ನವದೆಹಲಿ:ಪ್ರಶ್ನೆಪತ್ರಿಕೆ ಸೋರಿಕೆ ತಡೆ ಕಾನೂನಿನ ನಿಯಮಗಳ ಬಗ್ಗೆ ಸೋಮವಾರ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ, ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ ಸಹಿತ ಇತರ ಹಲವು ವಿಚಾರಗಳಿಗೆ ಸಂಬಂಧಿಸಿ ನಿಯಮ, ಮಾನದಂಡ ಹಾಗೂ ಮಾರ್ಗಸೂಚಿಗಳನ್ನು (ಎಸ್​ಒಪಿ) ರೂಪಿಸುವಂತೆ ರಾಷ್ಟ್ರೀಯ ನೇಮಕಾತಿ ಸಂಸ್ಥೆಗೆ (ಎನ್​ಆರ್​ಎ) ನಿರ್ದೇಶಿಸಿದೆ.
ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ಮಾರ್ಗಗಳ ತಡೆ) ಕಾನೂನು, 2024ನ್ನು ಕಾರ್ಯಗತಗೊಳಿಸಿದ ಕೆಲವೇ ದಿನಗಳಲ್ಲಿ ನಿಯಮಗಳ ಅಧಿಸೂಚನೆ ಹೊರಡಿಸಲಾಗಿದೆ. ನಾನಾ ಸಾರ್ವಜನಿಕ ಸಂಸ್ಥೆಗಳು ನಡೆಸುವ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯುವ ಕುರಿತ ರಾಷ್ಟ್ರ ಮಟ್ಟದ ಪ್ರಪ್ರಥಮ ಕಾನೂನು ಇದಾಗಿದೆ. ಈ ಕುರಿತ ಮಸೂದೆಯನ್ನು ರಾಜ್ಯಸಭೆ ಫೆಬ್ರವರಿ 9 ಹಾಗೂ ಲೋಕಸಭೆ ಫೆಬ್ರವರಿ 6ರಂದು ಅಂಗೀಕರಿಸಿದ್ದವು. ರಾಷ್ಟ್ರಪತಿ ದ್ರೌಪದಿ ಮುಮು ಫೆಬ್ರವರಿ 12ರಂದು ಅನುಮೋದನೆ ನೀಡುವುದರೊಂದಿಗೆ ಅದಕ್ಕೆ ಕಾನೂನು ಸ್ವರೂಪ ಬಂದಿತ್ತು.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ), ಸಿಬ್ಬಂದಿ ಆಯ್ಕೆ ಆಯೋಗ (ಎಸ್​ಎಸ್​ಸಿ), ರೈಲ್ವೆ, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್​ಟಿಎ) ಮುಂತಾದ ಸಂಸ್ಥೆಗಳು ನಡೆಸುವ ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯುವುದು ಈ ಕಾಯಿದೆಯ ಗುರಿಯಾಗಿದೆ.
ಜೈಲು ಶಿಕ್ಷೆಗೆ ಅವಕಾಶ:ವಂಚನೆಯನ್ನು ಮಟ್ಟ ಹಾಕುವ ಉದ್ದೇಶದಿಂದ ಕನಿಷ್ಠ ಮೂರರಿಂದ ಐದು ವರ್ಷ ಕಾರಾಗೃಹ ವಾಸ ಮತ್ತುಮೋಸದ ಸಂಘಟಿತ ಅಪರಾಧಗಳಲ್ಲಿ ತೊಡಗಿದವರಿಗೆ ಐದರಿಂದ 10 ವರ್ಷ ಸೆರೆವಾಸ ಮತ್ತು ಕನಿಷ್ಠ ಒಂದು ಕೋಟಿ ರೂಪಾಯಿ ದಂಡ ವಿಧಿಸಲು ಈ ಕಾನೂನಿನಲ್ಲಿ ಅವಕಾಶವಿದೆ.
