ನವದೆಹಲಿ:ಸಿಬಿಎಸ್​ಇ 12ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪರೀಕ್ಷೆ ನಡೆಯುತ್ತದೆಯೇ ಇಲ್ಲವೇ ಎನ್ನುವ ಗೊಂದಲಕ್ಕೆ ಈ ಮೂಲಕ ತೆರೆ ಎಳೆಯಲಾಗಿದೆ.
ಪರೀಕ್ಷೆ ನಡೆಸುವ ಸಾಧ್ಯಾಸಾಧ್ಯತೆಗಳ ಕುರಿತಾಗಿ ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಪರೀಕ್ಷೆ ನಡೆಸದೆಯೇ ಇರಲು ಬೇರಾವುದಾದರೂ ಪರ್ಯಾಯ ಮಾರ್ಗಗಳು ಇವೆಯೇ ಎನ್ನುವುದರ ಬಗ್ಗೆ ಪ್ರಧಾನಿ ಚರ್ಚೆ ಮಾಡಿದ್ದಾರೆ. ದೇಶದಲ್ಲಿ ಕರೊನಾ ಮಿತಿ ಮೀರಿರುವ ಈ ಸಮಯದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಗಿತ್ತು.
ಸಿಬಿಎಸ್​ಇ ಪರೀಕ್ಷೆಯ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಕೇಂದ್ರಕ್ಕೆ ಪ್ರಶ್ನೆ ಕೇಳಿತ್ತು. ಜೂನ್​ 3ರ ಒಳಗೆ ಕೇಂದ್ರ ಸುಪ್ರೀಂ ಕೋರ್ಟ್​ಗೆ ಪ್ರತಿಕ್ರಿಯೆ ನೀಡಬೇಕಿದೆ. (ಏಜೆನ್ಸೀಸ್​)
ಕರೊನಾ ಗೆದ್ದರೂ ಬಿಡಲೇ ಇಲ್ಲ ವಿಧಿ! ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ದಂಪತಿ ದುರಂತ ಅಂತ್ಯ!

ಸುತ್ತೂರು ಮಠಕ್ಕೆ ಸಿಪಿವೈ, ಸಿ.ಟಿ.ರವಿ & ಸುರೇಶ್ ಕುಮಾರ್​ ಪ್ರತ್ಯೇಕ ಭೇಟಿ; ಕುತೂಹಲ ಕೆರಳಿಸುತ್ತಿದೆ ಬಿಜೆಪಿ ನಾಯಕರ ನಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 10 =
Remember me
