ನವದೆಹಲಿ:ಒಮಿಕ್ರಾನ್ ಪ್ರಭೇದ ಸಹಿತ ಒಟ್ಟಾರೆ ಕರೊನಾ ಪ್ರಕರಣ ಹೆಚ್ಚಳ ಕಾಣುತ್ತಿರುವ ಕರ್ನಾಟಕ ಸಹಿತ 10 ರಾಜ್ಯಗಳಿಗೆ ತಜ್ಞರ ತಂಡಗಳನ್ನು ಕಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪಂಜಾಬ್, ಉತ್ತರ ಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪ.ಬಂಗಾಳ, ಮಿಜೋರಂ, ಬಿಹಾರ ಮತ್ತು ಜಾರ್ಖಂಡ್​ಗೆ ಕೇಂದ್ರ ತಂಡಗಳು ಭೇಟಿ ನೀಡಲಿವೆ. ಈ ಪೈಕಿ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ.
ಕೇಂದ್ರ ತಂಡಗಳ ಸದಸ್ಯರು ಪ್ರತಿ ರಾಜ್ಯದಲ್ಲಿ ಐದು ದಿನ ಇದ್ದು ಕರೊನಾ ಪತ್ತೆ ಪರೀಕ್ಷೆ, ನಿಗಾ ಸುಧಾರಿಸಲು ಹಾಗೂ ನಿಯಂತ್ರಣ ನಿಯಮಾವಳಿಗಳ ಜಾರಿಗೆ ಆಯಾ ರಾಜ್ಯಗಳ ಆರೋಗ್ಯ ಇಲಾಖೆಗಳ ಅಧಿಕಾರಿಗಳಿಗೆ ನೆರವು ನೀಡಲಿದ್ದಾರೆ. ಪ್ರತಿ ರಾಜ್ಯದ ಲಸಿಕೆ ಪ್ರಮಾಣ ಹಾಗೂ ಆಸ್ಪತ್ರೆಗಳ ಮೂಲಸೌಕರ್ಯ ಪರಿಸ್ಥಿತಿಯನ್ನೂ ಅವರು ಪರಿಶೀಲಿಸಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೊರಡಿಸಿರುವ ಆದೇಶ ತಿಳಿಸಿದೆ. ಜಗತ್ತಿನಲ್ಲಿ ಕಳವಳಕ್ಕೆ ಕಾರಣವಾಗಿರುವ ಒಮಿಕ್ರಾನ್ ತಳಿಯ ಪತ್ತೆಗಾಗಿ ಸ್ಯಾಂಪಲ್​ಗಳ ಜಿನೋಮ್ ಸೀಕ್ವೆನ್ಸಿಂಗ್​ಗೂ ತಜ್ಞರ ತಂಡ ರಾಜ್ಯಗಳಿಗೆ ಮಾರ್ಗದರ್ಶನ ನೀಡಲಿದೆ.
ಸರ್ಕಾರಿ ಸೌಲಭ್ಯಕ್ಕೆ ವ್ಯಾಕ್ಸಿನ್ ಕಡ್ಡಾಯ:ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಸೌಲಭ್ಯ ಪಡೆಯಬೇಕಾದರೆ ಕರೊನಾ ಲಸಿಕೆ ಪಡೆಯುವುದನ್ನು ರಾಜಸ್ಥಾನ ಕಡ್ಡಾಯಗೊಳಿಸಿದೆ. ಮುಂದಿನ ವರ್ಷ ಫೆ.1ರಿಂದ ಈ ನಿಯಮ ಜಾರಿಗೆ ಬರಲಿದ್ದು ಲಸಿಕೆ ಪಡೆಯದವರನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಡಲಾಗುವುದೆಂದು ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹೇಳಿದ್ದಾರೆ.