5 ಕೇಸ್ ಕೈಗೆತ್ತಿಕೊಂಡ ಸಿಬಿಐ: ವೈದ್ಯಕೀಯ ಪ್ರವೇಶದ ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದಿದೆಯೆನ್ನಲಾದ ಅಕ್ರಮಗಳ ಬಗ್ಗೆ ಗುಜರಾತ್, ರಾಜಸ್ಥಾನ ಮತ್ತ ಬಿಹಾರ ಪೊಲೀಸರು ನಡೆಸುತ್ತಿರುವ ಐದು ಹೊಸ ಕೇಸ್​ಗಳ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಸೋಮವಾರ ಕೈಗೆತ್ತಿಕೊಂಡಿದೆ. ಗುಜರಾತ್ ಮತ್ತು ಬಿಹಾರದ ತಲಾ ಒಂದು ಪ್ರಕರಣ ಹಾಗೂ ರಾಜಸ್ಥಾನದ ಮೂರು ಪ್ರಕರಣಗಳನ್ನು ಸಿಬಿಐ ತನ್ನದೇ ಎಫ್​ಐಆರ್ ಆಗಿ ಮರುನೋಂದಾಯಿಸಿದೆ. ಮಹಾರಾಷ್ಟ್ರದ ಲಾತೂರ್​ನ ಒಂದು ಪ್ರಕರಣದ ತನಿಖೆಯನ್ನು ಕೂಡ ಅದು ನಡೆಸಲಿದೆ. ಬಿಹಾರದ ಪ್ರಕರಣವನ್ನು ಹೊರತುಪಡಿಸಿದರೆ ಉಳಿದ ನಾಲ್ಕು ಪ್ರಕರಣಗಳು ಸೋಗು ಹಾಕಿದ್ದು (ಅಂದರೆ ಇತರರ ಬದಲಿಗೆ ಪರೀಕ್ಷೆಗೆ ಕೂತಿದ್ದು), ಸ್ಥಳೀಯ ಅಧಿಕಾರಿಗಳು, ಪರಿವೀಕ್ಷಕರು ಮತ್ತು ಅಭ್ಯರ್ಥಿಗಳು ಮೋಸ ಮಾಡಿದ ಪ್ರತ್ಯೇಕ ಪ್ರಕರಣಗಳಾಗಿವೆ. ಇದರೊಂದಿಗೆ ಸಿಬಿಐ ತನಿಖೆಯ ಒಟ್ಟು ಪ್ರಕರಣಗಳು ಆರಕ್ಕೇರಿವೆ.
4 ಇಂಜಿನಿಯರ್​ಗಳ ಪಾತ್ರ:ಲಖನೌ: ನೀಟ್ ಪೇಪರ್ ಸೋರಿಕೆ ವಿವಾದದ ನಡುವೆಯೇ ಉತ್ತರ ಪ್ರದೇಶದಲ್ಲಿ ನೇಮಕಾತಿ ಪರೀಕ್ಷೆಯೊಂದರಲ್ಲಿ ನಡೆದಿರುವ ಭಾರಿ ಅವ್ಯವಹಾರದ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆಯಿಂದ ವ್ಯಾಪಕ ಪಿತೂರಿ ಮತ್ತು ಯೋಜನೆ ಬಹಿರಂಗಗೊಂಡಿದೆ. ಉತ್ತರ ಪ್ರದೇಶದ ರಿವ್ಯೂ ಅಧಿಕಾರಿಗಳು ಮತ್ತು ಸಹಾಯಕ ರಿವ್ಯೂ ಅಧಿಕಾರಿಗಳ ಹುದ್ದೆಗಳಿಗೆ ಫೆಬ್ರವರಿ 11ರಂದು ಪರೀಕ್ಷೆ ನಡೆದಿದ್ದು ಪೇಪರ್ ಲೀಕ್ ಆರೋಪಗಳ ಹಿನ್ನೆಲೆಯಲ್ಲಿ ಅದನ್ನು ರದ್ದು ಪಡಿಸಲಾಗಿದೆ. ಪ್ರಶ್ನೆಪತ್ರಿಕೆ ಮುದ್ರಿಸುವ ಭೋಪಾಲ್​ನ ಮುದ್ರಣಾಲಯದಿಂದ ಅದು ಸೋರಿಕೆಯಾಗುವಲ್ಲಿ ಇಂಜಿನಿಯರ್ ಪದವೀಧರರಾದ ರಾಜೀವ್ ನಯನ್ ಮಿಶ್ರಾ, ಸುನಿಲ್ ರಘುವಂಶಿ, ವಿಶಾಲ್ ದುಬೆ ಮತ್ತು ಸುಭಾಷ್ ಪ್ರಕ್ಷ್ ಪಾತ್ರ ಮುಖ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 3 =
Remember me
