ನವದೆಹಲಿ:ಹೊಸ ಸಂಸತ್​ನೊಳಗೆ ಇಬ್ಬರು ಅತಿಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರಿಂದ ವಿವರಣೆ ಕೇಳಿದ 146 ಸಂಸದರನ್ನು ಅಮಾನತುಗೊಳಿಸಿರುವುದು ನಮ್ಮ ಮಾತಿಗೆ ಮನ್ನಣೆ ನೀಡದಿರುವುದು ಮಾತ್ರವಲ್ಲ,ನಮ್ಮನ್ನು ಆಯ್ಕೆ ಮಾಡಿದ ಜನರ ಧ್ವನಿಯನ್ನು ಹತ್ತಿಕ್ಕುವ ಕ್ರಮವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಸ್ಪೀಕರ್​ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಅತ್ಯಾಚಾರವೆಸಗಿ ಜೈಲುಪಾಲಾದ ಬಿಜೆಪಿ ಶಾಸಕ ಈಗ ಅನರ್ಹ: ವಿಧಾನಸಭೆಯಿಂದ ಅನರ್ಹರಾದವರ ದೊಡ್ಡ ಪಟ್ಟಿಯೇ ಇದೆ…ಸಂಸದರ ಅಮಾನತು ಕ್ರಮವನ್ನು ವಿರೋಧಿಸಿ ‘ಇಂಡಿಯಾ’ ನಾಯಕರು ಶನಿವಾರ ದೆಹಲಿಯ ಜಂದರ್ ಮಂತರ್‌ನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಸಂಸದರು ಜನರ ಪ್ರತಿನಿಧಿಗಳು. ಅವರನ್ನು ಅಮಾನತುಪಡಿಸುವುದೆಂದರೆ ಜನರ ದನಿ ಅಡಗಿಸುವುದಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಂಸತ್​ನೊಳಗೆ ನುಸುಳಿದ್ದ ಇಬ್ಬರು ಬಣ್ಣದ ಸ್ಪ್ರೇ ಹಾಕಿ ಸಂಸದರನ್ನು ಭಯಪಡಿಸಲು ಯತ್ನಿಸಿದ್ದರು. ಇದು ವಿಷಯ ಚಿಕ್ಕದಿರಬಹುದು, ಆದರೆ ಮತ್ತೇನಾದರೂ ಅನಾಹುತ ಸೃಷ್ಟಿಸಿದ್ದರೆ ಯಾರು ಹೊಣೆ? ಈ ಭದ್ರತಾ ಲೋಪಕ್ಕೆ ವಿರುದ್ಧ ಮಾತನಾಡಿದರೆ, ಪ್ರಧಾನಿ, ಗೃಹಸಚಿವರ ಉತ್ತರಕ್ಕೆ ಒತ್ತಾಯಿಸಿದರೆ ಅಮಾನತುಪಡಿಸುತ್ತಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ, ಅದಕ್ಕಾಗಿಯೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಅವರು ಭಾರತದ ನಿರುದ್ಯೋಗ ಸಮಸ್ಯೆಗೆ ಇದು ನಿದರ್ಶನ ಎಂದು ಹೇಳಿದರು.
ಈ ಅತಿಕ್ರಮಣದ ವೇಳೆ ದೇಶಭಕ್ತರೆಂದು ಹೇಳಿಕೊಳ್ಳುವ ಬಿಜೆಪಿ ಸಂಸದರು ಸದನದಿಂದ ಓಡಿಹೋದರು. ಮಾಧ್ಯಮವನ್ನು ತಮ್ಮ ಹಿಡಿತಕ್ಕೆ ತಂದು ದೇಶದ ಆಸ್ತಿಯನ್ನು ಅದಾನಿ ಸಂಸ್ಥೆಗೆ ಧಾರೆ ಎರೆಯಬಹುದು ಎಂದು ಬಿಜೆಪಿ ಸರಕಾರ ಯೋಚಿಸುತ್ತಿದೆ. ಬಿಜೆಪಿ ಸರ್ಕಾರದೊಂದಿಗಿನ ನಮ್ಮ ಸಂಘರ್ಷ ಪ್ರೀತಿ ಮತ್ತು ದ್ವೇಷದ ನಡುವಿನ ಸಂಘರ್ಷವಾಗಿದೆ ಎಂದು ಅವರು ಹೇಳಿದರು.
ಸಂಸತ್ತಿನ ಭದ್ರತೆಯ ಕೊರತೆಯ ಬಗ್ಗೆ ಗೃಹ ಸಚಿವ ಅಮಿತ್ ಶಾ ಸೂಕ್ತ ವಿವರಣೆ ನೀಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದರು. 146 ಸಂಸದರನ್ನು ಅಮಾನತು ಮಾಡಲಾಗಿದೆ. ಸಂಸತ್ತಿನ ಇತಿಹಾಸದಲ್ಲಿ ಹೆಚ್ಚು ಸಂಸದರನ್ನು ಅಮಾನತುಗೊಳಿಸಿರುವುದು ಇದೇ ಮೊದಲು.
ಸಿಎಂ ನೀಡಿದ 50ಸಾವಿರ ರೂ. ಚೆಕ್​ ಎನ್​ಕ್ಯಾಶ್​ ಮಾಡಿಕೊಳ್ಳಲ್ಲ: ಸುರಂಗದಲ್ಲಿ ಕಾರ್ಮಿಕರನ್ನು ರಕ್ಷಿಸಿದ ರ್ಯಾಟ್​ ಹೋಲ್​ ಮೈನರ್ಸ್ ತಕರಾರೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
