ನವದೆಹಲಿ:ಸಿಬಿಎಸ್​ಇಯ 10 ಮತ್ತು 12 ನೇ ತರಗತಿಗಳಿಗೆ ಬಾಕಿ ಇರುವ ಪರೀಕ್ಷೆಗಳನ್ನು ರದ್ದುಪಡಿಸಿ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸುವ ಕುರಿತು ಪರಿಶೀಲಿಸುವಂತೆ ಸುಪ್ರೀಂಕೋರ್ಟ್​ ಆದೇಶಿಸಿದೆ.
ಈ ಬಗೆಗಿನ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಮುಂದಿನ ಮಂಗಳವಾರದ ಒಳಗೆ ಮಾಹಿತಿ ನೀಡುವಂತೆ ಕೋರ್ಟ್​ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್ಇ) ನಿರ್ದೇಶಿಸಿದೆ.
ಈಗಾಗಲೇ ಕೆಲವು ಪರೀಕ್ಷೆಗಳನ್ನು ನಡೆಸಲಾಗಿದೆ. ಆದರೆ ಕರೊನಾ ವೈರಸ್​ ಹಿನ್ನೆಲೆಯಲ್ಲಿ ಉಳಿದ ಪರೀಕ್ಷೆಗಳನ್ನು ನಡೆಸದಂತೆ ಕೋರಿ ಅಮಿತ್ ಬಾತ್ಲಾ ಸೇರಿದಂತೆ ಅನೇಕ ಮಂದಿ ಪಾಲಕರು ಅರ್ಜಿ ಸಲ್ಲಿಸಿದ್ದರು. ಜುಲೈ 1 ರಿಂದ ಜುಲೈ 15 ರ ನಡುವೆ ಉಳಿದ ಪತ್ರಿಕೆಗಳಿಗೆ ಪರೀಕ್ಷೆಗಳನ್ನು ನಡೆಸಲು ಸಿಬಿಎಸ್‌ಇ ಯೋಜಿಸಿದ್ದು ಇದನ್ನು ರದ್ದುಗೊಳಿಸಲು ಆದೇಶಿಸುವಂತೆ ಅವರು ಕೋರಿದ್ದರು.
ಇದನ್ನೂ ಓದಿ:ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಸುಪ್ರೀಂಕೋರ್ಟ್​ ಅಸ್ತು
ಈಗಾಗಲೇ ನಡೆಸಿರುವ ಪರೀಕ್ಷೆಯ ಆಧಾರದ ಮೇಲೆ ಫಲಿತಾಂಶಗಳನ್ನು ಘೋಷಿಸಲು ಮತ್ತು ಉಳಿದ ವಿಷಯಗಳ ಆಂತರಿಕ ಮೌಲ್ಯಮಾಪನ ಅಂಕಗಳೊಂದಿಗೆ ಸರಾಸರಿ ಲೆಕ್ಕಾಚಾರ ಮಾಡಲು ಸಿಬಿಎಸ್‌ಇಗೆ ನಿರ್ದೇಶಿಸುವಂತೆ ಅವರು ಕೋರಿದ್ದರು.
ಇದೇ ರೀತಿ ಲಕ್ಷಾಂತರ ಪಾಲಕರು ಮನವಿ ಸಲ್ಲಿಸುತ್ತಿರುವುದು ವಿಚಾರಣೆ ವೇಳೆ ಕೋರ್ಟ್​ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲನೆ ಮಾಡುವಂತೆ ನಿರ್ದೇಶಿಸಿದೆ. ಸದ್ಯ ಯಾವುದೇ ಅಂತಿಮ ತೀರ್ಪನ್ನು ಪ್ರಕಟಿಸದ ಕೋರ್ಟ್​, ಮಂಡಳಿಗೆ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ. ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯಪೀಠ ನಡೆಸುತ್ತಿದ್ದು, ವಿಚಾರಣೆಯನ್ನು ಮುಂದೂಡಿದೆ.
ಒಂದು ಟೆಂಟ್​ಗಾಗಿ ಶುರುವಾಯ್ತಾ ಇಂಡೋ-ಚೈನಾ ಫೈಟ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 7 =
Remember me
