ನವದೆಹಲಿ:ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್(ಸಿಬಿಎಸ್​ಇ) 12ನೇ ತರಗತಿಯ ಫಲಿತಾಂಶವು ಪ್ರಕಟಗೊಂಡಿದೆ. ಒಟ್ಟಾರೆ ಶೇ. 99.37 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ರಾಜ್ಯದ 12.96 ಲಕ್ಷ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಒಟ್ಟು 65,184 ವಿದ್ಯಾರ್ಥಿಗಳ ಫಲಿತಾಂಶವನ್ನು, ಪ್ರೊಸೆಸಿಂಗ್​ ಇನ್ನೂ ನಡೆಯುತ್ತಿರುವುದರಿಂದ, ಇಂದು ಪ್ರಕಟಿಸಲಾಗಿಲ್ಲ. ಅವರ ಫಲಿತಾಂಶವನ್ನು ಮಂಡಳಿಯು ಆಗಸ್ಟ್​ 5 ರಂದು ಪ್ರಕಟಿಸವುದು ಎನ್ನಲಾಗಿದೆ.
ಕರೊನಾ ಕಾರಣದಿಂದಾಗಿ ಈ ಬಾರಿ ಪರೀಕ್ಷೆಗಳನ್ನು ನಡೆಸದೆಯೇ, ವಿಶಿಷ್ಟ ಮಾದರಿಯಲ್ಲಿ ಮೌಲ್ಯಾಂಕನ ಮಾಡಲಾಗಿದೆ. ಶಾಲಾ ಆಂತರಿಕ ಅಂಕಗಳು, 11ನೇ ತರಗತಿ ಅಂಕಗಳು ಮತ್ತು 10ನೇ ತರಗತಿ ಬೋರ್ಡ್​ ಪರೀಕ್ಷೆ ಫಲಿತಾಂಶಗಳನ್ನು 40:30:30 ರೇಷಿಯೋದಲ್ಲಿ ಪರಿಗಣಿಸಿ ವಿದ್ಯಾರ್ಥಿಗಳ ಅಂಕಗಳನ್ನು ನಿರ್ಧರಿಸಲಾಗಿದೆ. ಕಳೆದ ವರ್ಷಕ್ಕಿಂತ ಶೇ.10 ರಷ್ಟು ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ತೇರ್ಗಡೆಯಾಗಿದ್ದಾರೆ. 2020ರಲ್ಲಿ ಶೇ. 88.8 ವಿದ್ಯಾರ್ಥಿಗಳು ಪಾಸಾಗಿದ್ದರೆ, 2019 ರಲ್ಲಿ ಶೇ.83.4 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರು.
ಇದನ್ನೂ ಓದಿ:ಭಾರತಕ್ಕೆ ಮತ್ತೊಂದು ಪದಕ ಗ್ಯಾರಂಟಿ! ಬಾಕ್ಸಿಂಗ್​ನಲ್ಲಿ ಸೆಮಿಫೈನಲ್ಸ್ ತಲುಪಿದ ಲವ್ಲೀನಾ ಬೊರ್ಗೊಹೈನ್
ಫಲಿತಾಂಶ ನೋಡಲುhttp://cbseresults.nic.in/ಕ್ಲಿಕ್ಕಿಸಿಅಥವಾ* ಸಿಬಿಎಸ್‌ಇ ಬೋರ್ಡ್​ ವೆಬ್​ಸೈಟ್​http://cbse.nic.inಗೆ ಲಾಗ್ ಇನ್ ಮಾಡಿ.* ಮುಖಪುಟದಲ್ಲಿ, ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ಕಿಸಿ* ರೋಲ್ ನಂಬರ್​, ನೋಂದಣಿ ಸಂಖ್ಯೆ, ಅಥವಾ ಇತರ ಅಗತ್ಯ ವಿವರಗಳೊಂದಿಗೆ ಲಾಗಿನ್ ಮಾಡಿ.* ಫಲಿತಾಂಶವನ್ನು ಮುಂದಿನ ಪುಟದಲ್ಲಿ ಪ್ರದರ್ಶಿಸಲಾಗುತ್ತದೆ.* ಪ್ರಿಂಟ್​ಔಟ್​ ಬೇಕಿದ್ದರೆ ತೆಗೆದುಕೊಳ್ಳಬಹುದು.
DigiLocker ಆ್ಯಪ್​ ಇನ್​ಸ್ಟಾಲ್​ ಮಾಡಿಕೊಳ್ಳುವ ಮೂಲಕವೂ ಫಲಿತಾಂಶ ನೋಡಬಹುದು.
ಸರ್ಕಾರ ಲೈಸೆನ್ಸ್​ ಪಡೆದಿದೆಯೇ? ಸುಪ್ರೀಂ ಅಂಗಳಕ್ಕೆ ಪೆಗಾಸಸ್ ಪ್ರಕರಣ!

ಕಾಲುಗಳಿಗೆ ಶಕ್ತಿ ತುಂಬುವ ಸರಳ ಯೋಗಾಸನ – ಎಲ್ಲರೂ ಮಾಡಬಹುದು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five + twenty =
Remember me
