ಚೆನ್ನೈ:ತಿರುವಣಾಮಲೈ ದೇವಸ್ಥಾನದಲ್ಲಿ ದೇವತೆಯ ಮುಖವನ್ನು ವಿರೂಪಗೊಳಿಸಿ ಸಿಸಿಟಿವಿ ಅಳವಡಿಸಿರುವ ಕ್ರಮವನ್ನು ತಮಿಳುನಾಡು ಬಿಜೆಪಿ ಮುಖ್ಯಸ್ಥ ಹಾಗೂ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರು ಖಂಡಿಸಿದ್ದು, ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಿರುವಣಾಮಲೈ ಜಿಲ್ಲೆಯ ಅರುಣಾಚಲೇಶ್ವರ ದೇವಸ್ಥಾನದ ದೇವತೆಯ ಶಿಲ್ಪಕಲೆಯ ಮುಖಕ್ಕೆ ಸಿಸಿಟಿವಿ ಅಳವಡಿಸಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಅಣ್ಣಾಮಲೈ, ಡಿಎಂಕೆ ಸರ್ಕಾರಕ್ಕೆ ಆಗಮಗಳ (ಹಲವಾರು ತಾಂತ್ರಿಕ ಸಾಹಿತ್ಯ ಮತ್ತು ಹಿಂದೂ ಶಾಲೆಗಳ ಗ್ರಂಥಗಳ ಸಂಗ್ರಹ) ಮೇಲೆ ಗೌರವ ಇಲ್ಲ. ನಾಸ್ತಿಕರು ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆಯನ್ನು ನಿರ್ವಹಿಸುತ್ತಿರುವ ಕಾರಣ ದೇವರ ಮುಖಕ್ಕೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಒಳ್ಳೆಯ ಮನಸ್ಸಿದ್ದವರು ಯಾರೂ ಇದನ್ನು ಮಾಡುವುದಿಲ್ಲ. ಇದು ಡಿಎಂಕೆಯ ಯೋಜಿತ ಕ್ರಮವಾಗಿದೆ. ಏಕೆಂದರೆ ಅವರು ಬಹುಸಂಖ್ಯಾತರಿಗೆ ಸಮಸ್ಯೆಗಳನ್ನು ಸೃಷ್ಟಿಸುವ ಮೂಲಕ ಅಲ್ಪಸಂಖ್ಯಾತರನ್ನು ಮೆಚ್ಚಿಸಲು ಬಯಸುತ್ತಾರೆ. ಈ ವಿಧ್ವಂಸಕ ಕೃತ್ಯಕ್ಕೆ ಯಾರು ಹೊಣೆ ಹೊರುತ್ತಾರೆ? ಎಂದು ಅಣ್ಣಾಮಲೈ ಪ್ರಶ್ನೆ ಮಾಡಿದರು.
ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ ಅಣ್ಣಾಮಲೈ, ಪುರಾತನ ಆಭರಣಗಳು ಮತ್ತು ದೇವತೆಗಳ ಆಭರಣಗಳನ್ನು ಕರಗಿಸಿ ಚಿನ್ನದ ತುಂಡುಗಳಾಗಿ ಪರಿವರ್ತಿಸಲಾಗುತ್ತಿದ್ದು, ಇದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ. ಡಿಎಂಕೆ ನಿರಂತರವಾಗಿ ಆಧ್ಯಾತ್ಮಿಕ ನಂಬಿಕೆಗಳನ್ನು ಅವಮಾನಿಸುತ್ತಿದೆ. ಇದನ್ನು ಜನರಾಗಲಿ, ದೇವರುಗಳಾಗಲಿ ಕ್ಷಮಿಸುವುದಿಲ್ಲ. ದೇವಸ್ಥಾನದ ಅರ್ಚಕರ ತರಬೇತಿ ಅವಧಿಯನ್ನು ಐದು ವರ್ಷದಿಂದ ಒಂದು ವರ್ಷಕ್ಕೆ ಇಳಿಸಿರುವುದು ಖಂಡನೀಯ ಎಂದರು.
ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕ ಮಠಗಳ ಮೇಲೆ ತಮ್ಮ ಸಿದ್ಧಾಂತವನ್ನು ಹೇರಲು ಡಿಎಂಕೆ ಪ್ರಯತ್ನಿಸುತ್ತಿದೆ ಎಂದು ಅಣ್ಣಾಮಲೈ ದೂರಿದರು. ನಾಸ್ತಿಕರಾಗಿದ್ದರೂ ಸಂಸ್ಕೃತಿ, ಸಂಪ್ರದಾಯ, ನಂಬಿಕೆ ಮತ್ತು ಆಗಮ ನಿಯಮಗಳನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.(ಏಜೆನ್ಸೀಸ್​)
ಮದ್ದೂರಿನಲ್ಲಿ ತಾಯಿ, ಮಕ್ಕಳು ಸಾವು ಪ್ರಕರಣ: ಗಂಡನ ಫೋನ್​ನಲ್ಲಿ ಬಯಲಾದ ರಹಸ್ಯವೇ ಈ ದುರಂತಕ್ಕೆ ಕಾರಣ

ಬೆಂಗಳೂರು: ಬೆಲ್​ ಮಾಡಿ ಬಾಗಿಲ ಬಳಿ ಪತ್ರವಿಟ್ಟು ಅಪರಿಚಿತ ಎಸ್ಕೇಪ್​; ಪತ್ರ ತೆರೆದ ಮಹಿಳೆಗೆ ಕಾದಿತ್ತು ಶಾಕ್​

ಕಿರುತೆರೆ ಜೊತೆ ಹಿರಿತೆರೆ ಜೊತೆಯಲಿ; ಡಬಲ್ ರೈಡಿಂಗ್​ನಲ್ಲಿ ತ್ರಿಬಲ್ ರೈಡಿಂಗ್ ಮೇಘಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − two =
Remember me
