ನವದೆಹಲಿ:12ನೇ ತರಗತಿ ಲಿತಾಂಶವನ್ನು ಜುಲೈ 31ರೊಳಗೆ ಪ್ರಕಟಿಸಲಾಗುವುದು. 30:30:40 ಸೂತ್ರದಂತೆ ಮೌಲ್ಯಾಂಕನ ನಿಗದಿ ಮಾಡಲಾಗುವುದು ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್​ಇ) ಸುಪ್ರೀಂಕೋರ್ಟ್​ಗೆ ಗುರುವಾರ ಸಲ್ಲಿಸಿದ ಅಫಿಡವಿಟ್​ನಲ್ಲಿ ಹೇಳಿದೆ. ಕೌನ್ಸಿಲ್​ ಾರ್​ ಸ್ಕೂಲ್​ ಸರ್ಟಿಫಿಕೆಟ್​ ಎಕ್ಸಾಮಿನೇಷನ್ಸ್​ (ಸಿಐಎಸ್​ಸಿಇ) ಕೂಡ 12ನೇ ವರ್ಗದ ಲಿತಾಂಶವನ್ನು ಜುಲೈ 30ರೊಳಗೆ ಘೋಷಿಸುವುದಾಗಿ ತಿಳಿಸಿದೆ.ಕರೊನಾ ಎರಡನೇ ಅಲೆಯ ಕಾರಣ ಪರೀೆ ರದ್ದುಗೊಂಡಿರುವುದರಿಂದ ವಿದ್ಯಾರ್ಥಿಗಳು 10 ಮತ್ತು 11ನೇ ವರ್ಗದಲ್ಲಿ ಗಳಿಸಿದ ಅಂಕ ಹಾಗೂ 12ನೇ ತರಗತಿಯ ಪೂರ್ವಭಾವಿ ಪರೀೆಯಲ್ಲಿ ಪಡೆದ ಅಂಕಗಳನ್ನು 30:30:40 ಅನುಪಾತದಂತೆ ಪರಿಗಣಿಸಿ ಲಿತಾಂಶ ಘೋಷಿಸಲಾಗುವುದು ಸಿಬಿಎಸ್​ಇ ಪರವಾಗಿ ಅಟಾರ್ನಿ ಜನರಲ್​ ಕೆ.ಕೆ.ವೇಣುಗೋಪಾಲ್​ ನ್ಯಾಯಪೀಠಕ್ಕೆ ತಿಳಿಸಿದರು. ಪರೀೆ ರದ್ದತಿಯನ್ನು ಮರುಪರಿಶೀಲಿಸುವ ಪ್ರಶ್ನೆಯೇ ಇಲ್ಲ ಎಂದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್​ ಮತ್ತು ದಿನೇಶ್​ ಮಹೇಶ್ವರಿ ಅವರನ್ನು ಒಳಗೊಂಡ ಪೀಠ, ಮುಂದಿನ ವಿಚಾರಣೆಯನ್ನು ಜೂನ್​ 21ಕ್ಕೆ ನಡೆಸುವುದಾಗಿ ಹೇಳಿತು.12ನೇ ತರಗತಿ ಲಿತಾಂಶಕ್ಕೆ ಯಾವ ರೀತಿಯ ವಸ್ತುನಿಷ್ಠ ಮಾನದಂಡ ಅನುಸರಿಸಲಾಗುತ್ತದೆ ಎಂಬುದನ್ನು ಎರಡು ವಾರದಲ್ಲಿ ತಿಳಿಸುವಂತೆ ಸಿಬಿಎಸ್​ಇ ಮತ್ತು ಸಿಐಎಸ್​ಸಿಇಗಳಿಗೆ ಸುಪ್ರೀಂಕೋರ್ಟ್​ ಸೂಚಿಸಿತ್ತು. ಇದರ ಅನ್ವಯ ಸಿಬಿಎಸ್​ಇ 13 ಸದಸ್ಯರ ಸಮಿತಿ ರಚಿಸಿತ್ತು. 12ನೇ ತರಗತಿಯ ಬೋರ್ಡ್​ ಪರೀೆಯನ್ನು ಸಿಬಿಎಸ್​ಇ ಜೂನ್​ 1ರಂದು ರದ್ದು ಮಾಡಿತ್ತು. ಇದೇ ಮಾರ್ಗವನ್ನು ಸಿಐಎಸ್​ಸಿಇ ಕೂಡ ಅನುಸರಿಸಿತು. ಹಲವು ರಾಜ್ಯಗಳಲ್ಲೂ ದ್ವೀತಿಯ ಪಿಯುಸಿ ಪರೀೆ ರದ್ದುಗೊಳಿಸಲಾಗಿದೆ.
