ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ( ಸಿಬಿಎಸ್‌ಇ) ಪಠ್ಯಕ್ರಮದಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್​ ಮಾಡಲು ನಿರ್ಧರಿಸಲಾಗಿದೆ. ಎನ್​ಸಿಇಆರ್​ಟಿ ಸಲಹೆ ಪಡೆದು ಈ ನಿರ್ಧಾರಕ್ಕೆ ಬರಲಾಗಿದೆದೇಶದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಿರುವ ಹಿನ್ನೆಲೆ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಸಿಬಿಎಸ್​ಇ ತಿಳಿಸಿದೆ.
9 ಮತ್ತು 11ನೇ ತರಗತಿ:ದೇಶದ ಬಹುತೇಕ ಸಿಬಿಎಸ್​ಇ ಶಾಲೆಗಳಲ್ಲಿ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದೆ. ನವೋದಯ ವಿದ್ಯಾಲಯಗಳು, ಕೇಂದ್ರೀಯ ವಿದ್ಯಾಲಯಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧೀನದ ಶಾಲೆಗಳು ಹಾಗೂ ವಿದೇಶದ ಶಾಲೆಗಳಲ್ಲೂ ಕೂಡ ಪರೀಕ್ಷೆ ನಡೆಸಲಾಗಿದೆ. ಒಂದು ವೇಳೆ ಪರೀಕ್ಷೆ ನಡೆಸದಿದ್ದರೆ, ವಿದ್ಯಾರ್ಥಿಗಳನ್ನು ಶಾಲಾ ದಿನಗಳಲ್ಲಿ ಇಂಟರ್ನಲ್ ಪರೀಕ್ಷೆ, ಪ್ರಾಜೆಕ್ಟ್, ಟೆಸ್ಟ್ ಪರೀಕ್ಷೆ ಮತ್ತು ಮಧ್ಯಂತರ ಪರೀಕ್ಷೆಗಳಲ್ಲಿ ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಉತ್ತೀರ್ಣ ಅಥವಾ ಅನುತ್ತೀರ್ಣಗೊಳಿಸಬಹುದು ಎಂದು ಮಂಡಳಿ ತಿಳಿಸಿದೆ.
10 ಮತ್ತು 12ನೇ ತರಗತಿ:ಲಾಕ್​ಡೌನ್​ ಘೋಷಣೆಗೂ ಮುನ್ನವೇ 10ನೇ ಹಾಗೂ 12ನೇ ತರಗತಿಯ ವಾರ್ಷಿಕ ಪರೀಕ್ಷೆ ಚಾಲನೆಯಲ್ಲಿತ್ತು. 8 ದಿನ ಮಾತ್ರ ಪರೀಕ್ಷೆಗಳು ನಡೆದಿಲ್ಲ. ದೆಹಲಿಯಲ್ಲಿ ಶಾಂತ-ಸುವ್ಯವಸ್ತೆ ಕಾರಣದಿಂದಾಗಿ 4 ದಿನ ಪರೀಕ್ಷೆ ಆಯೋಜಿಸಲಾಗಿಲ್ಲ. ಇನ್ನು ಕೆಲವೆಡೆ 6 ದಿನಗಳ ಪರೀಕ್ಷೆ ಸಾಧ್ಯವಾಗಿರಲಿಲ್ಲ. ಈ ಎಲ್ಲ ಪರೀಕ್ಷೆಗಳನ್ನು ಮತ್ತೆ ನಡೆಸಬಹುದಾದರೂ ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗದು. ಹೀಗಾಗಿ ಮುಂದಿನ ತರಗತಿಗೆ ತೇರ್ಗಡೆಯಾಗಲು ಅಗತ್ಯವಾಗಿರುವ ಹಾಗೂ ಅತಿ ಮುಖ್ಯ ಎನಿಸಿರುವ ವಿಷಯಗಳಲ್ಲಿ ಮಾತ್ರ ಪರೀಕ್ಷೆ ನಡೆಸಲು ಮಂಡಳಿ ತೀರ್ಮಾನಿಸಿದೆ. 10ನೇ ತರಗತಿಗೆ ಆರು ಹಾಗೂ 12ನೇ ತರಗತಿಯ 23 ವಿಷಯಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಯಾವ ಯಾವ ವಿಷಯಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂಬುದರ ವಿವರವಾದ ಪಟ್ಟಿಯನ್ನು ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ವಿವರಗಳಿಗೆhttp://cbse.nic.in/ಸಂಪರ್ಕಿಸಿ.
10 ದಿನಕ್ಕೂ ಮುನ್ನ ಮಾಹಿತಿ:10ನೇ ಮತ್ತು 12ನೇ ತರಗತಿಗಳಿಗೆ ಪರೀಕ್ಷೆ ದಿನಾಂಕ ನಿಗದಿಪಡಿಸುವ 10 ದಿನಕ್ಕೂ ಮುನ್ನ ಶಾಲೆಗಳಿಗೆ ಮಾಹಿತಿ ನೀಡಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಕರ್ನಾಟಕ ವಸತಿ ಸಂಘ ಸಂಸ್ಥೆಗಳ ಪ್ರವೇಶ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
