಹಲಿ:ಕೊರನಾವೈರಸ್ ಬಿಕ್ಕಟ್ಟಿನಿಂದಾಗಿ ಸಿಬಿಎಸ್‌ಇಯ 10 ಮತ್ತು 12 ನೇ ತರಗತಿಗಳ ಉಳಿದ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನಾಳೆ ಸುಪ್ರೀಂಕೋರ್ಟ್‌ ತೀರ್ಪು ಪ್ರಕಟಣೆ ಮಾಡುವ ಸಾಧ್ಯತೆ ಇದೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಈ ಕುರಿತು ತನ್ನ ನಿಲುವು ಏನು ಎಂಬ ಬಗ್ಗೆ ಮೊಹರು ಮಾಡಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಅಭಿಪ್ರಾಯ ಸಲ್ಲಿಸಿದೆ. ಇಂದು ರಾತ್ರಿಯ ವೇಳೆಗೆ ಕೇಂದ್ರ ಸರ್ಕಾರ ಮತ್ತು ಸಿಬಿಎಸ್‌ಇ ಮಂಡಳಿ ಅಧಿಕಾರಿಗಳ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಅವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಸುಪ್ರೀಂಕೋರ್ಟ್‌ ನಾಳೆ ಅಂತಿಮ ತೀರ್ಪು ನೀಡುವ ನಿರೀಕ್ಷೆ ಇದೆ.
ಇದನ್ನೂ ಓದಿ:ಕರೊನಾ ತಡೆಯಲು ವರ್ತಕರೇ ಕೈಗೊಂಡ ಸ್ವಯಂ ಲಾಕ್​ಡೌನ್ ನಾಳೆಯಿಂದ ಜಾರಿ
ಕರೊನಾವೈರಸ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಜುಲೈನಲ್ಲಿ ನಡೆಯಲಿರುವ ಬೋರ್ಡ್ ಪರೀಕ್ಷೆಗಳನ್ನು ಮುಂದೂಡುವಂತೆ ಕೆಲ ಪಾಲಕರು ಕೋರಿದ್ದರೆ, ಈ ಪರೀಕ್ಷೆಗಳನ್ನು ರದ್ದು ಮಾಡುವಂತೆ ಇನ್ನೂ ಕೆಲವರು ಕೋರಿದ್ದಾರೆ. ವಿದ್ಯಾರ್ಥಿಗಳ ಫಲಿತಾಂಶವನ್ನು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಘೋಷಿಸಬೇಕು ಎಂದೂ ಸಹ ಕೋರಲಾಗಿದೆ. ಇದಲ್ಲದೆ ಏಮ್ಸ್ ಮಾಹಿತಿಯ ಪ್ರಕಾರ ಮುಂಬರುವ ಸಮಯದಲ್ಲಿ ವೈರಸ್ ಭಾರತದಲ್ಲಿ ಉತ್ತುಂಗಕ್ಕೇರಲಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕು, ಪರೀಕ್ಷೆಗಳನ್ನು ಪಡೆಯುವುದು ತುಂಬಾ ಅಪಾಯಕಾರಿ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
10 ಮತ್ತು 12ನೇ ತರಗತಿಯ ಒಟ್ಟು 29 ವಿಷಯಗಳ ಪರೀಕ್ಷೆಗಳನ್ನು ನಡೆಯುತ್ತದೆ. ಜುಲೈ 1 ರಿಂದ ಪರೀಕ್ಷೆ ಪ್ರಾರಂಭದ ಬಗ್ಗೆ ಇದಾಗಲೇ ಘೋಷಣೆ ಹೊರಡಿಸಲಾಗಿದೆ.(ಏಜೆನ್ಸೀಸ್‌)
ರಾಜ್ಯದಲ್ಲಿ 10 ಸಾವಿರದ ಗಡಿ ದಾಟಿದ ಕರೊನಾ: ಒಂದೇ ದಿನ 14 ಬಲಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × four =
Remember me
