ನವದೆಹಲಿ:ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್​ಇ)ಯ 10ನೇ ತರಗತಿ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ದೇಶಾದ್ಯಂತ ಶೇ.91.46 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಕೇರಳದ ತಿರುವನಂತಪುರ ಮೊದಲ ಸ್ಥಾನದ್ದಲಿದ್ದು, ಶೇ. 99.28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಚೆನ್ನೈ ಶೇ. 98.95 ಫಲಿತಾಂಶ ಪಡೆದು ಎರಡನೇ ಸ್ಥಾನ ಗಳಿಸಿದೆ. ಬೆಂಗಳೂರು ಶೇ.98.23 ರಿಸಲ್ಟ್​ನೊಂದಿಗೆ ತೃತೀಯ ಸ್ಥಾನ ಪಡೆದಿದೆ. ಶೇ.79.12 ಫಲಿತಾಂಶ ಗಳಿಸಿರುವ ಗುವಾಹಟಿ ಕಡೆಯ ಸ್ಥಾನದಲ್ಲಿದೆ.
18,85,885 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 18,73,015 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 17,13,121 ಮಕ್ಕಳು ತೇರ್ಗಡೆ ಹೊಂದಿದ್ದಾರೆ. ಶೇ.93.31 ಬಾಲಕಿಯರು ಮತ್ತು ಶೇ. 90.14 ಬಾಲಕರು ಉತ್ತೀರ್ಣರಾಗಿದ್ದಾರೆ.
ಬೆಂಗಳೂರು ವಲಯದಲ್ಲಿನ 871 ಶಾಲೆಗಳ 56,226 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 55,230 ಮಕ್ಕಳು ಉತ್ತೀರ್ಣರಾಗಿದ್ದಾರೆ. ಶೇ.98.94 ಫಲಿತಾಂಶದೊಂದಿಗೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ.97.66 ಬಾಲಕರು ತೇರ್ಗಡೆಯಾಗಿದ್ದಾರೆ. ಇನ್ನು 276 ವಿಶೇಷ ವಿದ್ಯಾರ್ಥಿಗಳ ಪೈಕಿ 264 ಮಕ್ಕಳು ಪಾಸಾಗಿದ್ದಾರೆ. ಶೇ.95.65 ಫಲಿತಾಂಶ ಪ್ರಕಟವಾಗಿದೆ ಎಂದು ಸಿಬಿಎಸ್​ಇ ಮಂಡಳಿ ತಿಳಿಸಿದೆ.
ಅಂಕ ಗಳಿಕೆಯಲ್ಲೂ ಅವಳಿ ಸೋದರಿಯರ ಸಮಾನತೆ!
ಒಂದೇ ರೀತಿ ಕಾಣುವ ನೋಯ್ಡಾದ ಮಾನಸಿ ಮತ್ತು ಮಾನ್ಯಾ ಎಂಬ ಅವಳಿ ಸೋದರಿಯರು ಸಿಬಿಎಸ್​ಇ ಪರೀಕ್ಷೆಯಲ್ಲಿ ಒಂದೇ ರೀತಿಯ ಅಂಕ ಗಳಿಸಿ ಅಚ್ಚರಿಗೊಳಿಸಿದ್ದಾರೆ. ಇಬ್ಬರಿಗೂ ಶೇ. 95.80 ಅಂಕ ಬಂದಿದ್ದು, ವಿಷಯವಾರು ಅಂಕದಲ್ಲೂ ಸಮಾನತೆ ಸಾಧಿಸಿದ್ದಾರೆ. ಇಂಗ್ಲಿಷ್ ಮತ್ತು ಕಂಪ್ಯೂಟರ್ ಸೈನ್ಸ್​ನಲ್ಲಿ ತಲಾ 98, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ದೈಹಿಕ ಶಿಕ್ಷಣ ವಿಷಯದಲ್ಲಿ ತಲಾ 95 ಅಂಕಗಳನ್ನು ಇಬ್ಬರೂ ಗಳಿಸಿದ್ದಾರೆ. ಬೆಂಗಳೂರಿನ ನವ ಪ್ರಜ್ಞಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಬಿ.ಪ್ರಜ್ವಲ್ ಶೇ.82 ಅಂಕಗಳಿಸಿದ್ದಾನೆ.
ಶಾಲೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ; ಇದು ರೇಪ್​ ಆ್ಯಂಡ್ ಮರ್ಡರ್​ ಎಂದು ಆರೋಪಿಸಿದ ತಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