ಮಾಡರೇಟ್​ ಸಮಿತಿ ರಚನೆವಿದ್ಯಾರ್ಥಿಗಳಿಗೆ ಉದಾರವಾಗಿ ಅಂಕ ನೀಡಲು ಶಾಲೆಗಳಲ್ಲಿ ಮಾಡರೇಟ್​ ಸಮಿತಿಯನ್ನು ರಚಿಸಲಾಗುವುದು ಎಂದು ಸಿಬಿಎಸ್​ಇ ಹೇಳಿದೆ. ಈ ಸಮಿತಿಯ ವಿದ್ಯಾರ್ಥಿಯ 10, 11, 12ನೇ ತರಗತಿಯ ಸಾಧನೆಯನ್ನು ವಸ್ತುನಿಷ್ಠವಾಗಿ ಪರಿಗಣಿಸಿ ಮೌಲ್ಯಾಂಕವನ್ನು ನಿಗದಿ ಮಾಡಲಿದೆ. ಶಾಲೆಯ ಪ್ರಾಂಶುಪಾಲರು ಸಮಿತಿ ಮುಖ್ಯಸ್ಥರಾಗಿರಲಿದ್ದು, ಶಾಲೆಯ ಇಬ್ಬರು ಹಿರಿಯ ಶಿಕ್ಷಕರು ಮತ್ತು ಸಮೀಪದ ಶಾಲೆಯ ಇಬ್ಬರು ಶಿಕ್ಷಕರು ಸಮಿತಿಯಲ್ಲಿ ಇರಲಿದ್ದಾರೆ. ಅಗತ್ಯ ಬಿದ್ದರೆ ಇನ್ನೊಬ್ಬ ಐಟಿ ತಜ್ಞರನ್ನು ಸಮಿತಿಗೆ ಸೇರಿಸಿಕೊಳ್ಳಬಹುದು. ವಿಷಯವಾರು ಅಂಕ ನಿಗದಿ ಮಾಡುವಾಗ ಆಯಾ ವಿಷಯ ಬೋಧಕರು ಸಮಿತಿ ಮುಂದೆ ವಿವರ ಪ್ರಸ್ತುತ ಪಡಿಸಬೇಕು.
3 ವರ್ಷದ ಅಂಕ ಪರಿಶೀಲನೆ ಏಕೆ?ಕರೊನಾ ಕಾರಣ ಬಹುತೇಕವಾಗಿ ತರಗತಿಗಳು ಆನ್​ಲೈನ್​ ಮೂಲಕ ನಡೆದಿದೆ. ಟಕ ಮತ್ತು ಮಧ್ಯಂತರ ವಾರ್ಷಿಕ ಹಾಗೂ ಪೂರ್ವಸಿದ್ಧತಾ ಪರೀೆಗಳು ಮತ್ತು ಆನ್​ಲೈನ್​ ಪರೀೆಗಳನ್ನಷ್ಟೆ ಪರಿಗಣಿಸುವುದು ಸರಿಯಲ್ಲ. ಹೀಗಾಗಿ 12ನೇ ತರಗತಿಯ ಪರೀೆಗಳ ಜತೆಗೆ 10 ಮತ್ತು 11ನೇ ವರ್ಗದ ಅಂಕಗಳನ್ನು ಗಣನೆಗೆ ತೆಗದುಕೊಳ್ಳುವುದು ಒಳಿತು ಎಂಬುದು ಸಿಬಿಎಸ್​ಇ ವಾದ.ಫೇಲಾದರೆ ಏನು ಮಾಡಬೇಕು?30:30:40 ಸೂತ್ರ ಅನುಸರಿಸಿಯೂ ವಿದ್ಯಾರ್ಥಿ ಅನುತ್ತೀರ್ಣರಾದರೆ ಅಂತಹವರನ್ನು “ಅಗತ್ಯ ಪುನರಾವರ್ತನೆ’ (ಛಿಠಠಛ್ಞಿಠಿಜಿಚ್ಝ ್ಟಛಿಟಛಿಚಠಿ)ಅಥವಾ “ವಿಭಾಗ’ (್ಚಟಞಟಚ್ಟಠಿಞಛ್ಞಿಠಿ)ದಲ್ಲಿ ಇರಲಾಗುತ್ತದೆ. ನಪಾಸಾದ ವಿದ್ಯಾರ್ಥಿಗಳು ಮತ್ತು ಲಿತಾಂಶದ ಬಗ್ಗೆ ಅಸಮಾಧಾನ ಇದ್ದವರು ಮತ್ತೆ ಪರೀೆ ಬರೆಯಬಹುದಾಗಿದೆ.