ಚೀನಾದಲ್ಲಿ ದೈನಿಕ ಕೇಸ್ ಏರಿಕೆ:ಚೀನಾದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಕರೊನಾದ ದೈನಿಕ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಒಮಿಕ್ರಾನ್ ರೂಪಾಂತರಿಯ ಭೀತಿಯ ನಡುವೆ ದಾಖಲಾಗಿರುವ ಈ ವಿದ್ಯಮಾನ ಕಳವಳ ಹೆಚ್ಚಲು ಕಾರಣವಾಗಿದೆ. ಶುಕ್ರವಾರ 140 ಪ್ರಕರಣಗಳು ದೃಢಪಟ್ಟಿದ್ದು 87 ಸ್ಥಳೀಯವಾಗಿ ಹರಡಿದ ಕೇಸ್​ಗಳಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಅದಕ್ಕೂ ಒಂದು ದಿನ ಮೊದಲು 55 ಪ್ರಕರಣ ದಾಖಲಾಗಿತ್ತು. ಬಹುತೇಕ ಪ್ರಕರಣಗಳು, ಈಗ ಲಾಕ್​ಡೌನ್​ಗೆ ಒಳಗಾಗಿರುವ ಕ್ಸಿಯಾನ್ ನಗರದಲ್ಲಿ ಪತ್ತೆಯಾಗಿವೆ.
ಭಾರತದಲ್ಲಿ ಶೀಘ್ರವೇ ಒಮಿಕ್ರಾನ್ ಅಬ್ಬರ:ಭಾರತದಲ್ಲಿ ಶೀಘ್ರವೇ ಒಮಿಕ್ರಾನ್ ತಳಿಯ ಸೋಂಕು ವಿಪರೀತ ಹೆಚ್ಚಾಗಲಿದೆ. ಆದರೆ ಅದು ಮೊದಲಿಗೆ ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ ಇರುವಂತೆ ಸೌಮ್ಯ ಪ್ರಮಾಣದಲ್ಲಿರಲಿದೆ ಎಂದು ಈ ಹೊಸ ರೂಪಾಂತರಿಯನ್ನು ಮೊದಲಿಗೆ ಗುರುತಿಸಿದ ವೈದ್ಯ ಏಂಜಲಿಕ್ ಕೊಯೆಟ್ಝೀ ಹೇಳಿದ್ದಾರೆ. ಈಗಿರುವ ಲಸಿಕೆಗಳೇ ಒಮಿಕ್ರಾನ್​ನಿಂದ ರಕ್ಷಣೆ ನೀಡಲು ಶಕ್ತ ಎಂದು ದಕ್ಷಿಣ ಆಫ್ರಿಕಾ ವೈದ್ಯಕೀಯ ಸಂಘದ ಅಧ್ಯಕ್ಷರೂ ಆಗಿರುವ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಮಿಕ್ರಾನ್ ತಳಿಯ ವೈರಸ್​ನ ಕರೊನಾ ಸೋಂಕಿನಲ್ಲಿ ಮುಂದಿನ ಜನವರಿ ಅಂತ್ಯದೊಳಗೆ ಭಾರಿ ಜಿಗಿತ ಉಂಟಾಗಲಿದೆ ಎಂದು ಹೈದರಾಬಾದ್​ನ ಕಿಮ್್ಸ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸಂಬಿತ್ ಅವರೂ ಹೇಳಿದ್ದಾರೆ. ಆದರೆ, ಅದರಿಂದ ಗಂಭೀರ ಸ್ಥಿತಿ ಉಂಟಾಗುವ ರೋಗಿಗಳ ಸಂಖ್ಯೆ ಕಡಿಮೆಯಿರುವ ಸಾಧ್ಯತೆಯಿದೆ ಎಂದಿದ್ದಾರೆ. ‘ಭಾರತ ಜಗತ್ತಿನ ಇತರ ಭಾಗಗಳಿಂದ ಭಿನ್ನವೇನೂ ಅಲ್ಲ. ಜಗತ್ತು ಎದುರಿಸುತ್ತಿರುವುದನ್ನು ದೇಶವೂ ಎದುರಿಸಲಿದೆ’ ಎಂದು ಸಂಬಿತ್ ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four − 1 =
Remember me
