ನವದೆಹಲಿ:ಭಾರತದ ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್​ ಬಿಪಿನ್​ ರಾವತ್​ ಅವರ ಅಂತ್ಯಸಂಸ್ಕಾರವು ಶುಕ್ರವಾರ ಸಂಜೆಯ ವೇಳೆಗೆ ದೆಹಲಿ ಕಂಟೋನ್​ಮೆಂಟಿನಲ್ಲಿರುವ ಬ್ರಾರ್​ ಸ್ಕ್ವೇರ್​ ಕ್ರೆಮೆಟೋರಿಯಂನಲ್ಲಿ ನಡೆಯಿತು. ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಜನರಲ್​ ರಾವತ್​ ಮತ್ತು ಅವರ ಪತ್ನಿ ಮಧುಲಿಕಾ ರಾವತ್​ ಅವರ ಅಂತ್ಯಕ್ರಿಯೆಯನ್ನು ಒಂದೇ ಜಾಗದಲ್ಲಿ ನೆರವೇರಿಸಲಾಯಿತು. ಅವರ ಚಿತೆಗೆ ಪುತ್ರಿಯರಾದ ಕ್ರಿತಿಕಾ ಮತ್ತು ತಾರಿಣಿ ಅಗ್ನಿಶಾಸ್ತ್ರ ಮಾಡಿದರು.
ಇಡೀ ದೇಶವೇ ಶೋಕದಲ್ಲಿ ಮುಳುಗಿ ಚೀಫ್​ ಆಫ್​ ಡಿಫೆನ್ಸ್​ ಸ್ಟಾಫ್​(ಸಿಡಿಎಸ್​) ಜನರಲ್​ ಬಿಪಿನ್​ ರಾವತ್​​ ಅವರಿಗೆ ಅಂತಿಮ ವಿದಾಯ ಸೂಚಿಸಿದೆ. ಇಂದು ಮಧ್ಯಾಹ್ನ ಅವರ ನಿವಾಸದಿಂದ ರಾವತ್​​ ದಂಪತಿಗಳ ಪಾರ್ಥಿವ ಶರೀರಗಳನ್ನು ಸಕಲ ಸರ್ಕಾರಿ ಗೌರವದೊಂದಿಗೆ, ಮೆರವಣಿಗೆಯಲ್ಲಿ ಬ್ರಾರ್​ ಸ್ಕ್ವೇರ್​​ ಸ್ಮಶಾನಕ್ಕೆ ತರಲಾಯಿತು. ಅಂತ್ಯಕ್ರಿಯೆಯ ಸಮಯಕ್ಕೆ ದೇಶದ ವೀರ ಸೇನಾನಿ ಜ.ರಾವತ್​ಗೆ​ ಸೇನೆಯ ಪರವಾಗಿ 17 ತೋಪುಗಳ ಸಲ್ಯೂಟ್​​(ಕುಶಾಲತೋಪು) ನೀಡಿ ಗೌರವ ಅರ್ಪಿಸಲಾಯಿತು.
#WATCH| Delhi:#CDSGeneralBipinRawatlaid to final rest with full military honours, 17-gun salute. His last rites were performed along with his wife Madhulika Rawat, who too lost her life in#TamilNaduChopperCrash.
Their daughters Kritika and Tarini performed their last rites.pic.twitter.com/uTECZlIhI0
— ANI (@ANI)December 10, 2021

ದಿವಂಗತ ರಾವತ್​ ಅವರ ಚಿತಾಭಸ್ಮವನ್ನು ಅವರ ಕುಟುಂಬಸ್ಥರು ಶನಿವಾರದಂದು ಹರಿದ್ವಾರಕ್ಕೆ ತೆಗೆದುಕೊಂಡು ಹೋಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶಾಲೆಯಲ್ಲಿ ಮೊಟ್ಟೆ ಕೊಡುವುದಕ್ಕೆ ವಿರೋಧ: ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದೇನು?

ಓ ವಿಧಿಯೇ ನೀನೆಷ್ಟು ಕ್ರೂರಿ… ಶವಪೆಟ್ಟಿಗೆಗೆ ಮುತ್ತಿಟ್ಟು ಕಣ್ಣೀರಿಟ್ಟ ಬ್ರಿಗೇಡಿಯರ್​ ಲಿಡ್ಡರ್​ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
