ನವದೆಹಲಿ:ಕುತೂಹಲದಿಂದ ಕಾಯುತ್ತಿದ್ದ ಸಿಬಿಎಸ್​ಇ 12 ನೇ ತರಗತಿ ಬೋರ್ಡ್ ಫಲಿತಾಂಶಗಳನ್ನು ಇಂದು(ಮೇ 13) ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಪ್ರಕಟಿಸಿದೆ. ಇದು cbse.gov.in ನಲ್ಲಿ ಲಭ್ಯವಿದೆ.
ಇದನ್ನೂ ಓದಿ:ಲೋಕಸಭಾ ಚುನಾವಣೆ: 4ನೇ ಹಂತದ ಮತದಾನ – ಕೆಲವೆಡೆ ಹಿಂಸಾಚಾರ..ಮೊದಲೆರಡು ಗಂಟೆಗಳಲ್ಲಿ ಶೇ.10.35 ಮತದಾನ
24,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೇ.95 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 1.16 ಲಕ್ಷಕ್ಕೂ ಹೆಚ್ಚು ಮಂದಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಆದರ್ಶ್ ಕುಮಾರ್ ಸಿಂಗ್ ಮತ್ತು ಶ್ರೀಕೃಷ್ಣ ಸತ್ಯಜೀತ್ ಗಮನಾರ್ಹ ಮುನ್ನಡೆ ಸಾಧಿಸಿದ್ದಾರೆ. ಈ ವರ್ಷದ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳಿಗೆ ದೇಶಾದ್ಯಂತ ಸುಮಾರು 39 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಭಾಗವಾರು ಫಲಿತಾಂಶ ನೋಡುವುದಾದರೆ ತಿರುವನಂತಪುರ ಶೇ.99.91 ಫಲಿತಾಂಶದೊಂದಿಗೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಪ್ರಯಾಗ್​ರಾಜ್​ ಶೇ.78.25 ಫಲಿತಾಂಶದೊಂದಿಗೆ ಕಡೇ ಸ್ಥಾನದಲ್ಲಿದೆ. ಉಳಿದಂತೆ ವಿಜಯವಾಡ-ಶೇ.99.04 ಫಲಿತಾಂಶದೊಂದಿಗೆ 2ನೇ ಸ್ಥಾನ, ಚೆನ್ನೈ ಶೇ.98.473 ಫಲಿತಾಂಶದೊಂದಿಗೆ 3ನೇ ಸ್ಥಾನ ಹಾಗೂ ಶೇ.96.95 ಫಲಿತಾಂಶದೊಂದಿಗೆ ಬೆಂಗಳೂರು 4 ನೇ ಸ್ಥಾನದಲ್ಲಿದೆ.96.64 ಮತ್ತು 94.51 ಶೇಕಡಾವಾರು ಫಲಿತಾಂಶದೊಂದಿಗೆ ದೆಹಲಿ ಪಶ್ಚಿಮ ಮತ್ತು ಪೂರ್ವ ವಿಭಾಗಗಳಿದ್ದು, ಬಹುತೇಕ ಉತ್ತರದ ವಿಭಾಗಗಳು ನಂತರದ ಸ್ಥಾನಗಳಲ್ಲಿವೆ. ದಕ್ಷಿಣ ಭಾರತದ ವಿಭಾಗಗಳು ಮೇಲಿಂದ ಸ್ಥಾನಗಳನ್ನು ಪಡೆದಿರುವುದು ಗಮನಿಸಬಹುದಾಗಿದೆ.
12 ನೇ ತರಗತಿ ಫಲಿತಾಂಶಗಳನ್ನು ವಿದ್ಯಾರ್ಥಿಗಳು ತಮ್ಮ ಸಿಬಿಎಇ ಬೋರ್ಡ್ ಫಲಿತಾಂಶ 2024 ಅನ್ನು ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು:
cbse.gov.in, cbse.nic.in, cbseresults.nic.in, esults.cbse.nic.in ನಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲ, digilocker.gov.in ಮತ್ತು results.gov.in ಮೂಲಕ ಪರಿಶೀಲಿಸಬಹುದು.
