ಶ್ರೀನಗರ:ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಭಾರತ ನಿರಂತರವಾಗಿ ಸವಾಲುಗಳನ್ನು ಎದುರಿಸುತ್ತಿದ್ದು, ಈ ವರ್ಷ ಪಾಕಿಸ್ತಾನ ಸೇನೆ ಹದಿನೇಳು ವರ್ಷಗಳ ಅವಧಿಯಲ್ಲೇ ಗರಿಷ್ಠ ಮಟ್ಟದ ಕದನ ವಿರಾಮ ಉಲ್ಲಂಘನೆ ಮಾಡಿದೆ. ಮೊದಲ ಎಂಟು ತಿಂಗಳ ಅವಧಿಯಲ್ಲಿ ಜಮ್ಮು ಭಾಗದ ಎಲ್​ಒಸಿಯಲ್ಲಿ ಪಾಕಿಸ್ಥಾನ 3,186 ಬಾರಿ ಕದನ ವಿರಾಮ ಉಲ್ಲಂಘಿಸಿದೆ.
ರಕ್ಷಣಾ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಈ ವಿಷಯವನ್ನು ಸೋಮವಾರ ಸಂಸತ್ತಿಗೆ ತಿಳಿಸಿದ್ದಾರೆ. ಈ ಉಲ್ಲಂಘನೆಯು ಜನವರಿ 1ರಿಂದ ಸೆಪ್ಟೆಂಬರ್ 7ರ ನಡುವೆ ಆಗಿದೆ. ಇದಲ್ಲದೆ, 242 ಕ್ರಾಸ್ ಬಾರ್ಡರ್​ ಫೈರಿಂಗ್ ಘಟನೆಗಳೂ ಜಮ್ಮು ಭಾಗದ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಭಾಗದಿಂದ ವರದಿಯಾಗಿದೆ ಎಂದು ನಾಯಕ್ ತಿಳಿಸಿದ್ದಾರೆ.
ಇದನ್ನೂ ಓದಿ:ಚೆನ್ನೈ-ಮೈಸೂರ್ ಬುಲೆಟ್ ವೇಗ; ಏಳು ರೈಲು ಯೋಜನೆಗೆ 10 ಲಕ್ಷ ಕೋಟಿ ರೂ.ಹೂಡಿಕೆ
ಈ ವರ್ಷ ಸೆಪ್ಟೆಂಬರ್ 7ರ ವರೆಗಿನ ಅವಧಿಯಲ್ಲಿ ಆಗಿರುವ ಕದನ ವಿರಾಮ ಉಲ್ಲಂಘನೆ ಪ್ರಕರಣದಲ್ಲಿ 8 ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಬಾರ್ಡರ್ ಸೆಕ್ಯುರಿಟಿ ಫೋರ್ಸ್​ನ ಐವರು ಯೋಧರೂ ಗಾಯಗೊಂಡಿದ್ದಾರೆ. ಪ್ರತಿಸಲವೂ ಕದನವಿರಾಮ ಉಲ್ಲಂಘನೆಯಾದಾಗ ಭಾರತೀಯ ರಕ್ಷಣಾ ಪಡೆಯ ಯೋಧರು ಸರಿಯಾದ ಪ್ರತ್ಯುತ್ತರವನ್ನೇ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ವಿಶ್ವಸಂಸ್ಥೆಯ ಸಿಎಸ್​ಡಬ್ಲ್ಯು ಸದಸ್ಯತ್ವ ಗೆದ್ದ ಭಾರತ; ಚೀನಾಕ್ಕೆ ಭಾರಿ ಮುಖಭಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 2 =
Remember me