1. ಪ್ರಾಯೋಗಿಕ ಪರೀೆಗೆ 100 ಅಂಕಗಳಿದ್ದು, ಇದು ಶಾಲೆಗಳು ವಿದ್ಯಾರ್ಥಿಗಳನ್ನು ಅಸೆಸ್​ ಮಾಡಿ ನೀಡಿದ ಅಂಕಗಳನ್ನು ಆಧರಿಸಿರುತ್ತದೆ.2. 10 ಮತ್ತು 11ನೇ ವರ್ಗದ ಐದು ವಿಷಯಗಳಲ್ಲಿ ಉತ್ತಮ ಅಂಕಗಳಿಸಿದ ಮೂರನ್ನು ಪರಿಗಣಿಸಿ ಮೌಲ್ಯಾಂಕ ನಿಗದಿ.3. 10, 11ನೇ ತರಗತಿಯನ್ನು ಬೇರೆ ಬೇರೆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಅಂಕ ಮತ್ತು ಸಾಧನೆಯ ಪಟ್ಟಿ ಪ್ರಸ್ತುತ ಶಾಲೆಯಲ್ಲಿ ಇರದಿದ್ದರೆ ಅಂಥವರ ಹಿಂದಿನ ತರಗತಿಯ ಮಾಹಿತಿಯನ್ನು ಬೋರ್ಡ್​ ಒದಗಿಸಲಿದೆ.4. ಅಂಕ ನಿಗದಿಯಲ್ಲಿ ಶಾಲೆಗಳು ಪಕ್ಷಪಾತ ಮಾಡಿದರೆ ಇಂಥದನ್ನು ಪರಿಶೀಲಸಲು ಸಿಬಿಎಸ್​ಇ ನಿಯಮ ಮಾಡಿಕೊಂಡಿದೆ.5. ಖಾಸಗಿಯಾಗಿ ಪರೀೆ ಬರೆಯು ವವರು ಅಥವಾ ಪುನರಾವರ್ತನೆಯ (ರಿಪೀಟರ್ಸ್​) ವಿದ್ಯಾರ್ಥಿಗಳಿಗೆ ಕರೊನಾ ಪರಿಸ್ಥಿತಿ ಅವಲೋಕಿಸಿ ಭೌತಿಕವಾಗಿ ಪರೀೆ ನಡೆಯಲಿದೆ.
ಸಿಐಎಸ್ಸಿಇ ಮಾನದಂಡ11 ಮತ್ತು 12ನೇ ತರಗತಿಗಳ ಲಿತಾಂಶವನ್ನು ವಿದ್ಯಾರ್ಥಿಗಳ ಆರು ವರ್ಷದ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ಪ್ರಕಟಿಸುವುದಾಗಿ ಸಿಐಎಸ್​ಸಿಇ ಹೇಳಿದೆ. 10, 11, 12ನೇ ವರ್ಗದವರ ಅಂಕಗಳು ಅವರ ಪ್ರಾಜೆಕ್ಟ್​ ವರದಿಗಳು, ಪ್ರಾಯೋಗಿಕ ಕಾರ್ಯಗಳನ್ನು ಆಧರಿಸಿರಲಿದೆ. ಈ ಲಿತಾಂಶದ ಬಗ್ಗೆ ತಕಾರರು ಇದ್ದ ವಿದ್ಯಾರ್ಥಿಗಳಿಗೆ ಲಿಖಿತವಾಗಿ ಪರೀೆ ಬರೆಯುವ ಅವಕಾಶವೂ ಇರಲಿದೆ ಎಂದು ಹೇಳಿದೆ.ಕೋರ್ಟ್​ ಹೇಳಿದ್ದೇನು?* ಫಲಿತಾಂಶದಲ್ಲಿ ತಿದ್ದುಪಡಿ ಬಯಸುವ ವಿದ್ಯಾರ್ಥಿಗಳ ಅಹವಾಲು ಇತ್ಯರ್ಥ ಪಡಿ ಸಲು ವಿವಾದ ಪರಿಹಾರ ವೇದಿಕೆ ರಚಿಸಬೇಕು.* ಫಲಿತಾಂಶದ ಬಗ್ಗೆ ಅಸಮಾಧಾನ ಹೊಂದಿದ ಅಥವಾ ನಪಾಸಾದ ವಿದ್ಯಾರ್ಥಿಗಳಿಗೆ ಪರೀೆ ನಡೆಸಲು ಪರಿಸ್ಥಿತಿಗೆ ಅನುಗುಣವಾದ ಟೈಂ ಲೈನ್​ ಹೊಂದಿರುವುದು ಅವಶ್ಯಕ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × three =
Remember me
