ಬೆಂಗಳೂರು:ಭೂಗತ ಪಾತಕಿ ರವಿ ಪೂಜಾರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಸಿಸಿಬಿ ತಂಡ, ಭೂಗತ ಲೋಕದಲ್ಲಿ ಈತ ಹೊಂದಿರುವ ನಂಟಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ ಎನ್ನಲಾಗಿದೆ. ಮಡಿವಾಳದಲ್ಲಿರುವ ಇಂಟರಾಗೇಶನ್ ಸೆಂಟರ್​ನಲ್ಲಿ ರವಿ ಪೂಜಾರಿಯ ವಿಚಾರಣೆ ಮುಂದುವರಿದಿದ್ದು, 2007ರಲ್ಲಿ ಶಬನಮ್ ಡೆವಲಪರ್ಸ್ ಸಂಸ್ಥೆಯ ಇಬ್ಬರು ಸಿಬ್ಬಂದಿ ಹತ್ಯೆಗೆ ಸಂಬಂಧಿಸಿದಂತೆ ರವಿ ಪೂಜಾರಿ ಸಹಚರರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದಾನೆ ಎಂಬ ಸಂಶಯ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ರವಿ ಪೂಜಾರಿ ವಿರುದ್ಧ ಸಾಕ್ಷ್ಯ ಸಿಕ್ಕಿದ್ದು, ಭೂಗತ ಲೋಕದಲ್ಲಿ ಸದ್ಯ ಈತನ ನಂಟಿನಲ್ಲಿರುವ ಪಾತಕಿಗಳ ಮಾಹಿತಿ ಕಲೆ ಹಾಕಿದ್ದಾರೆ.
ರವಿ ಪೂಜಾರಿಗೆ ಎಲ್ಲಿಂದ ಪಿಸ್ತೂಲ್ ಸಿಗುತ್ತಿತ್ತು? ಪಾತಕಿಗಳಿಗೆ ಅಕ್ರಮ ಶಸ್ತ್ರಾಸ್ತ್ರ ಒದಗಿಸುವ ದಂಧೆ ನಡೆಸುತ್ತಿದ್ದನೇ? ಎಂಬ ಪ್ರಶ್ನೆ ಮೂಡಿದ್ದು, ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದಾರೆ. ವಿಚಾರಣೆ ಮುಕ್ತಾಯಗೊಂಡ ಬಳಿಕ ಇದಕ್ಕೆ ಸೂಕ್ತ ಉತ್ತರ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ಸಹಚರರ ಮಾಹಿತಿ: ವಿಚಾರಣೆ ವೇಳೆ ಪೂಜಾರಿ ಕೆಲ ಪ್ರಶ್ನೆಗಳಿಗೆ ಗೊಂದಲದ ಹೇಳಿಕೆಗಳನ್ನು ನೀಡಿದ್ದರೆ, ಇನ್ನು ಕೆಲವಕ್ಕೆ ನೇರವಾಗಿ ಉತ್ತರಿಸಿದ್ದಾನೆ ಎನ್ನಲಾಗಿದೆ. ಈತನ ಸಹಚರರ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ. ಅಕ್ರಮವಾಗಿ ಸಂಪಾದಿಸಿದ ಕೋಟ್ಯಂತರ ರೂ.ಗಳನ್ನು ಯಾವೆಲ್ಲ ದೇಶಗಳಲ್ಲಿ ಹೂಡಿಕೆ ಮಾಡಿದ್ದಾನೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಈತನ ವಿರುದ್ಧ ದಾಖಲಾಗಿದ್ದ 36ಕ್ಕೂ ಅಧಿಕ ಪ್ರಕರಣಕ್ಕೆ ಮರು ಜೀವ ಬಂದಂತಾಗಿದ್ದು, ಭೂಗತ ಲೋಕದಲ್ಲಿ ಸದ್ಯ ರವಿ ಪೂಜಾರಿ ಒಡನಾಟ ಹೊಂದಿರುವವರು ಹಾಗೂ ಈತನ ಸಹಚರರಿಗೆ ಸಿಸಿಬಿ ತಂಡ ಬಲೆ ಬೀಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − six =
Remember me
