ಹೈದರಾಬಾದ್​:ಮನೆ ಅಥವಾ ಕಚೇರಿಯಲ್ಲಿ ಇಲಿಗಳಿದ್ದರೆ ತಾತ್ಸಾರ ಬೇಡ. ಸಣ್ಣ ಇಲಿ ತಾನೇ ಏನು ಮಾಡುತ್ತದೆ ಎಂದು ಸುಮ್ಮನಾದರೆ ಯಾವೆಲ್ಲಾ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಇದೊಂದು ಭೀಕರ ಉದಾಹರಣೆಯಾಗಿದೆ.

ಹೌದು, ಹೈದರಾಬಾದ್​ನ ಮುಶೀರಾಬಾದ್​ನಲ್ಲಿರುವ ಕಾರ್​​ ಸರ್ವೀಸ್​ ಸೆಂಟರ್​ನಲ್ಲಿ ಕಳೆದ ಫೆಬ್ರವರಿ 8ರಂದು ಬೆಂಕಿ ಅವಘಡ ಸಂಭವಿಸಿತ್ತು. ಈ ಅವಘಡ ಮಿತ್ರಾ ಮೋಟರ್ಸ್​ನಲ್ಲಿ ನಡೆದಿತ್ತು. ಈ ಕಂಪನಿಯು ಮಾರುತಿ ನೇಕ್ಸಾ ಕಾರು ಮಾರಾಟ ಮತ್ತು ಸರ್ವೀಸ್ ನೀಡುತ್ತದೆ. ​
ಈ ಬೆಂಕಿ ಅವಘಡದಲ್ಲಿ ಮೂರು ಕಾರುಗಳಿಗೆ ಹಾನಿಯಾಗಿದ್ದಲ್ಲದೆ, ಸುಮಾರು 1 ಕೋಟಿ ರೂ. ಆಸ್ತಿ ನಷ್ಟವಾಗಿತ್ತು. ಇದೀಗ ಘಟನೆ ನಡೆದ ಆರು ತಿಂಗಳ ಬಳಿಕ ಬೆಂಕಿ ಅವಘಡಕ್ಕೆ ಅಸಲಿ ಕಾರಣ ಏನೆಂಬುದು ತಿಳಿದುಬಂದಿದೆ. ಬೆಂಕಿಗೆ ಮೂಲ ಕಾರಣನೇ ಸಣ್ಣ ಇಲಿ ಎಂದರೆ ಅಚ್ಚರಿಯಾಗದೇ ಇರದು. ಇದಕ್ಕೆ ಸಾಕ್ಷಿಯಾಗಿ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.
ಇದನ್ನೂ ಓದಿ:ತಂದೆಯ ಲ್ಯಾಪ್​ಟಾಪ್​ನಲ್ಲಿ ತನ್ನ ಬೆತ್ತಲೆ ಫೋಟೋಗಳನ್ನು ನೋಡಿ ಬೆಚ್ಚಿ ಬಿದ್ದಳು ಮಗಳು!

ಇದಕ್ಕೂ ಮುನ್ನವೇ ಇದೊಂದು ಶಾರ್ಟ್​ ಸರ್ಕ್ಯೂಟ್​ನಿಂದಾದ ಅನಾಹುತ ಎಂದು ಪೊಲೀಸರು ಪ್ರಕರಣಕ್ಕೆ ತೆರೆ ಎಳೆದಿದ್ದರು. ಆದರೆ, ಖಾಸಗಿ ವಿಧಿವಿಜ್ಞಾನ ಸಂಸ್ಥೆಯಲ್ಲಿ ಸಿಸಿಟಿವಿಯನ್ನು ವಿವರವಾಗಿ ಪರಿಶೀಲಿಸಿದಾಗ ಘಟನೆಯ ಅಸಲಿಯತ್ತು ಬಯಲಾಗಿದೆ.
ಅಂದು ಏನಾಯಿತು?ಫೆಬ್ರವರಿ 7ರಂದು ಬೆಳಗ್ಗೆ ಕಚೇರಿ ದೇವರಿಗೆ ಪೂಜೆ ನೆರವೇರಿಸಲಾಯಿತು. ಈ ವೇಳೆ ಉದ್ಯೋಗಿಯೊಬ್ಬ ದೀಪ ಹಿಡಿದು ನಿಂತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಬೆಳಗ್ಗೆ 10 ಗಂಟೆಗೆ ಕಚೇರಿ ತೆರೆದಾಗ ಪೂಜೆ ಮಾಡಲಾಗಿತ್ತು. ಕಚೇರಿಯ ಕೋಣೆಯೊಂದರಲ್ಲಿ ಯಾವುದೇ ಕಿಟಕಿಗಳು ಇಲ್ಲದಿದ್ದರಿಂದ ದೀಪ ರಾತ್ರಿಯವರೆಗೂ ಉರಿದಿದೆ. ಅಂದು ರಾತ್ರಿ 11:51ರ ಸುಮಾರಿಗೆ ಕಸ್ಟಮರ್​ ಸರ್ವೀಸ್​ ಕೋಣೆಯ ಟೇಬಲ್​ ಮೇಲೆ ಸಣ್ಣ ಇಲಿಯೊಂದು ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ:ಚಿತ್ರಮಂದಿರದಲ್ಲಿ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ಜೋಡಿ: ವೈರಲ್​ ವಿಡಿಯೋಗೆ ನೆಟ್ಟಿಗರ ತರಾಟೆ!

