ನವದೆಹಲಿ:ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಸಿಬಿಎಸ್​ಇ 9ರಿಂದ 12ನೇ ತರಗತಿವರೆಗಿನ ಪಠ್ಯವನ್ನು ಶೇ.30 ಕಡಿಮೆ ಮಾಡಿದೆ. ಇದರ ಪರಿಣಾಮ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ನಡೆಸುವ ಜೆಇಇ ಮೇನ್​​ ಮತ್ತು ನೀಟ್​ ಪರೀಕ್ಷೆಗಳ ಮೇಲೂ ಆಗಲಿದೆ ಎಂದು ಅಂದಾಜಿಸಲಾಗಿದೆ.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರಗಳಲ್ಲಿನ ಪಠ್ಯ ಕಡಿತದಿಂದ 2021-22ನೇ ಸಾಲಿನ ಜೆಇಇ ಮತ್ತು ನೀಟ್​ ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆ ರೂಪಿಸಲು ತುಂಬಾ ಕಷ್ಟವಾಗಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಎಟಿ) ಹೇಳಿದೆ. ಈ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವ ಮಾದರಿ ಕುರಿತು ಅದು ಜಂಟಿ ಪ್ರವೇಶಾತಿ ಮಂಡಳಿಯೊಂದಿಗೆ (ಜೆಎಬಿ) ಜತೆ ಚರ್ಚಿಸಿದೆ.
ಜೆಇಇ ಅಡ್ವಾನ್ಸ್ಡ್​ ಪ್ರವೇಶ ಪರೀಕ್ಷೆ ಆಯೋಜಿಸುವ ಐಐಟಿಗಳು ಕೂಡ ಪಠ್ಯದ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆ ರೂಪಿಸುವ ನಿರ್ಧಾರವನ್ನು ಮರುಪರಿಶೀಲಿಸುವ ಜವಾಬ್ದಾರಿಯನ್ನು ತನ್ನ ಸಮಿತಿ ಹಾಗೂ ಪ್ರಶ್ನೆಪತ್ರಿಕೆ ಸಿದ್ಧಪಡಿಸುವವರಿಗೆ ವಹಿಸಿದೆ ಎನ್ನಲಾಗಿದೆ.
ಇದನ್ನೂ ಓದಿ:ಮಗಳಿಗೆ ಹಿಂಸೆ ಕೊಟ್ಟು ತಪ್ಪಿಸಿಕೊಂಡವರ ಮೂಲ ಹುಡುಕಿ ಹೊರಟ ಅಪ್ಪನೊಬ್ಬನ ರೋಚಕ ಘಟನೆಯಿದು…
2020-21ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಸಿಬಿಎಸ್​ಇ ಭೌತಶಾಸ್ತ್ರದಲ್ಲಿ ಮೋಷನ್​, ಆಪ್ಟಿಕ್ಸ್​, ಕಮ್ಯುನಿಕೇಷನ್​ ಸಿಸ್ಟಂ ಮತ್ತು ಎಲೆಕ್ಟ್ರಾನಿಕ್​ ಡಿವೈಸಸ್​, ಗಣಿತದಲ್ಲಿ 3ಡಿ ಜಾಮಿಟ್ರಿ, ಕಂಟಿನ್ಯುಟಿ ಮತ್ತು ಡಿರ್ಫೆನ್ಶಿಯಬಿಲಿಟಿ, ಬೈನಾಮಿಯಲ್​ ಥೇರಮ್, ರಸಾಯನಶಾಸ್ತ್ರದಲ್ಲಿ ಪಿ-ಬ್ಲಾಕ್​ ಎಲಿಮೆಂಟ್ಸ್​, ಎನ್ವಿರಾನ್​ಮೆಂಟಲ್​ ಕೆಮಿಸ್ಟ್ರಿ, ಪಾಲಿಮರ್ಸ್​, ಜನರಲ್​ ಪ್ರಿನ್ಸಿಪಲ್ಸ್​ ಮತ್ತು ಪ್ರೊಸೆಸ್ಸೆಸ್​ ಆಫ್​ ಐಸೋಲೇಷನ್​ ಆಫ್​ ಎಲಿಮೆಂಟ್ಸ್​ ಹಾಗೂ ಜೀವಶಾಸ್ತ್ರದಲ್ಲಿ ಫಿಜಿಯಾಲಜಿ ಮತ್ತು ರಿಪ್ರೊಡಕ್ಸನ್​ ಸೇರಿ ಇನ್ನೂ ಹಲವು ಪಠ್ಯಗಳನ್ನು ಕೈಬಿಟ್ಟಿದೆ.
ಎನ್​ಟಿಎ ಮೂಲಗಳ ಪ್ರಕಾರ ಸಂಸ್ಥೆಯು ಸಿಬಿಎಸ್​ಇಯ ಪಠ್ಯವನ್ನು ತಜ್ಞರ ಸಮಿತಿ ಮುಂದೆ ಇರಿಸಿದೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್​ ಪ್ರವೇಶಕ್ಕೆ ಸಿಬಿಎಸ್​ಇಯ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗುವುದರಿಂದ, ಪ್ರವೇಶಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಆಮೂಲಾಗ್ರವಾಗಿ ಬದಲಿಸಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ಸಿಎಂ ಕಚೇರಿ-ನಿವಾಸದಲ್ಲಿ 7 ಮಂದಿಗೆ ಕರೊನಾ ಸೋಂಕು, ಹೋಂ ಕ್ವಾರಂಟೈನ್​ನಲ್ಲಿ ಯಡಿಯೂರಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
