ನವದೆಹಲಿ:ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್​ಇ) ಬಾಕಿ ಉಳಿದಿದ್ದ 10ನೇ ಹಾಗೂ 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಅದರಂತೆ ಜುಲೈ 1ರಿಂದ 15ರವರೆಗೆ ವಿವಿಧ ವಿಷಯಗಳ ಪರೀಕ್ಷೆ ನಡೆಯಲಿವೆ.
ಜುಲೈ 1 ರಂದು ಹೋಮ್​ ಸೈನ್ಸ್​, 2ರಂದು ಹಿಂದಿ ಎಲೆಕ್ಟಿವ್​ , ಹಿಂದಿ ಕೋರ್​, 7-ಕಂಪ್ಯೂಟರ್​ ಸೈನ್ಸ್​, ಇನ್​ಫಾರ್ಮೇಶನ್​ ಟೆಕ್​, 9- ಬಿಜಿನೆಸ್​ ಸ್ಟಡೀಸ್​, 10- ಬಯೋಟೆಕ್ನಾಲಜಿ, 11-ಭೂಗೋಳಶಾಸ್ತ್ರ, 13- ಸೋಷಿಯಾಲಜಿ ಪರೀಕ್ಷೆಗಳು ನಡೆಯಲಿವೆ.
ಇದನ್ನೂ ಓದಿ;ಇನ್ನಷ್ಟು ಹತ್ತಿರವಾಯ್ತು ಮೌಂಟ್​ ಎವರೆಸ್ಟ್​…!
ಇನ್ನುಳಿದ ದಿನಗಳಂದು 10ನೇ ತರಗತಿ ಪರೀಕ್ಷೆ ನಡೆಯಲಿದ್ದು, ಅವುಗಳು ಈಶಾನ್ಯ ದೆಹಲಿ ಶಾಲೆಗಳಿಗೆ ಸೀಮಿತವಾಗಿರಲಿವೆ ಎಂದು ಮಂಡಳಿ ಹೇಳಿದೆ.ಎಲ್ಲ ವಿದ್ಯಾರ್ಥಿಗಳು ಸ್ಯಾನಿಟೈಸರ್​ನ್ನು ಕೊಂಡೊಯ್ಯಬೇಕು. ಮಾಸ್ಕ್​ ಧರಿಸಿರಬೇಕು. ಕರೊನಾ ವ್ಯಾಪಿಸುವುದನ್ನು ತಡೆಯುವ ಕ್ರಮಗಳ ಬಗ್ಗೆ ಪಾಲಕರು ಮಕ್ಕಳಿಗೆ ತಿಳಿಸಿರಬೇಕು. ಪ್ರವೇಶಪತ್ರದಲ್ಲಿ ನೀಡಲಾಗುವ ಎಲ್ಲ ಸೂಚನೆಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.
ಕೋವಿಡ್​ ಕಾಲದಲ್ಲಿ ಗಗನಕ್ಕೇರಿದ ಪ್ರಧಾನಿ ಮೋದಿ ಕೀರ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