ವಿಡಿಯೋದಲ್ಲಿ ಕಾಣಿಸಿಕೊಳ್ಳುವ ಇಲಿ ಬಹುಶಃ ದೀಪದಲ್ಲಿನ ಉರಿಯುವ ಬತ್ತಿಯನ್ನು ಕಚ್ಚಿಕೊಂಡು ಹೋಗಿ ಸಿಬ್ಬಂದಿ ಕುಳಿತುಕೊಳ್ಳು ಕುರ್ಚಿಯ ಮೇಲೆ ಇಡುತ್ತದೆ. ಇದಾದ ಕೆಲವೇ ಸಮಯದಲ್ಲಿ ಕುರ್ಚಿ ಹೊತ್ತಿ ಉರಿಯುತ್ತದೆ. ಕಸ್ಟಮರ್​ ಕೇರ್​ ಕೋಣೆಯಲ್ಲಿ ಉರಿಯುವ ಬೆಂಕಿಯ ಕೆನ್ನಾಲಿಗೆ ಹೆಚ್ಚು ಪಸರಿಸುತ್ತಾ ಮೊದಲ ಮಹಡಿಯನ್ನು ಆವರಿಸುತ್ತದೆ. ಬಳಿಕ ಕಾರು ರಿಪೇರಿ ಮಾಡುವ ನೆಲಮಾಳಿಗೆವರೆಗೂ ಚಾಚುತ್ತದೆ. ಇದರಿಂದ ಕಾರುಗಳಿಗೆ ಹಾನಿಯಾಗುತ್ತದೆ. ಅಲ್ಲದೆ, ಕಚೇರಿಯಲ್ಲೂ ಹಲವು ವಸ್ತುಗಳು ಭಸ್ಮವಾಗಿ ಸುಮಾರು 1 ಕೋಟಿ ರೂ.ನಷ್ಟು ಆಸ್ತಿ ನಷ್ಟವಾಗುತ್ತದೆ.
ಇದನ್ನೂ ಓದಿ:ಪ್ರೀತಿಸಿದ ಜೋಡಿಗೆ ವಿವಾಹ ಮಾಡಿಸಿದ ಪೊಲೀಸರು; ಕನ್ಯಾದಾನ ಮಾಡಿದ್ದು ಸಬ್​ ಇನ್ಸ್​​ಪೆಕ್ಟರ್​​

ಘಟನೆ ನಡೆದ ಬೆನ್ನಲ್ಲೇ ತನಿಖೆ ನಡೆಸಿ ಇದು ಶಾರ್ಟ್​ ಸರ್ಕ್ಯೂಟ್​ನಿಂದ ಸಂಭವಿಸಿದ ಅನಾಹುತ ಎಂದು ಪ್ರಕರಣ ಮುಚ್ಚಿ ಹಾಕಿರಲಾಗುತ್ತದೆ. ಆದರೆ, ಮೂಲ ಕಾರಣ ಇಲಿ ಎಂದು ತಿಳಿದ ಬಳಿಕ ಇದೀಗ ಕಚೇರಿ ಅಥವಾ ಮನೆಯಲ್ಲಿ ಓಡಾಡುವ ಇಲಿಗೂ ಹೆದರಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಇಲಿಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ.(ಏಜೆನ್ಸೀಸ್​)


ಹೈದರಾಬಾದ್​ ಯುವತಿ ಜತೆ ಮದ್ವೆ: ಹನಿಮೂನ್​ ಬೆನ್ನಲ್ಲೇ ಹೊಸ ವರಸೆ ತೆಗೆದ ಬೆಂಗಳೂರು ಟೆಕ್ಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 14 =
Remember me
