ನವದೆಹಲಿ:ಕೃಷಿ ಕಾಯ್ದೆ ವಿರೋಧಿಸಿ ದೇಶದ ಹಲವೆಡೆ ನಡೆಯುತ್ತಿರುವ ರೈತ ಪ್ರತಿಭಟನೆಯ ಕಾವನ್ನು ತಗ್ಗಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ 3500 ಕೋಟಿ ರೂ. ನೆರವು ನೀಡುವುದಕ್ಕೆ ಸಮ್ಮತಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಐದು ಕೋಟಿ ಕಬ್ಬು ಬೆಳೆಗಾರರು ಮತ್ತು ಅವರನ್ನು ಅವಲಂಬಿಸಿರುವವರ ಜತೆಗೆ ಸಕ್ಕರೆ ಕಾರ್ಖಾನೆಗಳಲ್ಲಿ ದುಡಿಯುವ ಐದು ಲಕ್ಷ ಕಾರ್ವಿುಕರು ಮತ್ತು ಸಕ್ಕರೆಗೆ ಸಂಬಂಧಿಸಿದ ಇನ್ನಿತರ ಚಟುವಟಿಕೆಯಲ್ಲಿ ತೊಡಗಿರುವವರಿಗೂ ಪರೋಕ್ಷ ವಾಗಿ ಸಹಾಯ ಆಗಲಿದೆ. ಸಕ್ಕರೆ ಕಾರ್ಖಾನೆಗಳು ಬಾಕಿ ಪಾವತಿಸದ ಕಾರಣ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನೊಂದೆಡೆ ಕಳೆದ ಎರಡ್ಮೂರು ವರ್ಷಗಳಿಂದ ಸಕ್ಕರೆ ಉತ್ಪಾದನೆ ಹೆಚ್ಚಳವಾಗಿರುವ ಕಾರಣ ದರ ಇಲ್ಲದೆ ಕಾರ್ಖಾನೆಗಳಲ್ಲೇ ಸಕ್ಕರೆ ಉಳಿದಿದೆ. ಇಂಥ ವಿಷಮ ಸ್ಥಿತಿಯಲ್ಲಿ ನೆರವು ನೀಡಲು ಸರ್ಕಾರ ಮುಂದಾಗಿದೆ. ಈ ಮೂಲಕ ಸಕ್ಕರೆ ದಾಸ್ತಾನು ವಿಲೇವಾರಿಗೂ ಕ್ರಮ ವಹಿಸಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ತಿಳಿಸಿದ್ದಾರೆ. ಆಹಾರ ಸಚಿವಾಲಯ -ಠಿ; 3,600 ಕೋಟಿ ಸಬ್ಸಿಡಿಗೆ ಪ್ರಸ್ತಾವನೆ ಸಲ್ಲಿಸಿತ್ತಾದರೂ ಸಂಪುಟ ಇದನ್ನು 3,500 ಕೋಟಿ ರೂ.ಗೆ ಇಳಿಸಿದೆ.
ಈ ಸಹಾಯಧನ ಸಕ್ಕರೆ ಹೆಚ್ಚುವರಿ ದಾಸ್ತಾನು ವಿಲೇವಾರಿಗೆ ಸಬ್ಸಿಡಿ ರೂಪದ್ದಾಗಿದೆ. 2020-21ರ (ಅಕ್ಟೋಬರ್​ನಿಂದ ಸೆಪ್ಟೆಂಬರ್) ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ನಿಗದಿಪಡಿಸಿದ ಗರಿಷ್ಠ ಪ್ರಮಾಣ ರಫ್ತು ಕೋಟಾ 60 ಲಕ್ಷ ಟನ್ ಸಕ್ಕರೆಯ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಾಗಣೆಯ ವೆಚ್ಚ, ನಿರ್ವಹಣಾ ವೆಚ್ಚ, ಸಂಸ್ಕರಣಾ ವೆಚ್ಚ ನೀಡಲಾಗುತ್ತದೆ. ಆದರೆ ಇದು ಸಕ್ಕರೆ ಕಾರ್ಖಾನೆಗಳಿಗೆ ಸಂದಾಯವಾಗುವುದಿಲ್ಲ. ಕಬ್ಬು ಬೆಳೆಗಾರರ ಬ್ಯಾಂಕ್ ಉಳಿತಾಯ ಖಾತೆಗೆ ನೆರವಾಗಿ ಜಮೆ ಆಗಲಿದೆ.