ವೆಬ್‌ಸೈಟ್‌ನ ಮುಖಪುಟದಲ್ಲಿ “ಫಲಿತಾಂಶಗಳು” ಅಥವಾ “ಫಲಿತಾಂಶ” ವಿಭಾಗವನ್ನು ಕ್ಲಿಕ್​ ಮಾಡಿ, ನಿಮ್ಮ ತರಗತಿಗೆ ಸೂಕ್ತವಾದ ಆಯ್ಕೆಯನ್ನು ಆರಿಸಿಕೊಂಡು, ನಿಮ್ಮ ರೋಲ್ ಸಂಖ್ಯೆ, ಶಾಲಾ ಸಂಖ್ಯೆ ಮತ್ತು ಪ್ರವೇಶ ಕಾರ್ಡ್ ಐಡಿಯನ್ನು ನಮೂದಿಸಬೇಕು.ನಿಮ್ಮ ವಿವರಗಳನ್ನು ನಮೂದಿಸಿದ ನಂತರ, ಫಾರ್ಮ್ ಅನ್ನು ಸಲ್ಲಿಸಿ. ಆಯ್ಕೆಮಾಡಿದ ವರ್ಗ ಮತ್ತು ವರ್ಷಕ್ಕೆ ನಿಮ್ಮ ಸಿಬಿಎಇ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
ನಿಮ್ಮ ಫಲಿತಾಂಶಗಳನ್ನು ಪರದೆಯ ಮೇಲೆ ಪ್ರದರ್ಶಿಸಿದ ನಂತರ, ನೀವು ಡಿಜಿಟಲ್ ನಕಲನ್ನು ಉಳಿಸಬಹುದು ಅಥವಾ ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಪ್ರಿಂಟೌಟ್​ ತೆಗೆದುಕೊಳ್ಳಬಹುದು.
ಇನ್ನು ಸಿಬಿಎಸ್​ಇ ಈ ವರ್ಷ ಟಾಪರ್‌ಗಳನ್ನು ಪ್ರಕಟಿಸುವುದಿಲ್ಲ. ಈ ವರ್ಷ 10 ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಟಾಪರ್‌ಗಳ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಆದಾಗ್ಯೂ, ಮಂಡಳಿಯು ಪ್ರತಿ ತರಗತಿಯಲ್ಲಿನ ಅಭ್ಯರ್ಥಿಗಳ ಸಂಖ್ಯೆ, ಉತ್ತೀರ್ಣ ಶೇಕಡಾವಾರು, ಲಿಂಗವಾರು ಫಲಿತಾಂಶಗಳು ಮತ್ತು ಇತರ ಸಂಬಂಧಿತ ವಿವರಗಳನ್ನು ತನ್ನ ಅಧಿಸೂಚನೆಯಲ್ಲಿ ಬಿಡುಗಡೆ ಮಾಡುತ್ತದೆ.
10 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರಾಷ್ಟ್ರವ್ಯಾಪಿ 2024 ರ ಫೆಬ್ರವರಿ 15 ರಿಂದ ಮಾರ್ಚ್ 13 ರವರೆಗೆ ನಡೆಸಲಾಯಿತು. 12 ನೇ ತರಗತಿ ಪರೀಕ್ಷೆಗಳನ್ನು ಫೆಬ್ರವರಿ 15 ರಿಂದ ಏಪ್ರಿಲ್ 2 ರವರೆಗೆ ನಡೆಸಲಾಗಿತ್ತು.
ಈ ವರ್ಷ, ಸುಮಾರು 39 ಲಕ್ಷ ಅಭ್ಯರ್ಥಿಗಳು ಎರಡೂ ತರಗತಿಗಳಿಗೆ ಸಿಬಿಎಸ್​ಇ ಬೋರ್ಡ್ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದರು.
‘ಹೆಡ್​ಬುಷ್’ನಾಯಕಿ ಈಗ ಪವರ್​ಫುಲ್​ ಪೊಲೀಸ್ ಆಫೀಸರ್​..! ಸದ್ದು ಮಾಡುತ್ತಿದೆ ಫಸ್ಟ್ ಲುಕ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + five =
Remember me
