ನವದೆಹಲಿ:ಮನೆಯ ಹೊರಗಡೆ ನಿಂತಿದ್ದ 28 ವರ್ಷದ ಯುವತಿಯೊಬ್ಬಳು ತೀವ್ರ ಚಾಕು ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡಿರುವ ಘಟನೆ ದೆಹಲಿಯ ರೊಹಿಣಿ ಏರಿಯಾದಲ್ಲಿ ಗುರುವಾರ ನಡೆದಿದೆ. ಈ ಭಯಾನಕ ಘಟನೆ ಹತ್ತಿರದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ಮಹಿಳೆಯನ್ನು ಸಫ್ದಾರ್​ಜಂಗ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವತಿಯ ಸ್ಥಿತಿ ಗಂಭೀರವಾಗಿದೆ. ನೆರೆಮನೆಯ ವ್ಯಕ್ತಿಯಿಂದ ಯುವತಿ ದಾಳಿಗೆ ಒಳಗಾಗಿದ್ದಾಳೆ. ಈ ಹಿಂದೆ ದಾಳಿ ಮಾಡಿದ ವ್ಯಕ್ತಿಯ ವಿರುದ್ಧ ಯುವತಿ ದೂರು ನೀಡಿದ್ದಳು ಎಂದು ತಿಳಿದುಬಂದಿದೆ.
ಆರೋಪಿಯನ್ನು ನರೇಶ್​ ಅಲಿಯಾಸ್​ ರಾಜು ಎಂದು ಗುರುತಿಸಲಾಗಿದೆ. ಸದ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಹಬಾದ್ ಡೈರಿ​ ಪೊಲೀಸ್​ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಆದರೆ, ದಾಳಿ ಹಿಂದಿನ ಉದ್ದೇಶ ಏನೆಂಬುದು ಈವರೆಗೂ ಖಚಿತವಾಗಿಲ್ಲ. ಆರೋಪಿ ನರೇಶ್​ ಹಾಗೂ ಸಂತ್ರಸ್ತ ಯುವತಿ ಎರಡು ಕುಟುಂಬದ ನಡುವೆ ಯಾವುದಾದರೂ ಘರ್ಷಣೆ ನಡೆದಿತ್ತ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಪೊಲೀಸ್​ ಮೂಲಗಳ ಪ್ರಕಾರ ಗುರುವಾರ ರಾತ್ರಿ 8.30ರ ಸುಮಾರಿಗೆ ವಾಯುವ್ಯ ದೆಹಲಿಯ ರೋಹಿಣಿ ಏರಿಯಾದ ಸೆಕ್ಟರ್​ 11ರಲ್ಲಿ ನಡೆದಿದೆ. ಪಾರ್ಕ್​ ಮಾಡಿದ್ದ ಎರಡು ಕಾರುಗಳ ನಡುವೆ ಯುವತಿಯನ್ನು ಅಡ್ಡಗಟ್ಟಿದ್ದ ಆರೋಪಿ ಅನೇಕ ಬಾರಿ ಚಾಕುವಿನಿಂದ ದಾಳಿ ಮಾಡಿದ್ದಾನೆ.(ಏಜೆನ್ಸೀಸ್​)
ದಶಕದಲ್ಲಿ ಶೇಕಡ 28 ಮಾರುಕಟ್ಟೆ ಪಾಲು ಹೆಚ್ಚಳ; ಭಾರತೀಯ ಐಟಿ ಕಂಪನಿಗಳ ಸಾಧನೆ

ಕನ್ನಡಿಗರ ಅಭಿಮಾನದ ಅಲೆಗೆ ಗೆಲುವು; ಕ್ಷಮೆ ಯಾಚಿಸಿದ ಗೂಗಲ್​

18 ಪುಟಗಳ ಸುದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿ ರೋಹಿಣಿ ಸಿಂಧೂರಿ ಆರೋಪಕ್ಕೆ ಶಿಲ್ಪಾನಾಗ್​ ತಿರುಗೇಟು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twenty + 7 =
Remember me