ರೈತರ ವಾದವೇನು?:ಸಕ್ಕರೆ ರಫ್ತಿಗೆ ಉತ್ತೇಜನ ಸಿಕ್ಕರೂ ಸಬ್ಸಿಡಿ ಹಣ ಸುಲಭವಾಗಿ ಸಿಗುವುದಿಲ್ಲ. ಕಳೆದ ವರ್ಷವೂ ಇದೇ ರೀತಿ ವಿದೇಶಕ್ಕೆ ಸಕ್ಕರೆ ರಫ್ತು ಮಾಡಲಾಗಿತ್ತು. ಇನ್ನೂ ಸಬ್ಸಿಡಿ ಹಣ ಬಂದಿಲ್ಲ
ದೂರ ತರಂಗಾಂತರ ಗುಚ್ಛ (ಸ್ಪೆಕ್ಟ್ರಂ) ಹರಾಜು ಪ್ರಕ್ರಿಯೆಗೂ ಸಂಪುಟ ಅನುಮೋದನೆ ನೀಡಿದೆ. -ಠಿ; 3.92 ಲಕ್ಷ ಕೋಟಿ ಮೂಲ ದರದ ಒಟ್ಟಾರೆ 2,251 ಮೆಗಾಹರ್ಟ್ಸ್ ತರಂಗಾಂತರ ಹರಾಜಿಗೆ ಒಪ್ಪಿಗೆ ಸೂಚಿಸಿದೆ. ಈ ಹರಾಜಿನ ಮೂಲಕ 700, 800, 900, 1,800, 2,100, 2,300, 2,500 ಮೆಗಾಹರ್ಟ್ಸ್ ತರಂಗಾಂತರ ಬ್ಯಾಂಡ್​ಗಳನ್ನು 20 ವರ್ಷಗಳ ಅವಧಿಗೆ ಹಂಚಿಕೆ ಮಾಡಲಾಗುತ್ತದೆ. 3,300ರಿಂದ 3,600 ಮೆಗಾಹರ್ಟ್ಸ್​ನ ತರಂಗಾಂತರ (5ಜಿ) ಹರಾಜಿಗೆ ಸರ್ಕಾರ ನಿರ್ಧಾರ ಕೈಗೊಂಡಿಲ್ಲ.
3,500 ಕೋಟಿ ರೂ. ನೆರವು ಘೋಷಣೆ ಆದ ಈ ದಿನ ರೈತರಿಗೆ ವಿಶೇಷ ಸಂಭ್ರಮ ನೀಡಿದೆ. ಹಣ ರೈತರ ಖಾತೆಗೆ ಸಂದಾಯವಾಗಲಿದೆ. ಸಕ್ಕರೆ ಕಾರ್ಖಾನೆ ನೌಕರರಿಗೂ ಅನುಕೂಲ ಕಲ್ಪಿಸಲಿದೆ.
|ನರೇಂದ್ರ ಮೋದಿಪ್ರಧಾನಿ
ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಸಕ್ಕರೆ ಕಾರ್ಖಾನೆಗಳಿಗೆ ಸಿಹಿ ಸುದ್ದಿಯೇ ಹೊರತು ಕಬ್ಬು ಬೆಳೆಗಾರರಿಗಲ್ಲ. 3500 ಕೋಟಿ ರೂ.ಗಳಷ್ಟು ಮೊತ್ತದ ಬೋನಸ್ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಬೆಳೆಗಾರರ ರೈತರ ಬಾಕಿ ಹಣ ತೀರಿಸಲು ನೆರವಾಗುತ್ತದೆ. ಕರ್ನಾಟಕದ ಕಾರ್ಖಾನೆಗಳು ರಫ್ತು ಮಾಡುವ ಸಕ್ಕರೆಗೂ ಪ್ರೋತ್ಸಾಹಧನ ಸಿಗುತ್ತದೆ.
|ಕುರುಬೂರು ಶಾಂತಕುಮಾರ್ಅಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ ಮೈಸೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + fourteen =
Remember me
